ದೇವರ ದರ್ಶನಕ್ಕೆ ಬಂದ ಮೂವರು ಈಜಲು ನಾಲೆಗೆ ಇಳಿದು ನೀರು ಪಾಲು

ಮಂಡ್ಯ : ದರ್ಶನಕ್ಕೆಂದು ಬಂದವರು ಹೇಮಾವತಿ ಬಲದಂಡೆ ನಾಲೆಯಲ್ಲಿ ಸ್ನಾನಕ್ಕೆ ಇಳಿದಾಗ ಮೂವರು ಸ್ನೇಹಿತರು ನೀರುಪಾಲಾಗಿರುವ ಘಟನೆ ಮಂಡ್ಯದ ಕೆ.ಆರ್.ಪೇಟೆ ತಾಲೂಕಿನಲ್ಲಿ ವರದಿಯಾಗಿದೆ.
ಮೈಸೂರು ಮೂಲದ ರವಿ, ಯೋಗೀಶ್‌ ಹಾಗೂ ಸೀನೂ ಎಂಬವರು ಮೃತಪಟ್ಟವರು ಎಂದು ಗುರುತಿಸಲಾಗಿದೆ. ಮೈಸೂರಿನಿಂದ ಎಂಟು ಮಂದಿ ಸ್ನೇಹಿತರು ದೇವರ ದರ್ಶನಕ್ಕೆಂದು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಚಂದಗೋಳಮ್ಮ ದೇವಸ್ಥಾನಕ್ಕೆ ಬಂದಿದ್ದರು. .ಚಂದಗೋಳಮ್ಮ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿ ಊಟ ತಯಾರಿಸಿ ಸವಿದಿದ್ದಾರೆ. ಬಳಿಕ ರವಿ ಎಂಬವರು ಪಕ್ಕದಲ್ಲಿದ್ದ ನಾಲೆಯಲ್ಲಿ ಈಜಲು ಮುಂದಾಗಿದ್ದಾರೆ.ಸ್ವಲ್ಪ ಸಮಯದ ನಂತರ ಸುಸ್ತಾಗಿ ನೀರಿನಲ್ಲಿ ಮುಳುಗುತ್ತಿದ್ದ ರವಿಯನ್ನು ಕಾಪಾಡಲು ಯೋಗೇಶ್ ಎಂಬವರು ನೀರಿಗೆ ಇಳಿದಿದ್ದಾರೆ. ಆದರೆ ಯೋಗೇಶಗೆ ರವಿ ಕಾಪಾಡಲು ಸಾಧ್ಯವಾಗಲಿಲ್ಲ, ತಾವೇ ಮುಳುಗುವ ಸ್ಥಿತಿಗೆ ತಲುಪಿದ್ದಾರೆ. ಈ ಇಬ್ಬರನ್ನು ಕಾಪಾಡಲು ಮಂಜು ಕಾಲುವೆಗೆ ಇಳಿದಿದ್ದಾರೆ. ಮೂವರು ನೀರಿನಲ್ಲಿ ಮುಳುಗುತ್ತಿದನ್ನು ಗಮನಿಸಿ ಮತ್ತೋರ್ವ ಸೀನು ಎಂಬವರು ನೀರಿಗಿಳಿಯಲು ಪ್ರಯತ್ನಿಸಿದಾಗ ಇತರರು ತಡೆದಿದ್ದರಿಂದ ಪ್ರಾಣಾಪಯದಿಂದ ಪಾರಾಗಿದ್ದಾರೆ. ಕಾಲುವೆಯಲ್ಲಿ ನೀರಿನ ಸೆಲೆವು ಜೋರಾಗಿತ್ತು ಎನ್ನಲಾಗಿದೆ.
ನೀರಿನಲ್ಲಿ ಮುಳುಗುತ್ತಿದ್ದವರನ್ನು ಗಮನಿಸಿ ಸ್ಥಳೀಯರು ರಕ್ಷಣೆ ಮಾಡಲು ಮುಂದಾದರೂ ಪಾರು ಮಾಡಲು ಸಾಧ್ಯವಾಗಿಲ್ಲ. ಬಳಿಕ ಅಗ್ನಿಶಾಮಕ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿಶಾಮಕದಳ ಶೋಧಕಾರ್ಯ ನಡೆಸಿದೆ. ನಿನ್ನೆ ಸಂಜೆ ನೀರಿನ ಹರಿವು ಜೋರಾಗಿದ್ದರಿಂದ ಮೃತ ದೇಹಗಳು ಪತ್ತೆ ಆಗಿರಲಿಲ್ಲ, ಬಳಿಕ ರಾತ್ರಿಯಾದ್ದರಿಂದಾಗಿ ಶೋಧಕಾರ್ಯವನ್ನು ಮೊಟಕುಗೊಳಿಸಲಾಗಿತ್ತು. ಇಂದು ಬೆಳಿಗ್ಗೆ (ಬುಧವಾರ) ಶೋಧ ಕಾರ್ಯದ ವೇಳೆ ಮೂವರ ಮೃತ ದೇಹಗಳು ಪತ್ತೆಯಾಗಿದೆ.

ಪ್ರಮುಖ ಸುದ್ದಿ :-   ಸುಳ್ಳು ಚುನಾವಣಾ ಅಫಿಡವಿಟ್‌ ಪ್ರಕರಣ : ಬಿಜೆಪಿ ಶಾಸಕ ಗರುಡಾಚಾರಗೆ ವಿಧಿಸಿದ್ದ ಜೈಲು ಶಿಕ್ಷೆ ರದ್ದುಮಾಡಿದ ಹೈಕೋರ್ಟ್

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement