ಅಮೆರಿಕ ಪ್ರಮಾದಕ್ಕೆ 6 ಮಕ್ಕಳು ಸೇರಿದಂತೆ ಒಂದೇ ಕುಟುಂಬದ 10 ಜನರ ಸಾವು

ಕಾಬೂಲ್‌: ಭಾನುವಾರ ಅಮೆರಿಕದಿಂದ ಯಡವಟ್ಟು ನಡೆದಿದೆ. ಐಸಿಸ್-ಕೆ ಉಗ್ರರನ್ನು ಗುರಿಯಾಗಿಸಿ ನಡೆಸಿದ ಡ್ರೋಣ್ ದಾಳಿ ಭೀಕರ ದುರಂತದಲ್ಲಿ ಅಂತ್ಯವಾಗಿದೆ. ಐಸಿಸ್-ಕೆ ಉಗ್ರರ ಕೊಲ್ಲಲು ಅಮೆರಿಕ ಮಾಡಿದ ಡ್ರೋನ್‌ ದಾಳಯಿಂದ ಉಗ್ರರೇನೋ ಸತ್ತರು. ಆದರೆ ಅವರ ಕಾರಿನಲ್ಲಿ ಇದ್ದ ಬಾಂಬ್‌ ಸ್ಪೋಟಿಸಿದ್ದರಿಂದ ಈ ದಾಳಿಯಲ್ಲಿ ಆರು ಮಕ್ಕಳೂ ಸೇರಿದಂತೆ ಒಂದೇ ಕುಟುಂಬದ 10 ಜನ ಸತ್ತಿದ್ದಾರೆ.
ಡ್ರೋನ್‌ ದಾಳಿಯಲ್ಲಿ ಅವರ ಮನೆಯ ಬಳಿ ಪಾರ್ಕ್ ಆಗಿದ್ದ ಕಾರೊಂದು ಸ್ಫೋಟಿಸಿದಾಗ ಈ ದುರ್ಘಟನೆ ನಡೆದಿದೆ. ಅಫ್ಘಾನಿಸ್ತಾನದ ಐಸಿಸ್ ಗುಂಪಿಗೆ ಸೇರಿದ ಕನಿಷ್ಠ ಒಬ್ಬ ಉಗ್ರಗಾಮಿಯನ್ನು ಹೊತ್ತಿದ್ದ ಕಾರನ್ನು ತಾನು ಟಾರ್ಗೆಟ್ ಮಾಡಿರುವುದಾಗಿ ಅಮೇರಿಕದ ಸೇನೆ ಹೇಳಿದೆ.
ಕಾರು ಸ್ಫೋಟಕ್ಕೆ ಸತ್ತವರಲ್ಲಿ ಆರು ಮಕ್ಕಳಲ್ಲಿ ಎಲ್ಲರಿಗಿಂತ ಚಿಕ್ಕವಳು 2 ವರ್ಷ ವಯಸ್ಸಿನ ಸುಮಯಾ ಆಗಿದ್ದರೆ ಎಲ್ಲರಿಗಿಂತ ದೊಡ್ಡವನು 12 ವರ್ಷದ ಫರ್ಜಾದ್ ಆಗಿದ್ದಾನೆ. ಈ ಕುಟುಂಬದ ಸಂಬಂಧಿಕರು ಅಮೆರಿಕನ್‌ ಸೇನೆಗೆ ಹಿಡಿಶಾಪ ಹಾಕುತ್ತಿದ್ದಾರೆ.
ಅವರು ಮಾಡಿದ್ದು ಘೋರ ಅಪರಾಧ, ಒಂದು ತಪ್ಪು ಮಾಹಿತಿಯನ್ನು ಆಧರಿಸಿ ಅವರು ದಾಳಿ ನಡೆಸಿದ್ದಾರೆ, ಅವರ ಮೂರ್ಖತನಕ್ಕೆ ನಮ್ಮ ಕುಟುಂಬ ಬಲಿಯಾಗಿದೆ. ನಮ್ಮ ಅಮಾಯಕ ಮಕ್ಕಳು ಯಾವ ತಪ್ಪು ಮಾಡಿದ್ದರು? ಅವರ ದೇಹಗಳು ಗುರುತು ಸಹ ಹಿಡಿಯಲಾಗದಷ್ಟು ಸುಟ್ಟು ಕರಕಲಾಗಿವೆ,’ ಎಂದು ಕುಟುಂಬದ ಸಂಬಂಧಿಯಾಗಿರುವ ರಾಮಿನ್ ಯೂಸುಫಿ ಬಿಬಿಸಿ ಚ್ಯಾನೆಲ್ ವರದಿಗಾರನೊಂದಿಗೆ ಮಾತಾಡುವಾಗ ರೋದಿಸುತ್ತಾ ಹೇಳಿದ್ದಾರೆ.
ಈ ದಾಳಿಯಲ್ಲಿ ಸತ್ತ ಎರಡು ವರ್ಷದ ಸುಮಯಾ ನನ್ನ ಮಗಳಾಗಿದ್ದಳು,’ ಎಂದು ಎಮಲ್ ಅಹ್ಮದಿ ಹೆಸರಿನ ಮತ್ತೊಬ್ಬ ವ್ಯಕ್ತಿ ಹೇಳಿದ್ದಾರೆ.
ಅಹ್ಮದಿ ಹೇಳಿರುವಂತೆ, ಅವರ ಕುಟುಂಬ ಅಮೆರಿಕಕ್ಕೆ ವಲಸೆ ಹೋಗಲು ನಿರ್ಧರಿಸಿ ದೇಶ ತೊರೆಯುವ ಅನುಮತಿಗಾಗಿ ಅರ್ಜಿ ಸಲ್ಲಿಸಿತ್ತು. ದಾಳಿ ನಡೆದಾಗ ಅವರೆಲ್ಲ ವಿಮಾನ ನಿಲ್ದಾಣದಿಂದ ಬರಬೇಕಿದ್ದ ಕರೆಯ ನಿರೀಕ್ಷಣೆಯಲ್ಲಿದ್ದರು. ಸತ್ತವರಲ್ಲಿ ಅಹ್ಮದ್ ನಾಸೆರ್ ಹೆಸರಿನ ವ್ಯಕ್ತಿ ಸೇರಿದ್ದು ಅವರು ಅಮೇರಿಕದ ಪಡೆಗಳಿಗೆ ಭಾಷಾಂತರಕಾನಾಗಿ ಕೆಲಸ ಮಾಡಿದ್ದರು. ಸತ್ತವರಲ್ಲಿ ಕೆಲವರು ಅಂತಾರರಾಷ್ಟ್ರೀಯ ಸಂಸ್ಥೆಗಳಿಗೆ ಕೆಲಸ ಮಾಡಿದ್ದರು ಹಾಗೂ ಅಮೆರಿಕಾಗೆ ತೆರಳುವ ವೀಸಾ ಹೊಂದಿದ್ದರು ಎಂದು ವರದಿ ತಿಳಿಸಿದೆ.

ಪ್ರಮುಖ ಸುದ್ದಿ :-   ಹೆಲಿಕಾಪ್ಟರ್ ಅಪಘಾತದಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ, ವಿದೇಶಾಂಗ ಸಚಿವ ಸಾವು

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement