ಮನೆಗಾಗಿ ಭಿಕ್ಷೆ ಬೇಡುತ್ತಿಲ್ಲ, ಇಂದು ಕೊನೆ ಪತ್ರ ಬರೆಯುವೆ: ಸರ್ಕಾರದ ಮೇಲೆ ಹೊರಟ್ಟಿ ಬೇಸರ

ಹುಬ್ಬಳ್ಳಿ: ನನಗೆ ಇದುವರೆಗೂ ಸರ್ಕಾರ ಮನೆ ಕೊಟ್ಟಿಲ್ಲ. ಮನೆ ಕೊಡುವಂತೆ ನಾನು ಭಿಕ್ಷೆ ಬೇಡುತ್ತಿಲ್ಲ. ಇಂದು ಮತ್ತೆ ಸರ್ಕಾರಕ್ಕೆ ಪತ್ರ ಬರೆಯುವೆ. ಇದು ನನ್ನ ಕೊನೆಯ ಪತ್ರ. . ನಾನು ಇನ್ನು ಮುಂದೆ ಮನೆ ಕೇಳುವುದಿಲ್ಲ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮತದಾನ ಮಾಡಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸರ್ಕಾರದವರು ಮನೆ ಕೊಟ್ಟರೆ ಕೊಡಲಿ, ಬಿಟ್ಟರೆ ಬಿಡಲಿ. ಇನ್ಮುಂದೆ ನಾನು ಕೇಳುವುದಿಲ್ಲ ಎಂದು ಹೇಳಿದ್ದು, ಮನೆ ನೀಡುವ ವಿಚಾರವಾಗಿ ಸರ್ಕಾರ ವಿಳಂಬ ಮಾಡುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.
ಶಾಲೆಗಳ ಆರಂಭದ ಬಗ್ಗೆ ಮಾತನಾಡಿದ ಅವರು, ಶಾಲೆ ಆರಂಭ ಮಾಡುವ ಅವಶ್ಯಕತೆ ಇದೆ. ನಾನು ಈ ಹಿಂದೆಯೇ ಶಾಲೆ ಆರಂಭ ಮಾಡಬೇಕು ಎಂದು ಸಲಹೆ ನೀಡಿದ್ದೆ. 1 ರಿಂದ 6 ನೇ ತರಗತಿಯ ಶಾಲೆಗಳನ್ನು ಆರಂಭ ಮಾಡಬೇಕು ಎಂದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement