ಕುಮಟಾ: ಹೊಲನಗದ್ದೆ ತೆಪ್ಪದಮಠ ಶ್ರೀಲಕ್ಷ್ಮೀನರಸಿಂಹ ದೇವರಿಗೆ ಲಕ್ಷಾಧಿಕ ತುಳಸಿ ದಳ ಅರ್ಚನೆ

ಕುಮಟಾ; ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ  ಹೊಲನಗದ್ದೆಯ ತೆಪ್ಪದಮಠದ ಗ್ರಾಮ ದೇವರಾದ ಶ್ರೀಲಕ್ಷ್ಮೀನರಸಿಂಹ ದೇವರಿಗೆ ಲಕ್ಷಾಧಿಕ ತುಳಸಿ ದಳದಿಂದ ಅರ್ಚನೆ ಮಾಡಲಾಯಿತು.
ಹಲವಾರು ವರ್ಷದಿಂದ ನೂಲ ಹಣ್ಣಿಮೆದಿನದಂದು ದೇವಾಲಯದಲ್ಲಿ ಪವಿತ್ರಧಾರಣೆಯೊಂದಿಗೆ ಶ್ರೀದೇವರಿಗೆ ಲಕ್ಷಾಧಿಕ ತುಳಸಿ ದಳವನ್ನು ಅರ್ಚಿಸಿ ಪೂಜೆ ನೆರವೇರಿಸಲಾಗುತ್ತಿದೆ. ನಾಡು ಸುಭಿಕ್ಷೆಯಿಂದ ಕೂಡಿರಲಿ ಹಾಗೂ ಲೋಕದ ಜನರು ಸುಖ ಶಾಂತಿ ನೆಮ್ಮದಿಯಿಂದ ಬದುಕು ನಡೆಸಲಿ ಎಂದು ಶ್ರೀ ದೇವರಲ್ಲಿ ಪ್ರಾರ್ಥುಸಿ ತುಳಸಿ ಅಚರ್ನೆ ಮಾಡಲಾಯಿತು.
ಭಾನುವಾರ ಮುಂಜಾನೆಯಿಂದ ಶ್ರೀ ಲಕ್ಷ್ಮೀ ನರಸಿಂಹ ಸ್ತೋತ್ರ ಪಠಣದೊಂದಿಗೆ ಪೂಜೆ ಆರಂಭವಾಯಿತು. ನಂತರ ಶ್ರೀಲಕ್ಷ್ಮೀನರಸಿಂಹ ಆರಾಧನೆ ಪೂಜೆ, ಶ್ರೀಲಕ್ಷ್ಮೀ ನರಸಿಂಹ ಪಾರಾಯಣ ,ತುಳಸಿ ಅರ್ಪಣೆ ಮಂತ್ರಘೋಷ, ಮಂತ್ರಪುಷ್ಪ ಪೂಜಾ ಸೇವೆಯೊಂದಿಗೆ ಪೂಜೆ ಸಂಪನ್ನವಾಯಿತು.
ವೇ.ನರಸಿಂಹ ಶಂಭು ಭಟ್ಟ ಅವರ ಅಧ್ವರ್ಯದಲ್ಲಿ ತುಳಸಿ ಅರ್ಚನೆ ಕಾರ್ಯ ನೆರವೆರಿತು. ದೇವಾಲಯದ ಅರ್ಚಕರಾದ ಲಕ್ಷ್ಮೀಶ ಭಟ್ಟ, ರವಿ ಭಟ್ಟ ಹಾಗೂ ಮಂಜುನಾಥ ಹೆಗಡೆ, ಜಿ.ಎನ್.ಭಟ್ಟ, ಶ್ರೀಧರ ಭಟ್ಟ ಕಡ್ಲೆ, ರಮೇಶ ಭಟ್ಟ ದೇವನಿಮಠ ಶ್ರೀಲಕ್ಷ್ಮೀನರಸಿಂಹ ಸ್ತ್ರೋತ್ರ ಪಠಿಸಿದರು..
ದೇವಾಲಯದ ಧರ್ಮಧರ್ಶಿಗಳಾದ ಪ್ರೊ.ವಿ.ಎಸ್.ಹೆಗಡೆ ಮಾತನಾಡಿ ಲಕ್ಷಾಧಿಕ ತುಳಸಿ ಸಂಗ್ರಹ ಮಾಡುವುದು ಸುಲಭದ ಮಾತಲ್ಲ. ದೇವಾಲಯದ ಯುವಕರು ಸತತ ಮೂರುದಿನಗಳಕಾಲ ೩೦ ರಿಂದ ೪೦ ಕಿಮೀ.ದೂರದ ಮಾಸ್ತಿಹಳ್ಳ, ಸಂಡಳ್ಳಿ, ಮೂರೂರು, ಕಲ್ಲಬ್ಬೆ, ಯಲವಳ್ಳಿ, ಬರಗದ್ದೆ, ಅಂತ್ರವಳ್ಳಿ, ಶಿಳ್ಳೆ ಇತ್ಯಾದಿ ಊರುಗಳಿಗೆ ತೆರಳಿ ತುಳಸಿ ದಳ ಸಂಗ್ರಹಿಸಿದ್ದಾರೆ ಎಂದು ತಿಳಿಸಿದರು.

ಶ್ರೀಲಕ್ಷ್ಮೀನರಸಿಂಹನ ಆರಾಧಕರಿಗೆ ಸಾಂಕ್ರಾಮಿಕ ಅಥವಾ ಇತರೆ ಕಷ್ಟಗಳು ಬಾಧಿಸುವದಿಲ್ಲ ಎಂಬುದು ನಂಬಿಕೆ. ಇದು ಈ ದೇವಾಲಯದ ಮಹಿಮೆ ಎಂದು ಶ್ರೀದೇವಾಲಯದ ಆಡಳತ ಮಂಡಳಿಯ ಕಾರ್ಯದರ್ಶಿ ಪಿ.ವಿ.ಹೆಗಡೆ ತಿಳಿಸಿದರು
ಶ್ರೀದೇವಾಲಯದ ಪೂಜಾಕಾರ್ಯದಲ್ಲಿ ಎಂ.ಎಂ.ಹೆಗಡೆ, ಕೆ.ಎಸ್.ಭಟ್ಟ, ಮಂಜುನಾಥ ರಾಯಪ್ಪನಮನೆ, ಅನಂತ ಭಾಗ್ವತ, ಆರ್.ಎನ್.ಹೆಗಡೆ, ದೀಪಾ ಭಟ್ಟ,ಮಮತಾ ಭಟ್ಟ,ನರಸಿಂಹ ಭಟ್ಟ,ಡಿ.ಆರ್.ಭಟ್ಟ ಮತ್ತಿತರರು ಸಹಕರಿಸಿದರು.

ಶ್ರೀ ದೇವಾಲಯದ ಜಿರ್ಣೋದ್ಧಾರ ಕಾರ್ಯ, ನವಮೂರ್ತಿ ಪ್ರತಿಷ್ಠಾಪನೆ, ದೇವಾಲಯಕ್ಕೆ ತಾಮ್ರದ ಹೊದಿಕೆ, ಕಲಶ ಪ್ರತಿಷ್ಠಾಪನೆ,ಯಜ್ಞ ,ವಾರ್ಷಿಕವಾಗಿ ನಡೆಯುವ ಶತರುದ್ರ ಇತ್ಯಾದಿ ದೇವತಾ ಕಾರ್ಯದ ಅಧ್ವರ್ಯ ವಹಿಸುತ್ತಿದ್ದ ಗೋಕರ್ಣದ ವೇ.ಗಣಪತಿ ಭಟ್ಟ ಹಾಗೂ ದೇವಾಲಯದ ಕಾರ್ಯದಲ್ಲಿ ಪೌರೋಹಿತ್ಯ ವಹಿಸುತ್ತಿದ್ದ ವೇ.ಗಪ್ಪತಿ ಭಟ್ಟ ಬೆಳ್ಳೆ ಕೆಲವು ದಿನಗಳ ಹಿಂದೆ ನಿಧನರಾಗಿದ್ದು ಇವರ ಆತ್ಮಕ್ಕೆ ಸದ್ಗತಿ ದೊರೆಯಲೆಂದು ದೇವಾಲಯದ ಆಡಳಿತ ಮಂಡಳಿ ಸದಸ್ಯರು, ಭಕ್ತರು ಮೌನಾಚರಣೆ ಮಾಡಿದರು.

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement