ಮೀನುಗಾರಿಕೆಗೆ ತೆರಳಿದ್ದ ಬೋಟ್‌ ಮುಳುಗಡೆ: ಮೀನುಗಾರರ ರಕ್ಷಣೆ

ಹೊನ್ನಾವರ:ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಬೋಟ್ ಸಮುದ್ರದಲ್ಲಿ ಮುಳುಗಡೆಯಾದ ಘಟನೆ ಹೊನ್ನಾವರ ತಾಲೂಕಿನ ಕಾಸರಕೋಡ ಟೊಂಕದ ಅಳಿವೆ ಪ್ರದೇಶದಲ್ಲಿ ನಡೆದಿದೆ.
ಮುಳುಗಡೆಯಾದ ಬೋಟನ್ನು ಗಂಗೊಳ್ಳಿ ಮೂಲದ ಶ್ರೀಕೃಷ್ಣ ಭಂಡಾರಿ ಹೆಸರಿನ ಶಿವರಾಮ ಶ್ರೀಯಾನ್‌ ಅವರಿಗೆ ಸೇರಿದ್ದು ಎಂದು ಹೇಳಲಾಗಿದೆ.
ಎರಡು ದಿನಗಳ ಹಿಂದೆ ಹೊನ್ನಾವರದ ಬಂದರಿನಿಂದ ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿತ್ತು ಎನ್ನಲಾಗಿದೆ. ವಾಪಸ್ಸು ಬರುವ ವೇಳೆ ಅಳಿವೆ ಪ್ರದೇಶದಲ್ಲು ಮುಳುಗಡೆಯಾಗಿದೆ. ಬೋಟಿನಲ್ಲಿದ್ದ ಸಾಮಗ್ರಿಗಳು ಸಮುದ್ರ ಪಾಲಾಗಿವೆ. ಎಂಜಿನ್ ಗೆ ಸಮಸ್ಯೆಯಾಗಿದೆ. ಬೋಟಿನಲ್ಲಿದ್ದ 6 ಜನ ಮೀನುಗಾರರನ್ನು ಕರಾವಳಿ ಕಾವಲು ಪಡೆ ಪೊಲೀಸರು ಹಾಗೂ ಸ್ಥಳೀಯ ಮೀನುಗಾರರು ಮತ್ತೊಂದು ಬೋಟಿನ ಮುಲಕ ರಕ್ಷಣೆ ಮಾಡಿದ್ದಾರೆ. ಬೋಟ್ ಮುಳುಗಡೆಯಿಂದ ಲಕ್ಷಾಂತರ ರುಪಾಯಿ ಮೌಲ್ಯದ ವಸ್ತುಗಳ ನಷ್ಟವಾಗಿದೆ ಎಂದು ಹೇಳಲಾಗಿದೆ.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಗದಗ: ನಗರಸಭೆ ಅಧ್ಯಕ್ಷೆ ಪುತ್ರ ಸೇರಿ ನಾಲ್ವರ ಭೀಕರ ಹತ್ಯೆ

ನಿಮ್ಮ ಕಾಮೆಂಟ್ ಬರೆಯಿರಿ

advertisement