ಜೇಬಿನಲ್ಲಿ ಕಾಂಡೋಮ್​ ಇಟ್ಟುಕೊಂಡೇ ಓಡಾಡುತ್ತಿದ್ದ ಮೈಸೂರು ಗ್ಯಾಂಗ್​ರೇಪ್ ಆರೋಪಿ..!

ಮೈಸೂರು: ಚಾಮುಂಡಿ ಬೆಟ್ಟದ ತಪ್ಪಲಲ್ಲಿ ಎಂಬಿಎ ವಿದ್ಯಾರ್ಥಿನಿ ಮೇಲೆ ನಡೆದ ಗ್ಯಾಂಗ್​ರೇಪ್​ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಸ್ಫೋಟಕ ಮಾಹಿತಿಗಳು ಹೊರಬರುತ್ತಿವೆ.
ಬಂಧಿತ ಐವರು ಆರೋಪಿಗಳ ಪೈಕಿ ಓರ್ವ ಜೇಬಿನಲ್ಲಿ ಸದಾ ಕಾಂಡೋಮ್​ ಇಟ್ಟುಕೊಂಡೇ ತಿರುಗಾಡುತ್ತಿದ್ದ ಎಂಬ ಸ್ಫೋಟಕ ಮಾಹಿತಿ ಪೊಲೀಸ್‌ ವಿಚಾರಣೆ ವೇಳೆ ಬಯಲಾಗಿದೆ. ಈ ಗ್ಯಾಂಗ್​ನಲ್ಲಿ ಈತನೇ ನಟೋರಿಯಸ್​ ಅಂತೆ.
ಯಾವಾಗಲೂ ಕಾಂಡೋಮ್​​ ಅನ್ನು ಜೇಬಿನಲ್ಲಿ ಇಟ್ಟುಕೊಳ್ತಿದ್ದ ಆರೋಪಿ, ಹಗಲಿನಲ್ಲಿ ನಿದ್ರಿಸುತ್ತಿದ್ದನಂತೆ. ಈ ಗ್ಯಾಂಗ್​ನ ಉಳಿದ ಸದಸ್ಯರು ಹೆಚ್ಚಾಗಿ ಹಣ ಮತ್ತು ಆಭರಣಕ್ಕೆ ಬೇಡಿಕೆ ಇಡುತ್ತಿದ್ದರೆ, ಈತನಿಗೆ ಮಾತ್ರ ಸ್ತ್ರೀ ಸಂಗ ಮುಖ್ಯವಾಗಿತ್ತಂತೆ.
ಸಂಜೆಯಾಗುತ್ತಿದ್ದಂತೆ ನಿರ್ಜನ ಪ್ರದೇಶದಲ್ಲಿ ಕಳ್ಳತನ, ದರೋಡೆಗೆ ಹೊಂಚು ಹಾಕುತ್ತಾ ಕುಳಿತಿರುತ್ತಿದ್ದ ಈ ಗ್ಯಾಂಗ್​, ಅಲ್ಲಿ ಓಡಾಡುವ ಪ್ರೇಮಿಗಳು, ಯುವತಿಯರು-ಮಹಿಳೆಯರನ್ನ ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದರು. ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವನ್ನೂ ಎಸಗಿದ್ದಾರೆ ಎಂಬ ಅಂಧ ಈಗ ಬೆಳಕಿಗೆ ಬರುತ್ತಿದೆ. ಗ್ಯಾಂಗ್ ರೇಪ್ ಸ್ಥಳದಲ್ಲಿ ಸಿಕ್ಕಿದ್ದು ಈತನೇ ಬಳಸಿದ ಕಾಂಡೋಮ್ ಎಂಬ ವಿಚಾರ ಪೊಲೀಸ್‌ ಮೂಲಗಳಿಂದ ತಿಳಿದು ಬಂದಿದೆ.
ಆರೋಪಿಗಳು ನಿರ್ಜನ ಪ್ರದೇಶವನ್ನೇ ಅಪರಾಧ ಕೇಂದ್ರವನ್ನಾಗಿ ಮಾಡಿಕೊಂಡಿದ್ದರು. ಈ ಹಿಂದೆಯೂ ಈ ಗ್ಯಾಂಗ್ ಹಲವು ಮಂದಿಗೆ ಬೆದರಿಸಿ ಹಣವನ್ನು ದೋಚಿದ್ದರು. ಆದರೆ ಅವರು ಯಾರೂ ಪೊಲೀಸರಿಗೆ ದೂರು ನೀಡಿರಲಿಲ್ಲ. ಹೀಗಾಗಿ ಮತ್ತಷ್ಟು ಧೈರ್ಯಗೊಂಡು ನೀಚ ಕೃತ್ಯಕ್ಕೆ ಇಳಿದಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ.
ಮೈಸೂರಿನಲ್ಲಿ ಎಂಬಿಎ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಲಲಿತಾದ್ರಿಪುರ ನಿರ್ಜನ ಪ್ರದೇಶದಲ್ಲಿ ಬಿಯರ್ ಬಾಟಲಿ, ಬಳಸಿ ಬಿಸಾಡಿದ ಕಾಂಡೋಮ್ ಸಿಕ್ಕಿದ್ದು, ಈ ಗ್ಯಾಂಗ್ ದುಷ್ಕೃತ್ಯಕ್ಕೆ ಇನ್ನಷ್ಟು ಪುಷ್ಟ ನೀಡಿದೆ.

ಪ್ರಮುಖ ಸುದ್ದಿ :-   ಕರ್ನಾಟಕದ ಈ ಜಿಲ್ಲೆಗಳಲ್ಲಿ ಇಂದಿನಿಂದ ಒಂದು ವಾರದ ವರೆಗೆ ಜೋರಾಗಿ ಮಳೆ : ಮುನ್ಸೂಚನೆ

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement