ಭಾರತದಲ್ಲಿ ನಿನ್ನೆಗಿಂತ ಶೇ.40ರಷ್ಟು ಹೆಚ್ಚು ಕೋವಿಡ್‌ ಪ್ರಕರಣ ದಾಖಲು

ನವದೆಹಲಿ: ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ (ಬುಧವಾರ) 35,178 ಹೊಸ ಕೋವಿಡ್ ಸೋಂಕು ಪ್ರಕರಣ ಪತ್ತೆಯಾಗಿದ್ದು, 440 ಮಂದಿ ಮೃತಪಟ್ಟಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ (ಆಗಸ್ಟ್ 18) ಬಿಡುಗಡೆ ಮಾಡಿರುವ ಅಂಕಿ ಅಂಶದಲ್ಲಿ ತಿಳಿಸಿದೆ.
ಕಳೆದ 24ಗಂಟೆಗಳಲ್ಲಿ 37,169 ಮಂದಿ ಕೋವಿಡ್ ನಿಂದ ಚೇತರಿಸಿಕೊಂಡಿದ್ದಾರೆ. ಕಳೆದ 24ಗಂಟೆಗಳಲ್ಲಿ 2,431 ಸಕ್ರಿಯ ಕೋವಿಡ್ ಪ್ರಕರಣಗಳು ಇಳಿಕೆಯಾಗಿದೆ. ಈಗ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 3,67,415ಕ್ಕೆ ಇಳಿಕೆಯಾಗಿದೆ. ದೇಶದಲ್ಲಿ ಕೋವಿಡ್ ನಿಂದ ಈವರೆಗೆ 4,32,519 ಮಂದಿ ಮೃತಪಟ್ಟಿದ್ದಾರೆ
ಮಂಗಳವಾರ 25,166 ಕೋವಿಡ್ ಪ್ರಕರಣ ಪತ್ತೆಯಾಗಿತ್ತು. ಬುಧವಾರ 35,178 ಕೋವಿಡ್ ಪ್ರಕರಣ ವರದಿಯಾಗುವ ಮೂಲಕ 24 ಗಂಟೆಗಳ ಅವಧಿಯಲ್ಲಿ ಶೇ.40ರಷ್ಟು ಅಧಿಕ ಪ್ರಕರಣಗಳು ಕಂಡುಬಂದಿದೆ.
ಗರಿಷ್ಠ ಪ್ರಕರಣಗಳನ್ನು ದಾಖಲಿಸಿರುವ ಮೊದಲ ಐದು ರಾಜ್ಯಗಳಲ್ಲಿ ಕೇರಳ -21,613 ಪ್ರಕರಣಗಳು, ಮಹಾರಾಷ್ಟ್ರ -4,408 ಪ್ರಕರಣಗಳು, ತಮಿಳುನಾಡು -1,804 ಪ್ರಕರಣಗಳು, ಕರ್ನಾಟಕ -1,298 ಪ್ರಕರಣಗಳು ಮತ್ತು ಆಂಧ್ರಪ್ರದೇಶ- 1,063 ಪ್ರಕರಣಗಳು ವರದಿಯಾಗಿವೆ.
85.81 ರಷ್ಟು ಹೊಸ ಕೋವಿಡ್ -19 ಪ್ರಕರಣಗಳು ಈ ಐದು ರಾಜ್ಯಗಳಿಂದ ವರದಿಯಾಗಿದ್ದು, 61.44 ರಷ್ಟು ಹೊಸ ಪ್ರಕರಣಗಳಿಗೆ ಕೇರಳ ಮಾತ್ರ ಕಾರಣವಾಗಿದೆ.
ಕೋವಿಡ್‌ ವೈರಲ್ ಸೋಂಕಿನಿಂದಾಗಿ ಗರಿಷ್ಠ ಸಾವುಗಳು ಕೇರಳದಲ್ಲಿ ವರದಿಯಾಗಿವೆ (127), ನಂತರದಲ್ಲಿ ಮಹಾರಾಷ್ಟ್ರದಲ್ಲಿ 116 ದೈನಂದಿನ ಸಾವುಗಳು ಸಂಭವಿಸಿವೆ. ಭಾರತದ ಚೇತರಿಕೆಯ ಪ್ರಮಾಣವು ಶೇಕಡಾ 97.51 ಕ್ಕೆ ತಲುಪಿದೆ.

ಪ್ರಮುಖ ಸುದ್ದಿ :-   ಪವಿತ್ರಾ ಜಯರಾಮ ಸಾವಿನ ಬೆನ್ನಲ್ಲೇ ಗೆಳೆಯ-ಕಿರುತೆರೆ ನಟ ಚಂದು ಆತ್ಮಹತ್ಯೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement