‘ಮಹಾ ಸಿಎಂ ಉದ್ಧವ್’ ನಿಂದನೆ ಆರೋಪದ ಮೇಲೆ ಬಂಧನಕ್ಕೊಳಗಾದ ಕೆಲವೇ ಗಂಟೆಗಳಲ್ಲಿ, ಸಚಿವ ನಾರಾಯಣ ರಾಣೆಗೆ ಜಾಮೀನು

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧದ “ಕಪಾಳಮೋಕ್ಷದ” ಟೀಕೆಗೆ ಬಂಧಿಸಿದ ಗಂಟೆಗಳ ನಂತರ, ಕೇಂದ್ರ ಸಚಿವ ನಾರಾಯಣ ರಾಣೆಗೆ ಮಂಗಳವಾರ ತಡರಾತ್ರಿ ಮಹಾದ್ ನ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಜಾಮೀನು ನೀಡಿದೆ.
ರಾಣೆಯನ್ನು ನಾಸಿಕ್ ನಗರ ಪೊಲೀಸರು ಮಂಗಳವಾರ ಮಧ್ಯಾಹ್ನ ಬಂಧಿಸಿದರು, ರತ್ನಗಿರಿಯ ಸೆಷನ್ಸ್ ನ್ಯಾಯಾಲಯವು ‘ಸ್ಲ್ಯಾಪ್’ ಟೀಕೆಗೆ ಸಂಬಂಧಿಸಿದಂತೆ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿತು. ಎಲ್ಲ ಕಾನೂನು ಆಯ್ಕೆಗಳು ಮುಗಿದ ನಂತರ ರಾಣೆಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಬಿ. ಎನ್. ಪಾಟೀಲ್ ಹೇಳಿದರು.
ಮಹದ್ ಪೋಲಿಸರು ಅವರ ಕಸ್ಟಡಿಯನ್ನು ಕೋರಿದ್ದರು, ಆದರೆ ರಾಣೆ ಅವರ ವಕೀಲರು ಅವರು ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ ಎಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ತಿಳಿಸಿದರು ಮತ್ತು ಅವರ ಬಂಧನದ ಅಗತ್ಯವಿಲ್ಲ ಎಂದು ವಾದಿಸಿದರು.
ಏತನ್ಮಧ್ಯೆ, ಶಿವಸೇನೆಯ ಸದಸ್ಯರು ಜುಹುವಿನ ರಾಣೆಯ ನಿವಾಸದ ಹೊರಗೆ ಪ್ರತಿಭಟನೆ ನಡೆಸಿದರು. ರಾಣೆ ಬೆಂಬಲಿಗರು ಮತ್ತು ಶಿವಸೇನಾ ಸದಸ್ಯರು ಜುಹುನಲ್ಲಿ ಘರ್ಷಣೆ ನಡೆಸಿದರು, ಕಲ್ಲು ತೂರಾಟವೂ ವರದಿಯಾಗಿದೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಸೇನೆಯ ಸದಸ್ಯರು ರಾಣೆ ಅವರ ಮನೆಯ ಮೇಲೆ ಕಪ್ಪು ಶಾಯಿ ಮತ್ತು ಮೊಟ್ಟೆಗಳನ್ನು ಎಸೆದರು. ಶಿವಸೇನೆ ಪ್ರತಿಭಟನಾಕಾರರು ಮಲಾಡ್ ಪೂರ್ವದಲ್ಲಿ ರಾಣೆ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಗುಂಪನ್ನು ಚದುರಿಸಲು ಲಾಠಿ ಚಾರ್ಜ್ ಮಾಡಬೇಕಾಯಿತು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಕಾರ್ಣಿಕ್ ಹೇಳಿದರು.
ರಣಗಿರಿ ಜಿಲ್ಲೆಯ ಚಿಪ್ಲುನ್‌ನಲ್ಲಿ ಜನ ಆಶೀರ್ವಾದ ಯಾತ್ರೆಯಲ್ಲಿರುವ ರಾಣೆ ಮಂಗಳವಾರ ಮುಖ್ಯಮಂತ್ರಿ ಠಾಕ್ರೆ ಬಗ್ಗೆ ವಿವಾದಾತ್ಮಕ ಟೀಕೆ ಮಾಡಿದ್ದಕ್ಕೆ ವಿಷಾದಿಸುವುದಿಲ್ಲ ಎಂದು ಹೇಳಿದ್ದಾರೆ. “ನಾನು ಯಾವುದೇ ಅಪರಾಧ ಮಾಡಿಲ್ಲ. ನಾನು ಯಾಕೆ ವಿಷಾದಿಸಬೇಕು ಎಂದು ಅವರು ಪ್ರಶ್ನಿಸಿದ್ದಾರೆ.
ನಾಸಿಕ್, ಪುಣೆ ಮತ್ತು ಮಹದ್ ಸೇರಿದಂತೆ ನಾರಾಯಣ್ ರಾಣೆ ವಿರುದ್ಧ ನಾಲ್ಕು ಎಫ್ಐಆರ್ ದಾಖಲಿಸಲಾಗಿದೆ.

ಪ್ರಮುಖ ಸುದ್ದಿ :-   ಜೆಡಿಯು ಯುವ ಮುಖಂಡನ ಗುಂಡಿಕ್ಕಿ ಹತ್ಯೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement