ರೆಸಾರ್ಟ್‌, ಹೋಮ್ ಸ್ಟೇ, ಹೊಟೇಲ್ ಮಾಲಕರ ಸಭೆ: ಸರ್ಕಾರದ ಮಾರ್ಗಸೂಚಿ, ಸಮುದ್ರದ ಎಚ್ಚರಿಕೆ ಫಲಕ ಹಾಕಲು ಸೂಚನೆ

ಕುಮಟಾ; ನಾಗರಿಕರ ಹಿತರಕ್ಷಣೆಗಾಗಿ ಕುಮಟಾ ಪೊಲೀಸ್ ಇಲಾಖೆಯು ಶನಿವಾರ ಬಾಡದಲ್ಲಿ ರೆಸಾರ್ಟ್‌, ಹೋಮ್ ಸ್ಟೇ ಮತ್ತು ಹೊಟೇಲ್ ಮಾಲಕರೊಂದಿಗೆ ಸಭೆ ನಡೆಸಿತು.
ನಾಗರಿಕರು ಮತ್ತು ಪ್ರವಾಸಿಗರ ರಕ್ಷಣೆ ಮಹತ್ವವಾಗಿದೆ. ಪ್ರವಾಸಿಗರಿಗೆ ವಸತಿಗಾಗಿ ಅಥವಾ ಇನ್ನಾವುದೇ ರೀತಿಯಿಂದ ವಾಣಿಜ್ಯ ಉದ್ದೇಶ ಹೊಂದಿರುವಂತವರು ಕಡ್ಡಾಯವಾಗಿ ಪರವಾನಗಿ ಹೊಂದಿರಬೇಕು. ಕಾನೂನು ಬಾಹಿರ ಚಟುವಟಿಗೆಗೆ ಅವಕಾಶ ನೀಡಬಾರದು. ವಿದೇಶಿ ಪ್ರವಾಸಿಗರಿಗೆ ಅವಕಾಶ ನೀಡುವಾಗ ಅವರ ಪಾಸಪೋರ್ಟ್‌,ವೀಸಾ ಇತ್ಯಾದಿ ಪರಿಶೀಲಿಸಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ ನಂತರವೇ ಅಂಥವರಿಗೆ ಉಳಿಯಲು ಅವಕಾಶ ನೀಡ ಬೇಕು ಎಂದು ಕುಮಟಾ ಪಿ.ಎಸ್.ಐ ಆನಂದ ಮೂರ್ತಿ ಸಭೆಯಲ್ಲಿ ಮಾಹಿತಿ ನೀಡಿ ಸಂಬಂದಿಸಿದ ಮಾಲಿಕರಿಗೆ ನೋಟಿಸ್ ನೀಡಿ ಅನುಸರಿಸುವ ಸರಕಾರದ ಮಾರ್ಗ ಸೂಚಿ ಕಾನೂನಿನ ಬಗ್ಗೆ ತಿಳಿಸಿದರು.
ರೇಸಾರ್ಟ,ಹೋಮ್ ಸ್ಟೇ,ಹೋಟೆಲ್ ಇತ್ಯಾದಿ ವಸತಿ ಗ್ರಹಗಳಲ್ಲಿ ಮಾದಕ ದೃವ್ಯ, ಪರವಾನಗಿ ರಹಿತ ಮದ್ಯ ನೀಡುವುದು, ನಿದ್ರಾಜನಕ ಮಾತ್ರೆ ಮಾರಾಟ ,ಜೂಜಾಟ ಇತ್ಯಾದಿ ನಿಷೇಧಿಸಲಾಗಿದೆ. ಕಾನೂನು ಮಿರಿ ಅವಕಾಶ ನೀಡುವ ಮಾಲಕರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವದು ಎಂದು ಆನಂದ ಮೂರ್ತಿ ಖಡಕ್ ಎಚ್ಚರಿಕೆ ನೀಡಿದರು.
೧೮ ವರ್ಷ ಒಳಗಿನವರಿಗೆ ಉಳಿಯಲು ಅಥವಾ ರೂಮನ್ನು ಬಾಡಿಗೆ ನೀಡುವಂತಿಲ್ಲ, ಸಿ.ಸಿ ಟಿವಿ ಕಡ್ಡಾಯವಿದ್ದು ಸದಾಕಾಲ ಸರಿಯಾಗಿರುವಂತೆ ಎಚ್ಚರಿಕೆ ವಹಿಸ ಬೇಕು.
ರೇಸಾರ್ಟ್‌ ಎದುರು ದೊಡ್ಡದಾದ ಫಲಕದಲ್ಲಿ ಸ್ಥಳೀಯ ಸುರಕ್ಷಿತತೆ ಮತ್ತು ಪ್ರವಾಸಿಗರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡುವ ಮಾಹಿತಿ ಫಲಕ ಅಳವಡಿಸಬೇಕು. ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ತಕ್ಷಣ ಮಾಹಿತಿ ನೀಡಬೇಕು.ಮಕ್ಕಳು ಮತ್ತು ಮಹಿಳೆಯರ ರಕ್ಷಣೆಗೆ ಹೆಚ್ಚು ಕಾಳಜಿ ವಹಿಸ ಬೇಕು ಎಂದು ಅವರು ಸೂಚನೆ ನೀಡಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement