ಮತ್ತೆ ಉಲ್ಟಾ..ಕಾಶ್ಮೀರದಲ್ಲಿ ಮುಸ್ಲಿಮರಿಗಾಗಿ ಧ್ವನಿ ಎತ್ತುವ ಹಕ್ಕು ನಮಗಿದೆ ಎಂದ ತಾಲಿಬಾನ್

ನವದೆಹಲಿ: ವಿಶ್ವದಲ್ಲಿ ಇರುವ ಎಲ್ಲಾ ಮುಸ್ಲಿಮರಿಗಾಗಿಯೂ ಧ್ವನಿ ಎತ್ತಲು ತಮಗೆ ಹಕ್ಕಿದೆ. ಅಂತೆಯೇ ಕಾಶ್ಮೀರವನ್ನೂ ಸೇರಿ ಮುಸ್ಲಿಂ ಪ್ರದೇಶ ಅಥವಾ ಮುಸ್ಲಿಮರಿಗಾಗಿ ನಾವು ಧ್ವನಿ ಎತ್ತಬಹುದು ಎಂದು ತಾಲಿಬಾನಿಗಳು ಹೇಳಿಕೊಂಡಿದ್ದಾರೆ.
ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ಭಾರತ ವಿರೋಧಿ ಚಟುವಟಿಕೆ ಅಥವಾ ಭಯೋತ್ಪಾದಕ ಕೆಲಸಗಳಿಗೆ ಬಳಸಬಹುದು ಎಂಬ ಬಗ್ಗೆ ಆತಂಕವಿದೆ. ಈಗ ತಾಲಿಬಾನಿಗಳ ಈ ಹೇಳಿಕೆ ಮತ್ತೆ ಅವರ ಅನುಮಾನ ಹೆಚ್ಚಿಸಿದೆ. ನಾವು ಮುಸ್ಲಿಮರಾಗಿ ಕಾಶ್ಮೀರದಲ್ಲಿ ಇರುವ ಅಥವಾ ಯಾವುದೇ ದೇಶದಲ್ಲಿ ಇರುವ ಮುಸ್ಲಿಮರ ಪರವಾಗಿ ಧ್ವನಿ ಎತ್ತಬಹುದು ಎಂದು ತಾಲಿಬಾನ್ ವಕ್ತಾರ ಸುಹೈಲ್ ಶಹೀನ್ ಹೇಳಿದ್ದಾರೆ ಎಂದು ಕೆಲ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ನಾವು ಮುಸ್ಲಿಮರ ಪರವಾಗಿ ಧ್ವನಿ ಎತ್ತುತ್ತೇವೆ. ಹಾಗೂ ಮುಸ್ಲಿಮರು ಕೂಡ ನಿಮ್ಮ ಸ್ವಂತ ಜನರು, ನಿಮ್ಮ ನಾಗರಿಕರು. ಅವರಿಗೂ ನಿಮ್ಮ ಕಾನೂನಿನ ಅಡಿಯಲ್ಲಿ ಸಮಾನ ಹಕ್ಕು ನೀಡಬೇಕು ಎಂದು ತಿಳಿಸಿದ್ದಾರೆ. ಜೊತೆಗೆ ತಾಲಿಬಾನ್ ಯಾವುದೇ ದೇಶದ ವಿರುದ್ಧ ಶ್ತಸ್ತ್ರಾಸ್ತ ಪ್ರಯೋಗಿಸುವ ನಿಲುವು ಹೊಂದಿಲ್ಲ ಎಂದೂ ಶಹೀನ್ ಹೇಳಿದ್ದಾರೆ.
ತಾಲಿಬಾನಿಗಳು ಈ ಮೊದಲು ಕಾಶ್ಮೀರದ ವಿಚಾರ ಪ್ರಸ್ತಾಪಿಸಿ ಮಾತನಾಡಿದ್ದಾಗ, ಅದು ದೇಶದ ಆಂತರಿಕ ವಿಷಯ ಎಂದು ಹೇಳಿದ್ದರು. ಈಗ ಅವರ ಹೇಳಿಕೆ ಬದಲಾಗಿದೆ.
ಭಾರತದ ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ಬಾಗ್ಚಿ ಗುರುವಾರ ಮಾತನಾಡಿದ್ದರು. ಆ ವೇಳೆ, ಅಫ್ಘಾನಿಸ್ತಾನದ ನೆಲ ಭಯೋತ್ಪಾದಕ ಕೃತ್ಯಗಳಿಗೆ ಬಳಕೆ ಆಗದಂತೆ ನೋಡಿಕೊಳ್ಳುವುದು ಎಂಬುದು ಭಾರತದ ಮೊದಲ ಉದ್ದೇಶ ಎಂದು ಹೇಳಿಕೆ ನೀಡಿದ್ದರು.

ಪ್ರಮುಖ ಸುದ್ದಿ :-   ಜಗತ್ತಿನ ಅತ್ಯಂತ ಅಮೂಲ್ಯವಾದ ಕಣ್ಣೀರು ; ಒಂಟೆಯ ಕಣ್ಣೀರಿನ ಹನಿ 26 ಜಾತಿ ವಿಷದ ಹಾವುಗಳ ಕಡಿತಕ್ಕೆ ದಿವ್ಯ ಔಷಧ : ಹೊಸ ಅಧ್ಯಯನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement