ಆಡಿಯೊ ವೈರಲ್‌; ಮೂವರು ಪಿಎಸ್‌ಐಗಳು ಅಮಾನತು…?

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪೊಲೀಸ್ ಠಾಣೆಯ (Haliyal Police Station) ಪಿಎಸ್‌ಐಗಳ ಪೋಸ್ಟಿಂಗ್ ಹಾಗೂ ಲಂಚದ ವ್ಯವಹಾರಕ್ಕೆ ಸಂಬಂಧಿಸಿದಂತೆ ಆಡಿಯೊ ವೈರಲ್ ಅದ ಬೆನ್ನಲ್ಲಿಯೇ ಮೂವರು ಪಿಎಸ್‌ಐಗಳನ್ನು ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ. ಲಂಚದ ಆಡಿಯೊ ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದರಿಂದ ಎಚ್ಚೆತ್ತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಗಂಭೀರ ಆರೋಪ ಎದುರಿಸುತ್ತಿದ್ದ ಮೂರು ಪಿಎಸ್‌ಐಗಳನ್ನು ಅಮಾನತುಗೊಳಿಸಿದ್ದಾರೆ … Continued

ಬಿಜೆಪಿ ಶಾಸಕರ ಪುತ್ರಿಯಿಂದ ಮಹಿಳಾ ಪೊಲೀಸ್ ಅಧಿಕಾರಿಗೆ ಕಪಾಳಮೋಕ್ಷ : ಪ್ರಕರಣ ದಾಖಲು ; ಶಾಸಕರಿಂದ ಕ್ಷಮೆಯಾಚನೆ

ಬೆಂಗಳೂರು: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಆರತಿ ಉಕ್ಕಡ ದೇವಸ್ಥಾನದಲ್ಲಿ ವಿಶೇಷ ಭದ್ರತಾ ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್‌ (ಪಿಎಸ್‌ಐ) ಮೇಲೆ ಬಿಜೆಪಿ ಶಾಸಕ ಬಿ.ಎಸ್. ಸುರೇಶ್‌ ಗೌಡ ಅವರ ಪುತ್ರಿ ಐಶ್ವರ್ಯ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಆಗಸ್ಟ್‌ 12ರಂದು ರಾತ್ರಿ ಸುಮಾರು 8:15ಕ್ಕೆ ದೇವಸ್ಥಾನದ ಆವರಣದಲ್ಲೇ ಈ ಘಟನೆ ನಡೆದಿದೆ ಎನ್ನಲಾಗಿದೆ. … Continued

ರೈತರಿಗೆ ವಂಚಿಸಿದ ‘ಪ್ರಕರಣ’; ಆರೋಪಿ ಪರ ಸಚಿವ ಜಮೀರ್ ಪ್ರಭಾವ ಬೀರಲು ಯತ್ನಿಸಿದರೆ..? ಆಡಿಯೋ ವೈರಲ್‌

ಬೆಂಗಳೂರು: ರಾಜ್ಯದ ರೈತರಿಗೆ ವಂಚಿಸಿದ ತೆಲಂಗಾಣದ ವ್ಯಾಪಾರಿಗಳ ವಿರುದ್ಧದ ಪ್ರಕರಣದಲ್ಲಿ ಆರೋಪಿ ವ್ಯಕ್ತಿಯ ಪರವಾಗಿ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಪ್ರಭಾವ ಬೀರಲು ಮುಂದಾಗಿದ್ದರು ಎನ್ನಲಾದ ಪೋನ್ ಸಂಭಾಷಣೆಯ ಆಡಿಯೋ ವೈರಲ್ ಆಗಿದೆ. ಚಿಕ್ಕಬಳ್ಳಾಪುರದ ಪೆರೆಸಂದ್ರ ಪಿಎಸ್‌ಐ ಜಗದೀಶ್ ರೆಡ್ಡಿ ಅವರಿಗೆ ಫೋನ್ ಮಾಡಿರುವ ಸಚಿವ ಜಮೀರ್ ಅಹ್ಮದ್ ಖಾನ್, ರಾಜ್ಯದ ರೈತರಿಗೆ ವಂಚನೆ … Continued

ರೆಸಾರ್ಟ್‌, ಹೋಮ್ ಸ್ಟೇ, ಹೊಟೇಲ್ ಮಾಲಕರ ಸಭೆ: ಸರ್ಕಾರದ ಮಾರ್ಗಸೂಚಿ, ಸಮುದ್ರದ ಎಚ್ಚರಿಕೆ ಫಲಕ ಹಾಕಲು ಸೂಚನೆ

ಕುಮಟಾ; ನಾಗರಿಕರ ಹಿತರಕ್ಷಣೆಗಾಗಿ ಕುಮಟಾ ಪೊಲೀಸ್ ಇಲಾಖೆಯು ಶನಿವಾರ ಬಾಡದಲ್ಲಿ ರೆಸಾರ್ಟ್‌, ಹೋಮ್ ಸ್ಟೇ ಮತ್ತು ಹೊಟೇಲ್ ಮಾಲಕರೊಂದಿಗೆ ಸಭೆ ನಡೆಸಿತು. ನಾಗರಿಕರು ಮತ್ತು ಪ್ರವಾಸಿಗರ ರಕ್ಷಣೆ ಮಹತ್ವವಾಗಿದೆ. ಪ್ರವಾಸಿಗರಿಗೆ ವಸತಿಗಾಗಿ ಅಥವಾ ಇನ್ನಾವುದೇ ರೀತಿಯಿಂದ ವಾಣಿಜ್ಯ ಉದ್ದೇಶ ಹೊಂದಿರುವಂತವರು ಕಡ್ಡಾಯವಾಗಿ ಪರವಾನಗಿ ಹೊಂದಿರಬೇಕು. ಕಾನೂನು ಬಾಹಿರ ಚಟುವಟಿಗೆಗೆ ಅವಕಾಶ ನೀಡಬಾರದು. ವಿದೇಶಿ ಪ್ರವಾಸಿಗರಿಗೆ ಅವಕಾಶ … Continued