ಕುಮಟಾ: ಭತ್ತಕ್ಕೆ ಬೆಂಕಿರೋಗ-ಮಾಹಿತಿಯ ಕೊರತೆ, ಸಂಕಷ್ಟದಲ್ಲಿ ಭತ್ತದ ರೈತ

ಕುಮಟಾ;ಭತ್ತ ಬೆಳೆದ ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ. ಫಸಲು ಬರುವ ಸಂದರ್ಭಲ್ಲಿ ಭತ್ತಕ್ಕೆ ಬೆಂಕಿ ರೋಗ ಮತ್ತು ಕಾಡು ಪ್ರಾಣಿಗಳ ಉಪಟಳ ಹಾಗೂ ಕೃಷಿ ಅಧಿಕಾರಿಗಳಿಂದ ಸರಿಯಾಗಿ ಸಿಗದ ಮಾಹಿತಿಯಿಂದ ಭತ್ತ ಬೆಳೆಯುವದೇ ನಿಷ್ಟ್ರಯೋಜಕ ಎನ್ನುವುದು ರೈತರು ಹೇಳುವ ಮಾತು.
ಕೃಷಿ ಇಲಾಖೆಯಿಂದ ಪ್ರತಿವರ್ಷ ಬಿತ್ತನೆ ಬೀಜ ತಂದಿದ್ದೆವು ೪ ತಿಂಗಳಿಗೆ ಉತ್ಪಾದನೆ ಬರುತ್ತದೆ ಎಂದಿದ್ದರು ಆದರೆ ಒಂದು ತಿಂಗಳ ಮೊದಲೇ ಭತ್ತದ ಕದಿರು ಬಂದಿದೆ. ಊರಲ್ಲಿ ಕೆಲವು ರೈತರ ಹೊಲದಲ್ಲಿ ಭತ್ತದ ಫಸಲು ಬಂದಿರುವುದರಿಂದ ಕಾಡು ಹಂದಿ ಮತ್ತು ಪಕ್ಷಿಗಳಿಂದ ಬೆಳೆ ಉಳಿದರೆ ಸಾಕಪ್ಪ ಎನ್ನುತ್ತಿರುವಾಗ ಬೆಂಕಿ ರೋಗ ಅವರಸಿದ್ದು, ಸಂಪೂರ್ಣವಾಗಿ ಭತ್ತದ ಫಸಲು ನಾಶವಾಗುತ್ತಿದೆ ಎಂದು ಕಡ್ಲೆಯ ರೈತ ಶ್ರೀಧರ ಭಟ್ಟ ಹೇಳುತ್ತಾರೆ. ಕೃಷಿ ಜೊತೆಗೆ ಕೃಷಿ ಇಲಾಖೆಯಿಂದ ನಿರ್ದಿಷ್ಟವಾದ ಕೃಷಿ ಮಾಹಿತಿ ಸಿಗದೆ ಇರುವುದು ಈ ಅವಾಂತರಕ್ಕೆ ಮುಖ್ಯಕಾರಣವಾಗಿದೆ.ನಮಗಾಗುತ್ತಿರುವ ನಷ್ಟದ ಬಗ್ಗೆ ಯಾರಿಗೂ ಕನಿಷ್ಠ ಕಾಳಜೀಯು ಇಲ್ಲದಿರುವುದು ಬೆಸರದ ಸಂಗತಿ ಎಂದು ಕೃಷಿ ಅಧಿಕಾರಿಗಳ ಬೆಜವಾಬ್ದಾರಿಯನ್ನು ಶ್ರೀಧರ ಭಟ್ಟ ಹೇಳುತ್ತಾರೆ.
ಬೆಂಕಿರೋಗ; ಹಣ್ಣೇಮಠ,ಮಡವಾಳ ಕೇರಿ, ಹಳ್ಳದ ಕೇರಿ ಮೊದಲಾದ ಊರುಗಳಲ್ಲಿ ಬೆಂಕಿರೋಗ ಬಂದಿದ್ದು ಈ ಪ್ರದೇಶದಲ್ಲಿ ಇಳುವರಿ ಕನಿಷ್ಠ ಹಂತಕ್ಕೆ ಮುಟ್ಟಬಹುದು ಎಂದು ಅಂದಾಜಿಸಲಾಗಿದೆ. ಕೃಷಿ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಹಾರಿಕೆಯ ಉತ್ತರಕ್ಕೆ ತೃಪ್ತಿ ಪಡಬೇಕಾಗಿದೆ.ಕನಿಷ್ಠ ರೈತರ ಹೊಲಕ್ಕೆ ಬಂದು ಬೆಂಕಿ ರೋಗದ ಬಗ್ಗೆ ವೀಕ್ಷಿಸುವ ಕೇಲಸವನ್ನು ಮಾಡಿಲ್ಲ ಎನ್ನುವುದು ರೈತರ ನಿರಾಶೆಯ ಮಾತಾಗಿದೆ.
ಈ ವರ್ಷ ಮಳೆ ಉತ್ತಮವಾಗಿ ಬರುತ್ತಿದ್ದು ಸರಿಯಾದ ಸಮಯದಲ್ಲಿ ನಾಟಿಯು ಮುಗಿದಿತ್ತು. ಭತ್ತದ ಗದ್ದೆ ಉತ್ತಮವಾಗಿದ್ದು ರೈತರ ಮುಖದಲ್ಲಿ ಸಂತಸ ಇರುವ ಸಂದರ್ಭದಲ್ಲೇ ಬೆಂಕಿರೋಗ ಕಾಣಿಸಿಕೊಂಡಿದ್ದು ರೈತರು ಹತಾಶರಾಗುತ್ತಿದ್ದಾರೆ.
ಒಂದು ಕಡೆಗೆ ಕೃಷಿಯ ಉದ್ಧಾರದ ಬಗ್ಗೆ ಮಾತಾಡಲಾಗುತ್ತದೆ. ಆದರೆ ಇವರಾರಿಗೂ ಕೃಷಿಯ ಬಗ್ಗೆ ಕನಿಷ್ಟ ಜ್ಞಾನವು ಇದ್ದಂತಿಲ್ಲ ಎಂದು ರೈತರು ಬೇಸರದಿಂದ ಹೇಳುತ್ತಾರೆ.ಈ ವರ್ಷ ಕೆಲವು ರೈತರು ಬಿಳಿ ಅಕ್ಕಿಯಾಗುವ ೪೫ ದಿನಕ್ಕೆ ಆಗುವ ಬಿತ್ತನೆ ಬೀಜ ಕೇಳಿದ್ದೆವು ,ನೋಡೋಣ ಎಂದು ಸಬೂಬು ಹೇಳಿದ್ದು ಬಿಟ್ಟರೆ ಮತ್ತೇನೂ ಆಗಿಲ್ಲ. ರಸಗೊಬ್ಬರವು ವೇಳೆಗೆ ಸರಿಯಾಗಿ ಲಭ್ಯವಾಗಿಲ್ಲ.ಇದರಿಂದ ಇಳುವರಿ ಕಡಿಮೆಯಾಗುವುದರಲ್ಲಿ ಸಂಶಯವೇ ಇಲ್ಲ ಎಂದು ರೈತ ನಾರಾಯಣ ಪಟಗಾರ ಹೇಳುತ್ತಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement