ದೇವರ ದರ್ಶನಕ್ಕೆ ಬಂದ ಮೂವರು ಈಜಲು ನಾಲೆಗೆ ಇಳಿದು ನೀರು ಪಾಲು

ಮಂಡ್ಯ : ದರ್ಶನಕ್ಕೆಂದು ಬಂದವರು ಹೇಮಾವತಿ ಬಲದಂಡೆ ನಾಲೆಯಲ್ಲಿ ಸ್ನಾನಕ್ಕೆ ಇಳಿದಾಗ ಮೂವರು ಸ್ನೇಹಿತರು ನೀರುಪಾಲಾಗಿರುವ ಘಟನೆ ಮಂಡ್ಯದ ಕೆ.ಆರ್.ಪೇಟೆ ತಾಲೂಕಿನಲ್ಲಿ ವರದಿಯಾಗಿದೆ. ಮೈಸೂರು ಮೂಲದ ರವಿ, ಯೋಗೀಶ್‌ ಹಾಗೂ ಸೀನೂ ಎಂಬವರು ಮೃತಪಟ್ಟವರು ಎಂದು ಗುರುತಿಸಲಾಗಿದೆ. ಮೈಸೂರಿನಿಂದ ಎಂಟು ಮಂದಿ ಸ್ನೇಹಿತರು ದೇವರ ದರ್ಶನಕ್ಕೆಂದು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಚಂದಗೋಳಮ್ಮ ದೇವಸ್ಥಾನಕ್ಕೆ ಬಂದಿದ್ದರು. … Continued