ಇಂದು ಪಿಯು ಕಾಲೇಜು ಆರಂಭ : ಕುಮಟಾದಲ್ಲಿ ಹಾಜರಾತಿ ಶೇ.೯೦ರಷ್ಟು..!

ಕುಮಟಾ: ರಾಜ್ಯ ಸರಕಾರದ ಮಾರ್ಗ ಸೂಚಿಯಂತೆ ಕುಮಟಾ ಕಾಲೇಜುಗಳಲ್ಲಿಯೂ ೯ರಿಂದ ೧೨ನೇ ತರಗತಿಗಳಿಗೆ ಭೌತಿಕ ಪಾಠ ಆರಂಭವಾಗಿದ್ದು ವಿದ್ಯಾರ್ಥಿಗಳ ಹಾಜರಾತಿಯು ಶೇ.೯೦ ಕ್ಕಿಂತ ಹೆಚ್ಚಿದೆ.
ಕುಮಟಾದ ಸರಕಾರಿ ಪದವಿ ಪೂರ್ವ ಕಾಲೇಜು ನೆಲ್ಲೇಕೆರಿ , ಡಾ.ಎ.ವಿ.ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ,ಡಾ.ಎ.ವಿ.ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿದ್ದರು.
ಆನ್ ಲೈನ್ ತರಗತಿಗಳಿಗಿಂತ ಭೌತಿಕ ತರಗತಿಗಳು ಹೆಚ್ಚು ಪರಿಣಾಮಕಾರಿ ಎಂದು ಹೆಚ್ಚಿನ ವಿದ್ಯಾರ್ಥಿಗಳ ಮಾತಾಗಿದೆ. ಸುಮಾರು ಒಂದು ವರ್ಷದಿಂದ ಮನೆಯಲ್ಲೇ ಕುಳಿತು ಕಾಲೇಜು ಎನ್ನುವ ಶೈಕ್ಷಣಿಕ ಪ್ರಪಂಚವೇ ಮರೆತು ಹೋಗುವಷ್ಟರ ಮಟ್ಟಿಗೆ ಬಂದು ನಿಂತಿದ್ದವು. ಕಾಲೇಜು ಆರಂಭ ಎನ್ನುವ ವಿಷಯವೇ ನಮಗೆ ಖುಷಿ ತಂದಿದೆ.

ಭೌತಿಕ ತರಗತಿ ಇದ್ದಾಗ ಮಾತ್ರ ನಮ್ಮ ಶೈಕ್ಷಣಿಕ ಗುರಿ ಮುಟ್ಟಲು ಸಾಧ್ಯ ಎಂದು ವಿದ್ಯಾರ್ಥಿ ಧನು ಭಟ್ಟ ಕೂಜಳ್ಳಿ ಹೇಳುತ್ತಾರೆ. ವಿದ್ಯಾರ್ಥಿ ಅನಿರುದ್ಧ ಹೇಳುವ ಪ್ರಕಾರ ಒನಲೈನ್ ತರಗತಿಯಿಂದ ಹೆಚ್ಚಿನ ಪ್ರಯೋಜನ ನಮಗೆ ಆಗಿಲ್ಲ. ನಾವು ಸಿಎ, ಐಪಿಎಸ್, ಐಎಎಸ್ ಪರೀಕ್ಷೆಗಳ ಗುರಿ ಹೊಂದಿದ್ದೇವೆ. ಇದಕ್ಕೆಲ್ಲ ನಮಗೆ ಉಪನ್ಯಾಸಕರ ಮಾರ್ಗದರ್ಶನ ಅಗತ್ಯವಾಗಿದೆ. ಭೌತಿಕ ಶಿಕ್ಷಣ ದಿಂದ ಮಾತ್ರ ನಮ್ಮ ಗುರಿ ಮುಟ್ಟಲು ಸಾಧ್ಯ ಎಂದು ಅನಿಸುತ್ತದೆ ಎಂದು ಹೇಳಿದರು.
.ಸರಕಾರದ ನಿಯಮಾವಳಿಯನ್ನು ಶಿಸ್ತಿನಿಂದ ಪಾಲಿಸುವ ಕಾಲೇಜುಗಳಲ್ಲಿ ಪ್ರತಿ ಡೆಸ್ಕ್ ಗಳಲ್ಲಿ ಒಬ್ಬರು ಮತ್ತು ಕಾಲೇಜಿನ ಪ್ರವೇಶ ದ್ವಾರದಲ್ಲಿ ಸ್ಯಾನಿಟೈಸರ್ ಇದ್ದು ಕೈಗಳಿಗೆ ಸ್ಯಾನಿಟೈಸರ್ ಹಾಕಿದ ನಂತರವೇ ಬೋಧನಾ ಕೊಠಡಿಗೆ ವಿದ್ಯಾರ್ಥಿಗಳು ಹೊಗಲು ಅನುಮತಿ ನೀಡಲಾಗುತ್ತಿದೆ..
ಕುಮಟಾ ತಾಲೂಕಿನಲ್ಲಿ ೧೧ ಪದವಿ ಪೂರ್ವ ಕಾಲೇಜುಗಳಿದ್ದು ಪ್ರಥಮ ಪಿಯುಸಿಗೆ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ. ಕಾಲೇಜು ಪ್ರವೇಶಿಸುವಾಗ ೧೮ ವರ್ಷ ಮೇಲ್ಪಟ್ಟ ಮಕ್ಕಳು ಮತ್ತು ಪಾಲಕರು ಕೊವೀಡ್ ಲಸಿಕೆ ಪಡೆದಿರುವುದು ಕಡ್ಡಾಯ ವಾಗಿದೆ. ೧೮ ವರ್ಷ ಕೆಳಗಿನ ಮಕ್ಕಳಿಗೆ ಲಸಿಕೆ ಆಗದೆ ಇರುವುರಿಂದ ಅಂಥವರು ಕೊವೀಡ್ ನಿಯಮಾವಳಿಯನ್ನು ಕಡ್ಡಾಯ ಪಾಲಿಸುವುದರೊಂದಿಗೆ ವಿದ್ಯಾಲಯದಲ್ಲಿಯೂ ಸಾಮಾಜಿಕ ಅಂತರದೊಂದಿಗೆ ಪ್ರತ್ಯೇಕ ಇರುವಂತೆ ಎಚ್ಚರಿಕೆ ವಹಿಸುವುದು ಅನಿವಾರ್ಯ ಎಂದು ಬಾಳಿಗಾ ಪದವಿ ಪೂರ್ವ ಕಾಲೇಜ್‌ ಪ್ರಾಚಾರ್ಯ ಎನ್.ಜಿ.ಹೆಗಡೆ ಹೇಳಿದ್ದಾರೆ.
ಡಾ.ಬಾಳಿಗಾ ವಾಣಿಜ್ಯ ವಿದ್ಯಾಲಯದಲ್ಲಿ ಉಪನ್ಯಾಸಕರು ಮತ್ತು ಸಿಬ್ಬಂದಿ ೨ ಡೋಸ್ ಪಡೆದಿದ್ದಾರೆ, ಕಾಲೆಜಿನಲ್ಲಿ ಸ್ಕೀನ್ ಟೆಸ್ಟ್ ಮಾಡಿಯೇ ವಿದ್ಯಾರ್ಥಿಗಳನ್ನು ಪ್ರವೇಶ ದ್ವಾರದಿಂದ ಒಳಗೆ ಬಿಡಲಾಗಿದೆ ಎಂದು ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಸ್.ವಿ.ಶೇಣ್ವಿ ಕಾಲೆಜಿನಲ್ಲಿ ವಿದ್ಯಾರ್ಥಿಗಳ ಸುರಕ್ಷತೆಗಾಗಿ ತೆಗೆದು ಕೊಂಡ ಕ್ರಮದ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement