ಟೋಕಿಯೋ ಪ್ಯಾರಾಲಿಂಪಿಕ್ಸ್: ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್‌ ನಲ್ಲಿ ಚಿನ್ನ ಗೆದ್ದ ಕೃಷ್ಣ ನಾಗರ

ಟೋಕಿಯೊ: ಭಾನುವಾರ ನಡೆದ ಟೋಕಿಯೊ ಪ್ಯಾರಾಲಿಂಪಿಕ್ಸ್ -2020 ರಲ್ಲಿ ಹಾಂಗ್ ಕಾಂಗ್‌ನ ಚು ಮನ್ ಕೈ ಅವರನ್ನು ಸೋಲಿಸುವ ಮೂಲಕ ಭಾರತದ ಪ್ಯಾರಾ-ಶಟ್ಲರ್ ಕೃಷ್ಣ ನಾಗರ ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ SH6 ಈವೆಂಟ್‌ನ ಫೈನಲ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತವು ತನ್ನ ಪದಕದ ಪಟ್ಟಿಯನ್ನು 19 ಕ್ಕೆಹೆಚ್ಚಿಸಿಕೊಂಡಿತು. ಕೃಷ್ಣ ನಾಗರ 21-17, 16-21 ಮತ್ತು 21-17ರಲ್ಲಿ ಮನ್ ಕೈಯನ್ನು ಸೋಲಿಸಿದರು.
ನಾಗರ್ ಅವರು ಮೊದಲ ಗೇಮ್ ಅನ್ನು 21-17ರಿಂದ ಗೆದ್ದು 1-0 ಮುನ್ನಡೆ ಸಾಧಿಸುವ ಮೂಲಕ ಈವೆಂಟ್ ಅನ್ನು ಸೊಗಸಾಗಿ ಆರಂಭಿಸಿದರು. ಹಾಂಗ್ ಕಾಂಗ್ ನ ಮನ್ ಕೈ, ಪುಟಿದೆದ್ದರು ಮತ್ತು ಎರಡನೇ ಗೇಮ್ ಅನ್ನು ಗೆದ್ದುಕೊಂಡರು.
ಮೂರನೇ ಗೇಮ್‌ ನಾಗರ್‌ ಮುನ್ನಡೆಯೊಂದಿಗೆ ಆರಂಭಿಸಿದರು. ಒಂದುಹಂತದಲ್ಲಿ 14-14ರಲ್ಲಿ ಪಾಯಿಂಟ್ಸ್‌ ಸಮವಾಗಿತ್ತು. ಆದರೆ ನಂತರ ಕೃಷ್ಣ ಅವರು 19-16ರ ಮುನ್ನಡೆ ಸಾಧಿಸಿದರು. ಅಂತಿಮವಾಗಿ ಕೃಷ್ಣ ಅವರು 21-17ರಿಂದ ಗೆದ್ದರು.
ಭಾರತ ಈಗ ಐದು ಚಿನ್ನ, ಎಂಟು ಬೆಳ್ಳಿ ಮತ್ತು ಆರು ಕಂಚಿನ ಪದಕಗಳನ್ನು ಹೊಂದಿದ್ದು 24 ನೇ ಸ್ಥಾನದಲ್ಲಿದೆ. ಭಾರತವು ರಿಯೋದಲ್ಲಿ ಕಳೆದ ಆವೃತ್ತಿಯಲ್ಲಿ ಕೇವಲ ನಾಲ್ಕು ಪದಕಗಳನ್ನು ಗೆದ್ದಿತ್ತು.
ಇದಕ್ಕೂ ಮುಂಚಿತವಾಗಿ, ಭಾರತದ ಇನ್ನೊಬ್ಬ ಪ್ಯಾರಾ-ಶಟ್ಲರ್ ಸುಹಾಸ್ ಯತಿರಾಜ್ ಅವರು ಫ್ರಾನ್ಸ್‌ನ ಲ್ಯೂಕಾಸ್ ಮಜೂರ್ ವಿರುದ್ಧ ಭಾನುವಾರ ಬೆಳಿಗ್ಗೆ ನಡೆದ ಫೈನಲ್‌ನಲ್ಲಿ ಸೋತು ಬೆಳ್ಳಿ ಪದಕ ಪಡೆದರು. ಪ್ಯಾರಾಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದಲ್ಲದೆ ಪದಕ ಗೆದ್ದ ಏಕೈಕ ಐಎಎಸ್ ಅಧಿಕಾರಿಯಾಗಿದ್ದಾರೆ.

ಪ್ರಮುಖ ಸುದ್ದಿ :-   ಇವರು ಭಾರತದ ಅತ್ಯಂತ ಶ್ರೀಮಂತ ಅಭ್ಯರ್ಥಿ : ತೆಲುಗು ದೇಶಂ ಪಕ್ಷದ ಇವರ ಆಸ್ತಿ 5,785 ಕೋಟಿ ರೂಪಾಯಿ...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement