ಕರ್ನಾಟಕದಲ್ಲಿ ಸಾವಿರಕ್ಕಿಂತ ಕಡಿಮೆಗೆ ಇಳಿದ ಕೊರೊನಾ ಹೊಸ ಸೋಂಕು..!

ಬೆಂಗಳೂರು: ಕೊರೊನಾ ಸೋಂಕು ಇಳಿಕೆಯಾಗಿದ್ದು, ಇಂದು (ಸೋಮವೃ೦ ರಾಜ್ಯದಲ್ಲಿ ಸಾವಿರಕ್ಕೂ ಕಡಿಮೆ ಪ್ರಕರಣಗಳು ದಾಖಲಾಗಿದೆ. ರಾಜ್ಯದಲ್ಲಿ 973 ಜನಕ್ಕೆ ಸೋಂಕು ತಗುಲಿದ್ದು, 15 ಮಂದಿ ಮೃತಪಟ್ಟಿದ್ದಾರೆ. ಇದೇ ಸಮಯದಲ್ಲಿ 1,324 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
ರಾಜ್ಯದಲ್ಲಿ 18,392 ಸಕ್ರಿಯ ಪ್ರಕರಣಗಳಿದ್ದು, ಕೋವಿಡ್-19 ಸೋಂಕು ಹರಡುವಿಕೆ ಶೇಕಡಾವಾರು ಪ್ರಮಾಣ ಶೇ.0.64 ಮತ್ತು ಮರಣ ಪ್ರಮಾಣ ಶೇ.1.54ಕ್ಕೆ ಇಳಿಕೆಯಾಗಿದೆ. ರಾಜ್ಯದಲ್ಲಿ ಇದುವರೆಗೂ 29,48,228 ಕೊರೊನಾ ಪ್ರಕರಣಗಳು ವರದಿಯಾಗಿದ್ದು,ಮೃತಪಟ್ಟವರ ಸಂಖ್ಯೆ 37,293ಕ್ಕೆ ಏರಿಕೆಯಾಗಿದೆ.
ಮಹಾನಗರಿ ಬೆಂಗಳೂರಿನಲ್ಲಿ ಇಂದು 264 ಜನರಿಗೆ ಸೋಂಕು ತಗುಲಿದೆ. ಸದ್ಯ ಬೆಂಗಳೂರಿನಲ್ಲಿ 7,343 ಸಕ್ರಿಯ ಪ್ರಕರಣಗಳಿವೆ.
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬೆಂಗಳೂರು ನಗರ- 264, ದಕ್ಷಿಣ ಕನ್ನಡ- 193, ಹಾಸನ- 74, ಉಡುಪಿ- 98, ಅತಿ ಹೆಚ್ಚು ಕೊರೊನಾ ಸೋಂಕು ದಾಖಲಾದ ಜಿಲ್ಲೆಗಳಾಗಿವೆ.
ಜಿಲ್ಲಾವಾರು ಸಂಪೂರ್ಣ ಮಾಹಿತಿಯನ್ನು ಪಿಡಿಎಫ್‌ನಲ್ಲಿ ಕೊಡಲಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement