ಪ್ರಾಣಿ ‘ಪ್ರೇಮಿ’?..ಚಿಂಪಾಂಜಿ ಜೊತೆ ಮಹಿಳೆಯ ವಿಚಿತ್ರ ಪ್ರೀತಿ: ಆಕೆ ಭೇಟಿ ನಿಷೇಧಿಸಿದ ಮೃಗಾಲಯ..!

ಪ್ರಾಣಿಗಳ ಬಗ್ಗೆ ಪ್ರೀತಿ-ಕಾಳಜಿ ಹೊಂದಿರುವುದು ಸಾಮಾನ್ಯ. ಅದರಲ್ಲೂ ನಾಯಿ-ಬೆಕ್ಕು, ಪಕ್ಷಿಗಳನ್ನು ಮನೆಯಲ್ಲಿಯೇ ಸಾಕುತ್ತಾರೆ, ಆದರೆ ಯಾವುದೇ ಆದರೂ ಅತಿಯಾದರೆ ಅದು ಅಪಾಯಕ್ಕೆ ಕಾರಣವಾಗುತ್ತದೆ ಎಂಬುದು ಈ ಪ್ರಕರಣದಲ್ಲಿ ನಿಜವಾಗಿದೆ. ಪ್ರಾಣಿ ಮೇಲಿನ ಪ್ರೀತಿ ಸಹಜ. ಆದರೆ ಅತಿಯಾದ ಪ್ರೀತಿ ಅಥವಾ ಮೋಹ..? ಈ ಪ್ರಕರಣದಲ್ಲಿ ಝೂನಲ್ಲಿರುವ ಜಿಂಪಾಂಜಿಯೊಂದಿಗೆ ಮಹಿಳೆಯೊಬ್ಬರು ಅತಿಯಾಗಿ ಪ್ರೀತಿ ಹೊಂದಿರುವ ಕುರಿತು ಆಕೆಯೇ ಹೇಳಿಕೊಂಡಿದ್ದಾರೆ. ಅದೇ ಆಕೆಗೆ ಝೂನಲ್ಲಿ ಪ್ರವೇಶಿದಂತೆ ನಿಷೇಧ ಹೇರಲು ಸಹ ಕಾರಣವಾಗಿದೆ. ಇಂಥ ವಿಲಕ್ಷಣ ಘಟನೆ ನಡೆದಿರೋದು ಬೆಲ್ಜಿಯಂ (Belgium).ಆಂಟ್‌ವರ್ಪ್‌ ಎಂಬ ಪ್ರದೇಶದಲ್ಲಿ.
ಮಹಿಳೆ ಮೃಗಾಲಯದಲ್ಲಿ ಚಿಂಪಾಂಜಿಯೊಂದಿಗೆ 4 ವರ್ಷಗಳಿಂದ ಪ್ರೀತಿ ಇದೆ ಎಂದು ಹೇಳಿಕೊಂಡಿದ್ದಾರೆ.ಮಾನವರು ಪ್ರಾಣಿ ಪ್ರೇಮಿಗಳಾಗುವುದು ಒಂದು ವಿಷಯ, ಆದರೆ ಒಬ್ಬ ಮಹಿಳೆ ತಾನು ನಿಜವಾಗಿಯೂ ಚಿಂಪಾಂಜಿಯ ಪ್ರೇಮಿ ಎಂದು ಹೇಳಿದಾಗ ಎಲ್ಲರೂ ಆಘಾತಕ್ಕೊಳಗಾದರು. ಮೃಗಾಲಯದಲ್ಲಿರುವ ಚಿಟಾ(Chita) ಹೆಸರಿನ ಚಿಂಪಾಂಜಿ ಜೊತೆ ತನಗೆ ಪ್ರೀತಿ ಇದೆ ಎಂದು ಆಡಿ ಟಿಮ್ಮರ್ಮನ್ಸ್‌ (Adie Timmermans) ಎಂಬ ಮಹಿಳೆ ಹೇಳಿಕೊಂಡಿದ್ದಾಳೆ. ಈ ಕಹಾನಿಗೆ ಅಂತ್ಯ ಹಾಡುವುದನ್ನು ನಿರ್ಧರಿಸಿರು ಮೃಗಾಲಯದ ಆಡಳಿತ ಮಂಡಳಿ ಆಟಿ ಟಿಮ್ಮರ್ಮನ್ಸ್​​ ಮೃಗಾಲಯಕ್ಕೆ ಭೇಟಿ ನೀಡುವುದನ್ನು ನಿಷೇಧಿಸಿದೆ.
ಹಾಗೆಂದು ಅವರಿಬ್ಬರ ಮಧ್ಯೆ ಇರುವುದು ನಾವು-ನೀವು ಭಾವಿಸಿರುವ ಪ್ರೀತಿ ಅಥವಾ ಆಕರಷ್ಣೆಯಲ್ಲ.ಇದೊಂದು ವಿಚಿತ್ರ ಪ್ರೀತಿಯೋ ಅಥವಾ ಮೋಹವೋ ಹೇಳುವುದು ಕಷ್ಟ. ಮಹಿಳೆ ಚಿಂಪಾಂಜಿ ಮುಟ್ಟಿಲ್ಲ, ಶೇಕ್‌ ಹ್ಯಾಂಡ್‌ ಮಾಡಿಲ್ಲ. ಅವರಿಬ್ಬರ ನಡುವೆ ಇದ್ದ ಗಾಜಿನ ತಡೆ ಅವರಿಬ್ಬರ ನಡುವಿನ ಪ್ರೀತಿಗೆ ಅಡ್ಡಿ ಬಂದಿಲ್ಲವಂತೆ. ಮೃಗಾಲಯದ ಗಾಇನ ಆ ಕಡೆ ಚಿಂಪಾಂಜಿ ಈ ಕಡೆ ಮಹಿಳೆ ಒಬ್ಬರಿಗೊಬ್ಬರು ಅವರದ್ದೇ ಭಾಷೆಯಲ್ಲಿ ಸಂವಹನ ನಡೆಸಿದ್ದಾರೆ. ಆದರೆ ಇದು ಚಿಂಪಾಂಜಿಯ ಸಾಮಾನ್ಯ ವರ್ತನೆಯಲ್ಲಿ ಬದಲಾವಣೆಗೆ ಕಾರಣವಾಗಿದೆ ಎಂದು ಮೃಗಾಲಯದವರು ಹೇಳುತ್ತಾರೆ. ಈ ಚಿಂಪಾಂಜಿ ಮೃಗಾಲಯದ ಇತರ ಚಿಂಪಾಂಜಿಗಳ ಜೊತೆ ಸಹಜವಾಗಿ ವರ್ತಿಸುವುದಿಲ್ಲ. ಮಹಿಳೆಯ ಆಗಮನವನ್ನೇ ನಿರೀಕ್ಷಿಸುತ್ತಾ ಕೂತಿರುತ್ತದೆ. ಈಗ ಇತರ ಪ್ರಾಣಿಗಳೊಂದಿಗೆ ಬೇರೆಯುವದನ್ನು ಬಿಟ್ಟಿದೆ ಎನ್ನಲಾಗುತ್ತಿದೆ. ಚಿಂಪಾಂಜಿಗಳ ನಡುವಿನ ಬಾಂಧವ್ಯಕ್ಕೆ ಹಾನಿಕಾರಕವಾಗುತ್ತಿದೆ ಎಂದು ಮೃಗಾಲಯವು ಈ ಮಹಿಳೆಯನ್ನು ನಿಷೇಧಿಸಿದೆಯಂತೆ. ಹೀಗಾಗಿ ಇನ್ಮುಂದೆ ಜಿಂಪಾಂಜಿಯನ್ನು ನೋಡಲು ಮಹಿಳೆ ಮೃಗಾಲಯಕ್ಕೆ ಭೇಟಿ ನೀಡಬಾರದು ಎಂದು ತಾಕೀತು ಮಾಡಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಮಹಿಳೆ, ನಾನು ಆ ಪ್ರಾಣಿಯನ್ನು ಪ್ರೀತಿಸುತ್ತೇನೆ. ಅವನು(ಚಿಂಪಾಂಜಿ) ನನ್ನನ್ನು ಪ್ರೀತಿಸುತ್ತಾನೆ. ನನಗೆ ಚಿಂಪಾಂಜಿಯಿಂದ ಸಿಕ್ಕಿರುವ ಪ್ರೀತಿಯನ್ನು ಕಸಿದುಕೊಳ್ಳಲು ಏಕೆ ಬಯಸುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಮೃಗಾಲಯದ ಚಿಂಪಾಂಜಿ ಹಾಗೂ ಮಹಿಳೆ ಮಧ್ಯದ ಮೂಡಿದ ಪ್ರೀತಿ-ಬಾಂಧವ್ಯಕ್ಕೆ ಈಗ ಮೃಗಾಲಯದ ಆಡಳಿತ ಮಂಡಳಿಯೇ ಅಡ್ಡಿಯಾಗಿದೆ ಎಂದು ಮಹಿಳೆ ಹೇಳುತ್ತಾಳೆ. ಚಿಂಪಾಂಜಿ ಭೇಟಿಯಾಗಲು ಸಾಧ್ಯವಾಗದೆ ಮಹಿಳೆ ಕಣ್ಣೀರು ಹಾಕುತ್ತಿದ್ದಾರೆ.
ಇನ್ನು ಮಹಿಳೆಯ ಜೊತೆ ಸಂಬಂಧ ಹೊಂದಿರುವ ಜಿಂಪಾಂಜಿ ಇತರೆ ಪ್ರಾಣಿಗಳೊಂದಿಗೆ ಸೇರುತ್ತಿಲ್ಲವಂತೆ. ಆದರೆ ಮೃಗಾಲಯ ಈ ಮಹಿಳೆಯ ಆರೋಪಗಳನ್ನು ತಳ್ಳಿ ಹಾಕಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement