1.50 ಕೋಟಿ ವಾರ್ಷಿಕ ಆದಾಯದ ವರದಿಗಳ ನಡುವೆ ಅಮಿತಾಬ್ ಬಚ್ಚನ್ ಪೊಲೀಸ್‌ ಅಂಗರಕ್ಷಕನ ವರ್ಗಾವಣೆ..!

ಅಮಿತಾಬ್ ಬಚ್ಚನ್ ಅವರ ಅಂಗರಕ್ಷಕ ಜಿತೇಂದ್ರ ಶಿಂಧೆ ಅವರನ್ನು 1.5 ಕೋಟಿ ವಾರ್ಷಿಕ ಆದಾಯ ಗಳಿಸಿದ ಆರೋಪದ ನಂತರ ಅವರನ್ನು ವರ್ಗಾಯಿಸಲಾಯಿತು. ಈ ವಿಷಯದ ಬಗ್ಗೆ ಇಲಾಖಾ ವಿಚಾರಣೆಯನ್ನೂ ಆರಂಭಿಸಲಾಗಿದೆ
ಮುಂಬೈ ಪೊಲೀಸ್ ಇಲಾಖೆಗೆ ಸೇರಿಕೊಂಡ ಕಾನ್ ಸ್ಟೇಬಲ್ ಶಿಂಧೆ ಅವರನ್ನು ಅಮಿತಾಬ್ ಬಚ್ಚನ್ ಗೆ ಅಂಗರಕ್ಷಕರಾಗಿ ನೇಮಿಸಲಾಯಿತು. ಅವರು ಕಳೆದ ಹಲವು ವರ್ಷಗಳಿಂದ ಬಿಗ್ ಬಿ ಅಂಗರಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ, ಶಿಂಧೆ ವಾರ್ಷಿಕ ಆದಾಯ 1.5 ಕೋಟಿ ಎಂದು ವರದಿಗಳು ಹೊರಬಂದವು. ಶಿಂಧೆ ಬಿಗ್ ಬಿ ಅಥವಾ ಬೇರೆಯವರಿಂದ ಹಣ ಸಂಪಾದಿಸಿದ್ದಾರೆಯೇ ಎಂದು ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ತಮ್ಮ ಪತ್ನಿ ಭದ್ರತಾ ಏಜೆನ್ಸಿ ನಡೆಸುತ್ತಿದ್ದಾರೆ ಎಂದು ಶಿಂಧೆ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಭದ್ರತಾ ಸಂಸ್ಥೆ ಹಲವಾರು ಇತರ ಸೆಲೆಬ್ರಿಟಿಗಳಿಗೆ ಮತ್ತು ಹೆಸರಾಂತ ಜನರಿಗೆ ಭದ್ರತೆಯನ್ನು ಒದಗಿಸುತ್ತದೆ ಎಂದು ಮೂಲಗಳು ತಿಳಿಸಿವೆ. ಅಮಿತಾಬ್ ಬಚ್ಚನ್ ತಮಗೆ 1.5 ಕೋಟಿ ರೂಪಾಯಿಗಳನ್ನು ಪಾವತಿಸಿಲ್ಲ ಎಂದೂ ಅವರು ಹೇಳಿದರು.
ಮುಂಬೈ ಪೊಲೀಸರ ಪ್ರಕಾರ, ಒಬ್ಬ ಪೋಲೀಸರನ್ನು ಒಂದೇ ಸ್ಥಳದಲ್ಲಿ ಐದು ವರ್ಷಗಳಿಗಿಂತ ಹೆಚ್ಚು ಕಾಲ ನಿಯೋಜಿಸಲಾಗುವುದಿಲ್ಲ. ಜಿತೇಂದ್ರ ಶಿಂಧೆ 2015 ರಿಂದ ಅಮಿತಾಬ್ ಬಚ್ಚನ್ ಅವರ ಅಂಗರಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಚ್ಚನ್ ಎಕ್ಸ್ ದರ್ಜೆಯ ಭದ್ರತೆ ಹೊಂದಿದ್ದಾರೆ. ಹೀಗಾಗಿ ಇಬ್ಬರು ಕಾನ್‌ಸ್ಟೆಬಲ್‌ಗಳನ್ನು ಯಾವಾಗಲೂ ಅವರೊಂದಿಗೆ ನೇಮಿಸಲಾಗುತ್ತದೆ. ಶಿಂಧೆ ಬಿಗ್‌ ಬಿ ಅಮಿತಾಬ್‌ ಬಚ್ಚನ್ ಅವರ ನೆಚ್ಚಿನ ಅಂಗರಕ್ಷಕರಲ್ಲಿ ಒಬ್ಬರಾಗಿದ್ದರು. ಶಿಂಧೆ ಎಲ್ಲ ಸ್ಥಳಗಳಲ್ಲಿ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಕಾನ್ ಸ್ಟೇಬಲ್ ಈಗ ದಕ್ಷಿಣ ಮುಂಬೈನ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದಾರೆ.

ಪ್ರಮುಖ ಸುದ್ದಿ :-   ಇವಿಎಂ ಮತಗಳ ಜೊತೆ ವಿವಿಪ್ಯಾಟ್ ಮತಗಳ ಸಂಪೂರ್ಣ ಎಣಿಕೆ : ಎಲ್ಲ ಅರ್ಜಿಗಳನ್ನು ವಜಾ ಮಾಡಿದ ಸುಪ್ರೀಂ ಕೋರ್ಟ್

ಶಿಂಧೆ ಅವರು ತಮ್ಮ ಆಸ್ತಿಯ ವಿವರಗಳನ್ನು ಪೊಲೀಸ್ ಇಲಾಖೆಗೆ ಒದಗಿಸಿದ್ದಾರೆಯೇ ಎಂದು ರಾಜ್ಯ ಸರ್ಕಾರವು ಪರಿಶೀಲಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement