ನೋಯ್ಡಾ: 40 ಅಂತಸ್ತಿನ ಅವಳಿ ಕಟ್ಟಡ ಕೆಡವಲು ಸುಪ್ರೀಂಕೋರ್ಟ್ ಆದೇಶ

ನವದೆಹಲಿ: ಕಟ್ಟಡದ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ನೋಯ್ಡಾದಲ್ಲಿರುವ ಸೂಪರ್ ಟೆಕ್ ಎಮರಾಲ್ಡ್‌ ಯೋಜನೆಯ 40 ಅಂತಸ್ತಿನ ಟವರುಗಳನ್ನು ಕೆಡವಲು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದ್ದು, ಮೂರು ತಿಂಗಳು ಗಡುವು ನೀಡಿದೆ.
ಮನೆ ಖರೀದಿದಾರಿಗೆ ಬುಕಿಂಗ್ ಮಾಡಿದ ಸಮಯದಿಂದ ಸಂಪೂರ್ಣ ಮೊತ್ತವನ್ನು ಶೇ.12 ರ ಬಡ್ಡಿಯೊಂದಿಗೆ ಮರುಪಾವತಿ ಮಾಡಬೇಕು ಮತ್ತು ಅವಳಿ ಗೋಪುರಗಳ ನಿರ್ಮಾಣದಿಂದ ಉಂಟಾದ ಕಿರುಕುಳಕ್ಕೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಕ್ಕೆ 2 ಕೋಟಿ ರೂ.ಗಳನ್ನು ನೀಡಬೇಕು ಎಂದು ಸಹ ಸುಪ್ರೀಂ ಕೋರ್ಟ್ ತಿಳಿಸಿದೆ.

ನ್ಯಾಯಮೂರ್ತಿಗಳಾದ ಡಿ.ವೈ ನೇತೃತ್ವದ ಪೀಠ ದೊಡ್ಡ ನಗರಗಳಲ್ಲಿ ಹೆಚ್ಚಿನ ವಸತಿಗಳ ಅಗತ್ಯತೆಯೊಂದಿಗೆ ಪರಿಸರದ ರಕ್ಷಣೆ ಮತ್ತು ನಾಗರಿಕರ ಕಲ್ಯಾಣ ಮತ್ತು ಸುರಕ್ಷತೆ ಸಮತೋಲನಗೊಳಿಸಬೇಕು ಎಂದು ಹೇಳಿದೆ. ಕಾನೂನುಬಾಹಿರ ನಿರ್ಮಾಣ ಚಟುವಟಿಕೆಗಳನ್ನು ಕಟ್ಟುನಿಟ್ಟಾಗಿ ನಿಭಾಯಿಸಬೇಕಿತ್ತು ಎಂದು ನ್ಯಾಯಾಲಯವು ತೀರ್ಪಿನಲ್ಲಿ ಹೇಳಿದೆ,

ಬಿಲ್ಡರ್ ಮತ್ತು ಯೋಜಕರ ನಡುವೆ ಅಪವಿತ್ರ ಸಂಬಂಧವಿದೆ … ಇದರ ವಿರುದ್ಧ ಧ್ವನಿ ಎತ್ತಿದ ಕೆಲವರಿಗೆ ಮಾಹಿತಿಯ ಪ್ರವೇಶವನ್ನು ನಿರಾಕರಿಸಲಾಗಿದೆ … ಕಾನೂನುಬದ್ಧ ಕಾಳಜಿಯನ್ನು ಪರಿಹರಿಸಲು ಕಾನೂನು ಮಧ್ಯಪ್ರವೇಶಿಸಬೇಕು” ಎಂದು ಸುಪ್ರೀಂ ಕೋರ್ಟ್ ಹೇಳಿದೆ.
2009 ರಲ್ಲಿ ನೋಯ್ಡಾ ಎರಡು ಗೋಪುರಗಳ ನಿರ್ಮಾಣಕ್ಕೆ ನೀಡಿದ ಅನುಮತಿಯು ರಾಷ್ಟ್ರೀಯ ಕಟ್ಟಡ ಸಂಹಿತೆಯನ್ನು ಉಲ್ಲಂಘಿಸಿದೆ. . ನಿರ್ಮಾಣಗಳು ಅಗ್ನಿ ಸುರಕ್ಷತಾ ಮಾನದಂಡಗಳನ್ನು ಮತ್ತು ಉತ್ತರ ಪ್ರದೇಶ ಅಪಾರ್ಟ್ಮೆಂಟ್ ಕಾಯಿದೆಯನ್ನು ಉಲ್ಲಂಘಿಸಿವೆ ಎಂದು ಅದು ಹೇಳಿದೆ
ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್ ಮತ್ತು ಎಮ್.ಆರ್.ಷಾ ಅವರಿದ್ದ ನ್ಯಾಯಪೀಠವು ಅವಳಿ ಗೋಪುರಗಳನ್ನು ಕೆಡವಲು ನಿರ್ದೇಶಿಸಿದ ಅಲಹಾಬಾದ್ ಹೈಕೋರ್ಟ್ 2014 ರ ಏಪ್ರಿಲ್ 11 ರ ತೀರ್ಪು ಯಾವುದೇ ಹಸ್ತಕ್ಷೇಪಕ್ಕೆ ಅರ್ಹವಲ್ಲ ಎಂದು ಹೇಳಿದೆ. ಸೂಪರ್ ಟೆಕ್ 40 ಅಂತಸ್ತಿನ ಅವಳಿ ಗೋಪುರಗಳ ನಿರ್ಮಾಣವು 915 ಪ್ಲ್ಯಾಟ್‍ಗಳು ಮತ್ತು ಅಂಗಡಿಗಳಿವೆ. ಅವಳಿ ಗೋಪುರಗಳ ಉರುಳಿಸುವಿಕೆಯನ್ನು ಮೂರು ತಿಂಗಳಲ್ಲಿ ನಡೆಸಬೇಕು ಮತ್ತು ಸಂಪೂರ್ಣ ವೆಚ್ಚವನ್ನು ಸೂಪರ್ಟೆಕ್ ಲಿಮಿಟೆಡ್ ಭರಿಸಬೇಕು ಎಂದು ಪೀಠ ಹೇಳಿದೆ.

ಪ್ರಮುಖ ಸುದ್ದಿ :-   ಅಕ್ರಮ ಹಣ ವರ್ಗಾವಣೆ ಪ್ರಕರಣ : ಕೇಜ್ರಿವಾಲಗೆ ದೆಹಲಿ ಹೈಕೋರ್ಟ್‌ ನಿಂದ ಸಿಗದ ಜಾಮೀನು

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement