ಬೈಕ್‌ ನಿಯಂತ್ರಣ ತಪ್ಪಿ ಡಿವೈಡರಿಗೆ ಡಿಕ್ಕಿ: ಇಬ್ಬರು ಯುವರು ಸಾವು

ಹುಬ್ಬಳ್ಳಿ: ಉಣಕಲ್ ಕೆರೆ ಬಳಿಯ ಪ್ರೆಸಿಡೆಂಟ್ ಹೊಟೆಲ್ ಹತ್ತಿರ ವೇಗವಾಗಿ ಹೋಗುತ್ತಿದ್ದ ಬೈಕ್‌ ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ ಇಬ್ಬರು ಯುವಕರು ಮೃತಪಟ್ಟ ದಾರುಣ ಘಟನೆ ಬುಧವಾರ ಮಧ್ಯರಾತ್ರಿ ನಡೆದಿದೆ.
ಬುಧವಾರ ಮಧ್ಯರಾತ್ರಿ ೧ ಗಂಟೆಗೆ ಸುಮಾರಿಗೆ ವೇಗವಾಗಿ ಹೋಗುತ್ತಿರುವಾಗ ಬೈಕ್ ನಿಯಂತ್ರಣ ತಪಿ ಪಕ್ಕದ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬಯಕಿನಲ್ಲಿ ಸವಾರಿ ಮಾಡುತ್ತಿದ್ದ ಹಳೇಹುಬ್ಬಳ್ಳಿಯ ನವೀನ ಗೊಲ್ಲರ ಮತ್ತು ಹಾವೇರಿಯ ಗಿರೀಶ ಕಬ್ಬಿನಕಂತಿಮಠ ಹಾರಿ ಬಿದ್ದು ಮೃತಪಟ್ಟಿದ್ದಾರೆ. ಇನ್ನೋರ್ವ ಯಲ್ಲಪ್ಪ ಸೋಲಾರಗೊಪ್ಪ ಎಂಬಾತ ತೀವ್ರ ಗಾಯಗೊಂಡಿದ್ದಾನೆ.
ಘಟನೆ ಮಾಹಿತಿ ತಿಳಿಯುತ್ತಿದ್ದಂತೆಯೇ ಉತ್ತರ ಸಂಚಾರಿ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ, ಯುವಕರನ್ನ ಕಿಮ್ಸ್‌ಗೆ ಒಯ್ದರೂ ಪ್ರಯೋಜನವಾಗಿಲ್ಲ. ಈ ಕುರಿತು ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

5 / 5. 1

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಎಐಸಿಸಿ ಒಬಿಸಿ ಸಲಹಾ ಮಂಡಳಿಯ ಅಧ್ಯಕ್ಷರಾಗಿ ಸಿದ್ದರಾಮಯ್ಯ ನೇಮಕವಾಗಿಲ್ಲ : ಸಿಎಂ ಕಚೇರಿ ಸ್ಪಷ್ಟನೆ

ನಿಮ್ಮ ಕಾಮೆಂಟ್ ಬರೆಯಿರಿ

advertisement