ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸ್ಥಾನಕ್ಕೆ ಕರ್ನಾಟಕದ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಹೆಸರು ಶಿಫಾರಸು

ನವದೆಹಲಿ: ಸುಪ್ರೀಂ ಕೋರ್ಟ್​​ ನ್ಯಾಯಮೂರ್ತಿ ಸ್ಥಾನಕ್ಕೆ ಕರ್ನಾಟಕದ ಮಹಿಳಾ ನ್ಯಾಯಮೂರ್ತಿ ಬಿ.ವಿ. ನಾಗರತ್ನ (Justice B.V. Nagarathna) ಅವರ ಹೆಸರನ್ನು ಹೆಸರನ್ನು ಶಿಫಾರಸು ಮಾಡಲಾಗಿದೆ.
ಸುಪ್ರೀಂ ಕೋರ್ಟ್​​ನ ಮುಖ್ಯ ನ್ಯಾಯಾಧೀಶರಾದ ಚೀಫ್​ ಜಸ್ಟೀಸ್​ ಎನ್​ ವಿ ರಮಣ ನೇತೃತ್ವದ ಸುಪ್ರೀಂ ಕೋರ್ಟ್​ ಕೊಲಿಜಿಯಂ ಬಿ.ವಿ. ನಾಗರತ್ನ ಅವರ ಹೆಸರನ್ನು ಶಿಫಾರಸು ಮಾಡಿದೆ.
ಜಸ್ಟೀಸ್​ ನಾಗರತ್ನ ಅವರ ತಂದೆ ಇ ಎಸ್​ ವೆಂಕಟರಾಮಯ್ಯ ಅವರು 1989ರಲ್ಲಿ ಅರು ತಿಂಗಳ ಕಾಲ ಸುಪ್ರೀ ಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿದ್ದರು. ಒಂದು ವೇಳೆ ಈಗ ನಾಗರತ್ನ ಅವರ ಹೆಸರು ಸುಪ್ರೀಂ ಕೋರ್ಟ್​ಗೆ ನೇಮಕಗೊಂಡರೆ 2027ರಲ್ಲಿ ಒಂದು ತಿಂಗಳ ಅವಧಿಗೆ ಮಹಿಳಾ ಚೀಫ್​ ಜಸ್ಟೀಸ್​ ಆಫ್​ ಇಂಡಿಯಾ ಆಗಿ ಸೇವೆ ಸಲ್ಲಿಸುವ ಸಾಧ್ಯತೆಯಿದೆ.
ಕರ್ನಾಟಕ ಹೈಕೋರ್ಟ್ ಹಾಲಿ ಮುಖ್ಯ ನ್ಯಾಯಮೂರ್ತಿ ಎ.ಎಸ್​. ಒಕಾ ಸುಪ್ರೀಂಕೋರ್ಟ್​ಗೆ ಪದೋನ್ನತಿ ಪಡೆಯಲಿದ್ದು, ಅವರ ಹೆಸರನ್ನು ಸಹ ಶಿಫಾರಸು ಮಾಡಲಾಗಿದೆ. ಸುಪ್ರೀಂ ಕೋರ್ಟ್​ ಕೊಲಿಜಿಯಂನಿಂದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ ವಿವಿಧ ರಾಜ್ಯಗಳ 9 ನ್ಯಾಯಮೂರ್ತಿಗಳ ಹೆಸರುಗಳನ್ನೂ ಶಿಫಾರಸು ಮಾಡಲಾಗಿದೆ.

ಪ್ರಮುಖ ಸುದ್ದಿ :-   ಹುಬ್ಬಳ್ಳಿ: ಸ್ಕೂಟಿಯಲ್ಲಿ ಹೋಗುವಾಗ ಗಾಳಿಪಟದ ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ಮಹಿಳೆ ಸಾವು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement