ಒಡಿಶಾ: ಪತ್ನಿಯ ಚಿತೆಗೆ ಹಾರಿ ಪ್ರಾಣಬಿಟ್ಟ ಹಿರಿಯ ವ್ಯಕ್ತಿ..!

ಒಡಿಸ್ಸಾ ರಾಜ್ಯದ ಕಲಹಂಡಿ ಜಿಲ್ಲೆಯ ಗೊಲಮುಂಡಾ ಬ್ಲಾಕ್‌ನ ಸಿಯಾಲ್‌ಜೋಡಿ ಗ್ರಾಮದಲ್ಲಿ ತನ್ನ ಸಂಗಾತಿಯ ಸಾವಿನಿಂದ ತೀವ್ರ ಆಘಾತಕ್ಕೊಳಗಾದ 65 ವರ್ಷದ ಬುಡಕಟ್ಟು ವ್ಯಕ್ತಿ ತನ್ನ ಪತ್ನಿಯ ಚಿತೆಯ ಬೆಂಕಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಮಂಗಳವಾರ ಸಂಭವಿಸಿದ ದುರಂತ ಘಟನೆಯು ದೂರದ ಬುಡಕಟ್ಟು ಹಳ್ಳಿಯ ನಿವಾಸಿಗಳನ್ನು ಆಘಾತಕ್ಕೊಳಗಾಗಿಸಿದೆ.
ಬೆಂಕಿ ಉರಿಯುತ್ತಿರುವ ಚಿತೆಗೆ ಹಾರಿ ತನ್ನ ಜೀವನವನ್ನು ಕೊನೆಗೊಳಿಸಿದ ನೀಲಮಣಿ ಸಬಾರ್ ಗ್ರಾಮದ ಚುನಾಯಿತ ವಾರ್ಡ್ ಸದಸ್ಯ ಎಂದು ಗೋಲ್ಮುಂಡ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ
ನೀಲಮಣಿ ಅವರ ಪತ್ನಿ ರಾಯಬಾರಿ ಸಬಾರ್ ಹೃದಯಾಘಾತದಿಂದ ಮೃತಪಟ್ಟಿದ್ದರು. ನಿನ್ನೆ ಸಂಜೆ (ಮಂಗಳವಾರ) ಆಕೆಯ ಪತಿ, ನಾಲ್ವರು ಪುತ್ರರು ಮತ್ತು ಇತರ ಗ್ರಾಮಸ್ಥರ ಸಮ್ಮುಖದಲ್ಲಿ ಆಕೆಯ ಅಂತ್ಯಕ್ರಿಯೆಯನ್ನು ಹಳ್ಳಿಯ ಸ್ಮಶಾನದಲ್ಲಿ ನೆರವೇರಿಸಲಾಯಿತು.
ಕುಟುಂಬ ಸದಸ್ಯರು ಅಂತ್ಯಕ್ರಿಯೆಯ ಅಂಗವಾಗಿ ಹತ್ತಿರದ ಕೊಳದಲ್ಲಿ ಸ್ನಾನ ಮಾಡಲು ಹೋದಾಗ ಈ ಘಟನೆ ನಡೆದಿದೆ. ಪತ್ನಿಯ ಸಾವಿನಿಂದ ಕಂಗಾಲಾಗಿದ್ದ ನೀಲಮಣಿ ಮನೆಯವರೆಲ್ಲ ಅಂತ್ಯಕ್ರಿಯೆ ಮುಗಿಸಿ ಸ್ನಾಕ್ಕೆ ಹೋದಾಗ ನಂತರ ಪತ್ನಿಯ ಚಿತೆಗೆ ಹಾರುವ ತೀವ್ರ ನಿರ್ಧಾರ ತೆಗೆದುಕೊಂಡಿದ್ದಾರೆ.
ಕಿರುಚಾಟವನ್ನು ಕೇಳಿದ ಕುಟುಂಬಸ್ಥರು ನೀಲಮಣಿಯನ್ನು ಉರಿಯುತ್ತಿರುವ ಬೆಂಕಿಯಿಂದ ರಕ್ಷಿಸಲು ಧಾವಿಸಿದರು. ಆದರೆ ತಡವಾಗಿತ್ತು. ಅವರು ಸುಡುವ ಚಿತೆಯಿಂದ ಆತನನ್ನು ತೆಗೆಯುವ ಹೊತ್ತಿಗೆ, ನೀಲಮಣಿ ಸುಟ್ಟ ಗಾಯಗಳಿಂದ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದರು, ಈ ಸಂಬಂಧ ಭಾರತೀಯ ದಂಡ ಸಂಹಿತೆಯ 304-ಬಿ ಅಡಿಯಲ್ಲಿ ಅಸಹಜ ಸಾವು ಪ್ರಕರಣವನ್ನು ದಾಖಲಿಸಲಾಗಿದೆ.

ಪ್ರಮುಖ ಸುದ್ದಿ :-   ಮೋದಿ, ರಾಹುಲ್ ಗಾಂಧಿಯಿಂದ ನೀತಿ ಸಂಹಿತೆ ಉಲ್ಲಂಘನೆ ಆರೋಪ: ಉತ್ತರ ನೀಡಲು ಚುನಾವಣಾ ಆಯೋಗ ಸೂಚನೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement