1990ರ ಅಂತರ್ಯುದ್ಧದಲ್ಲಿ ತನ್ನ ವಿರುದ್ಧ ಹೋರಾಡಿದ್ದ ಶಿಯಾ ನಾಯಕನ ಪ್ರತಿಮೆ ಧ್ವಂಸಗೊಳಿಸಿದ ತಾಲಿಬಾನ್

ಕಾಬೂಲ್: 1990ರ ಅಫ್ಘಾನಿಸ್ತಾನದ ಅಂತರ್ಯುದ್ಧದ ಸಮಯದಲ್ಲಿ ತಮ್ಮ ವಿರುದ್ಧ ಹೋರಾಡಿದ ಶಿಯಾ ಮಿಲಿಟಿಯ ನಾಯಕನ ಪ್ರತಿಮೆಯನ್ನು ತಾಲಿಬಾನ್ ಸ್ಫೋಟಿಸಿರುವ ಫೋಟೋಗಳು ಬುಧವಾರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
1996 ರಲ್ಲಿ ತಾಲಿಬಾನ್ ನಿಂದ ಕೊಲ್ಲಲ್ಪಟ್ಟ ಮಿಲಿಟಿಯ ನಾಯಕ ಅಬ್ದುಲ್ ಅಲಿ ಮಜಾರಿ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದೆ.
ಮಜಾರಿ ಅಫ್ಘಾನಿಸ್ತಾನದ ಜನಾಂಗೀಯ ಹಜಾರ ಅಲ್ಪಸಂಖ್ಯಾತರ ಚಾಂಪಿಯನ್ ಆಗಿದ್ದರು. ಸುನ್ನಿ ತಾಲಿಬಾನ್ ನ ಹಿಂದಿನ ಆಡಳಿತದಲ್ಲಿ ಶಿಯಾಗಳಿಗೆ ಕಿರುಕುಳ ನೀಡಲಾಗಿತ್ತು.
ಈ ಪ್ರತಿಮೆ ಮಧ್ಯ ಬಾಮ್ಯಾನ್ ಪ್ರಾಂತ್ಯದಲ್ಲಿದ್ದು, ಇಲ್ಲಿ ಕುಖ್ಯಾತವಾಗಿದ್ದ ತಾಲಿಬಾನ್ 1,500 ವರ್ಷಗಳಷ್ಟು ಹಳೆಯದಾದ ಎರಡು ಬೃಹತ್ ಬುದ್ಧನ ಪ್ರತಿಮೆಗಳನ್ನು ಧ್ವಂಸಗೊಳಿಸಿದೆ. ಬುದ್ಧ ಮೂರ್ತಿ ಇಸ್ಲಾಂನ ವಿಗ್ರಹಾರಾಧನೆಯ ಮೇಲಿನ ನಿಷೇಧವನ್ನು ಉಲ್ಲಂಘಿಸಿದೆ ಎಂದು ತಾಲಿಬಾನ್ ಹೇಳಿಕೊಂಡಿದೆ.
ನಾವು ಎಲ್ಲರನ್ನೂ ಕ್ಷಮಿಸಿದ್ದೇವೆ ಯಾರ ವಿರುದ್ಧವೂ ಪ್ರತೀಕಾರ ಕೈಗೊಳ್ಳುವುದಿಲ್ಲ. ನಾಗರೀಕರ ಮನೆಗಳ ಮೇಲೆ ಯಾವುದೇ ದಾಳಿ, ಶೋಧ ನಡೆಸುವುದಿಲ್ಲ ಎಂದು ತಾಲಿಬಾನ್ ಸ್ಪಷ್ಟಪಡಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement