ಮುಂಬೈ 1 ಕೋಟಿಗೂ ಹೆಚ್ಚು ಕೋವಿಡ್ ಲಸಿಕೆ ನೀಡಿದ ಭಾರತದ ಮೊದಲ ನಗರ

ಮುಂಬೈ: ಒಂದು ಕೋಟಿಗೂ ಹೆಚ್ಚು ಕೋವಿಡ್ ಲಸಿಕೆಗಳನ್ನು ನೀಡಿದ ಭಾರತದ ಮೊದಲ ನಗರ ಮುಂಬೈ ಆಗಿದೆ.
ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಪ್ರಕಾರ ಮುಂಬೈ ಒಂದು ಕೋಟಿಗೂ ಹೆಚ್ಚು ಕೋವಿಡ್ ಲಸಿಕೆ ಡೋಸೇಜ್ ನೀಡಲಾಗುದೆ. ಆ ಮೂಲಕ ಹೊಸ ಮೈಲಿಗಲ್ಲನ್ನು ತಲುಪಿದ ದೇಶದ ಮೊದಲ ನಗರವಾಗಿದೆ. ಕೋವಿನ್ ಪೋರ್ಟಲ್‌ನ ಮಾಹಿತಿಯ ಪ್ರಕಾರ ನಗರವು ಇದುವರೆಗೆ 1,00,60,411 ಲಸಿಕೆಗಳನ್ನು ನೀಡಿದೆ. 73,05,020 ಮೊದಲ ಡೋಸ್ ಪಡೆದರೆ, 29,29,128 ಎರಡೂ ಡೋಸ್ ಪಡೆದಿದ್ದಾರೆ. ಶನಿವಾರವಷ್ಟೇ ಮುಂಬೈನಲ್ಲಿ 1,75,254 ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ.
ಶುಕ್ರವಾರ, ಮುಂಬೈ 422 ಹೊಸ ಕೋವಿಡ್‌-19 ಪ್ರಕರಣಗಳನ್ನು ವರದಿ ಮಾಡಿದೆ, ಕೋವಿಡ್ -19 ಪ್ರಕರಣಗಳ ಸಂಖ್ಯೆ 7,45,434 ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 15,987 ಕ್ಕೆ ಏರಿಕೆಯಾಗಿದೆ ಎಂದು ಬಿಎಂಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮುಂಬೈ ಸತತ ಮೂರನೇ ದಿನ 400 ಕ್ಕೂ ಹೆಚ್ಚು ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದ್ದು, ದೈನಂದಿನ ಸಾವುಗಳು ಸತತ ಎರಡನೇ ದಿನವೂ ಬದಲಾಗದೆ ಉಳಿದಿವೆ.

ಈ ಸೇರ್ಪಡೆಯೊಂದಿಗೆ, ಕೋವಿಡ್ -19 ಪ್ರಕರಣಗಳ ಸಂಖ್ಯೆ 7,45,434 ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 15,987 ಕ್ಕೆ ಏರಿಕೆಯಾಗಿದೆ ಎಂದು ಬಿಎಂಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮುಂಬೈ ಸತತ ಮೂರನೇ ದಿನ 400 ಕ್ಕೂ ಹೆಚ್ಚು ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದ್ದು, ದೈನಂದಿನ ಸಾವುಗಳು ಸತತ ಎರಡನೇ ದಿನವೂ ಬದಲಾಗದೆ ಉಳಿದಿವೆ.
ಸೆಪ್ಟೆಂಬರ್ 1 ಮತ್ತು 2 ರಂದು, ಕ್ರಮವಾಗಿ 416 ಮತ್ತು 441 ಕೋವಿಡ್ -19 ಪ್ರಕರಣಗಳನ್ನು ವರದಿ ಮಾಡಿತ್ತು. ಆಗಸ್ಟ್ 16 ರಂದು 190 ಸೋಂಕುಗಳನ್ನು ವರದಿ ಮಾಡಿದ ಮರುದಿನವೇ ನಗರವು ಕೋವಿಡ್ -19 ಪ್ರಕರಣಗಳಲ್ಲಿ ಸ್ಥಿರವಾದ ಏರಿಕೆಯನ್ನು ಕಾಣುತ್ತಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ