ಗೂಗಲ್‌ ನಲ್ಲಿ ಕೋವಿಡ್‌-19 ಲಸಿಕೆ ಲಭ್ಯತೆ, ಸ್ಲಾಟ್‌ ಬಗ್ಗೆ ಮಾಹಿತಿಗೆ ನನ್ನ ಹತ್ತಿರ ಕೋವಿಡ್ ಲಸಿಕೆ (covid vaccine near me) ಹುಡುಕಿ

ನವದೆಹಲಿ: ಭಾರತದಲ್ಲಿ ಪ್ರತಿಯೊಬ್ಬರಿಗೂ ಕೊರೊನಾ ವೈರಸ್ ಲಸಿಕೆ ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮತ್ತೊಂದು ಹೆಜ್ಜೆ ಇರಿಸಿದೆ. ದೇಶದ 13,000 ಕೇಂದ್ರಗಳಲ್ಲಿ ಲಸಿಕೆಯ ಕುರಿತು ಮಾಹಿತಿ ಹಾಗೂ ಲಭ್ಯತೆಯ ಬಗ್ಗೆ ಗೂಗಲ್ ಮೂಲಕ ತಿಳಿದುಕೊಳ್ಳಬಹುದಾಗಿದ್ದು, ಈ ಯೋಜನೆಯು ಇದೇ ವಾರದಿಂದ ಜಾರಿಗೆ ಬರಲಿದೆ ಎಂದು ತಿಳಿಸಲಾಗಿದೆ.
ಕೊವಿನ್ ಅಪ್ಲಿಕೇಷನ್ ಒದಗಿಸುವ ವಾಸ್ತವಿಕ ದತ್ತಾಂಶವನ್ನು ಆಧರಿಸಿ ಪ್ರತಿಯೊಂದು ಲಸಿಕೆ ಕೇಂದ್ರದಲ್ಲಿ ಎಷ್ಟು ಪ್ರಮಾಣದ ಲಸಿಕೆ ಲಭ್ಯವಿದೆ ಎಂಬುದರ ಮಾಹಿತಿಯನ್ನು ನೀಡಲಾಗುತ್ತದೆ. ಮೊದಲ ಡೋಸ್ ಹಾಗೂ ಎರಡನೇ ಡೋಸ್ ಪ್ರಮಾಣ ಎಷ್ಟಿದೆ. ಹಣ ಪಾವತಿಸುವ ಮತ್ತು ಉಚಿತ ಲಸಿಕೆ ಪ್ರಮಾಣ ಎಷ್ಟಿದೆ ಎಂಬುದರ ಎಲ್ಲ ಮಾಹಿತಿ ಗೂಗಲ್‌ ಮೂಲಕ ಪಡೆದುಕೊಳ್ಳಬಹುದು. ತದನಂತರ ಕೊವಿನ್ ಅಪ್ಲಿಕೇಶನ್ ಮೂಲಕ ಲಸಿಕೆಗಾಗಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ.
ಗೂಗಲ್ ಬಳಕೆದಾರರು ತಮ್ಮ ಹತ್ತಿರದ ಲಸಿಕೆ ಕೇಂದ್ರಗಳನ್ನು ಹುಡುಕಿದಾಗ ಅಥವಾ Google ಹುಡುಕಾಟ, ನಕ್ಷೆಗಳು ಮತ್ತು ಗೂಗಲ್ ಅಸಿಸ್ಟೆಂಟ್‌ನ ಯಾವುದೇ ನಿರ್ದಿಷ್ಟ ಪ್ರದೇಶದಲ್ಲಿ ಹುಡುಕಿದಾಗ ಮಾಹಿತಿ ಸ್ವಯಂಚಾಲಿತವಾಗಿ ತೋರಿಸುತ್ತದೆ. ಇಂಗ್ಲಿಷ್ ಜೊತೆಗೆ ಬಳಕೆದಾರರು ಕನ್ನಡ, ಹಿಂದಿ, ಬಂಗಾಳಿ, ತೆಲುಗು, ತಮಿಳು, ಮಲಯಾಳಂ,ಗುಜರಾತಿ ಮತ್ತು ಮರಾಠಿ ಸೇರಿದಂತೆ ಎಂಟು ಭಾರತೀಯ ಭಾಷೆಗಳಲ್ಲೂ ಲಸಿಕೆ ಬಗ್ಗೆ ಹುಡುಕಬಹುದಾಗಿದೆ.
2021ರ ಮಾರ್ಚ್‌ ತಿಂಗಳಿನಿಂದ ಗೂಗಲ್ ಸಂಸ್ಥೆಯು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಸಹಭಾಗಿತ್ವದಲ್ಲಿ ಕೋವಿಡ್‌-19 ಲಸಿಕೆ ಕೇಂದ್ರಗಳ ಮಾಹಿತಿ ತೋರಿಸಲು ಪ್ರಾರಂಭಿಸಿತು. “ಜನರು ಸಾಂಕ್ರಾಮಿಕಕ್ಕೆ ಸಂಬಂಧಿಸಿದ ಮಾಹಿತಿ ಹುಡುಕುತ್ತಲೇ ಇರುವುದರಿಂದ, ನಮ್ಮ ಪ್ಲಾಟ್‌ಫಾರ್ಮ್‌ಗಳಲ್ಲಿ ಅಧಿಕೃತ ಮತ್ತು ಸಕಾಲಿಕ ಮಾಹಿತಿ ಹುಡುಕಲು ಮತ್ತು ಹಂಚಿಕೊಳ್ಳಲು ಬದ್ಧರಾಗಿರುತ್ತೇವೆ” ಎಂದು ಗೂಗಲ್ ಸರ್ಚ್‌ನ ನಿರ್ದೇಶಕಿ ಹೇಮಾ ಬುಡರಾಜು ಹೇಳಿದ್ದಾರೆ.

ಪ್ರಮುಖ ಸುದ್ದಿ :-   50 ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ : ಮಕ್ಕಳನ್ನು ಮನೆಗೆ ಕಳುಹಿಸಿದ ಶಾಲೆಗಳು, ಪರೀಕ್ಷೆಗಳು ಸ್ಥಗಿತ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement