ಕಲಬುರ್ಗಿ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಅತಂತ್ರ : ಕಾಂಗ್ರೆಸ್‌-ಬಿಜೆಪಿ ಯಾರಿಗಾದ್ರೂ ಜೆಡಿಎಸ್‌ ಬೆಂಬಲ ಅನಿವಾರ್ಯ..!

ಕಲಬುರ್ಗಿ: ಸ್ಥಳೀಯ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್‌ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಆದರೆ ಬಹುಮತ ಪಡೆಯುವಲ್ಲಿ ಕಾಂಗ್ರೆಸ್‌ ವಿಫಲವಾಗಿದೆ. ಬಿಜೆಪಿ ಗಣನೀಯವಾಗಿ ತನ್ನ ಬಲವನ್ನು ಹೆಚ್ಚಿಸಿಕೊಂಡಿದೆ.
ಕಲಬುರ್ಗಿ ಮಹಾನಗರ ಪಾಲಿಕೆ ಒಟ್ಟು 55 ವಾರ್ಡುಗಳಿಗೆ ನಡೆದ ಚುನಾವಣೆ ಫಲಿತಾಂಶದಲ್ಲಿ 27 ವಾರ್ಡುಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಬಿಜೆಪಿ 23 ವಾರ್ಡುಗಳಲ್ಲಿ ಬಿಜೆಪಿ ಜಯಗಳಿಸಿದೆ. ಜೆಡಿಎಸ್ -04 ಹಾಗೂ ಒಬ್ಬ ಪಕ್ಷೇತರ (ಬಿಜೆಪಿ ಬಂಡಾಯ) ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.
ಪಾಲಿಕೆಯಲ್ಲಿ ಸಂಸದರು, ಶಾಸಕರು ಹಾಗೂ ವಿದಾನ ಪರಿಷತ್‌ ಸದಸ್ಯರ ಮತಗಳೂ ಗಣನೆಗೆ ಬರುತ್ತವೆ. ಹೀಗಾಗಿ ಕಲಬುರ್ಗಿ ಅಧಿಕಾರದ ಲೆಕ್ಕಾಚಾರವೂ ಅಸ್ಪಷ್ಟವಾಗಿದೆ. ಇಲ್ಲಿ ನಾಲ್ವರು ಜೆಡಿಎಸ್‌ ಸದಸ್ಯರೇ ನಿರ್ನಾಯಕರಾಗದ್ದಾರೆ. ಅವರಿಗೆ ಯಾರಿಗೆ ಬೆಂಬಲ ನೀಡುತ್ತಾರೆಯೋ ಅವರು ಅಧೀಕಾರದ ಗದ್ದುಗೆ ಹಿಡಿಯಲಿದ್ದಾರೆ. ಯಾಕೆಂದರೆ ಬಿಜೆಪಿ ತಮಗೆ   ಜನಪ್ರತಿನಿಧಿಗಳ ಬೆಂಬಲದ ಲೆಕ್ಕಾಚಾರ ಹಾಕಿದ್ದು, ಕಾಂಗ್ರೆಸ್‌ ಸಹ   ಜನಪ್ರತಿನಿಧಿಗಳ ಲೆಕ್ಕಾಚಾರ ಹಾಕಿದೆ. ಆಗ ಇವರಿಬ್ಬರ ಬಲ ಸಮವಾಗುತ್ತದೆ. ಮತ್ತೆ ಅಧಿಕಾರ ಹಿಡಿಯಲು 31 ಮತಗಳು ಬೇಕಾಗುತ್ತವೆ ಎಂದು ಹೇಳಲಾಗಿದೆ. ಹೀಗಾಗಿ ಬಿಜೆಪಿ ಬಂಡಾಯ ಅಭ್ಯರ್ಥಿ ಬಿಜೆಪಿ ಅಥವಾ ಕಾಂಗ್ರೆಸ್ಸಿಗೆ ಬೆಂಬಲಿಸದರೂ ಸಾಕಾಗವುದಿಲ್ಲ. ಯಾರೇ ಆದರೂ ಜೆಡಿಎಸ್‌ ಬೆಂಬಲ ಪಡೆಯುವುದು ಅನಿವಾರ್ಯವಾಗಲಿದೆ ಎಂದು ಹೇಳಲಾಗಿದೆ.
ಬಿಜೆಪಿ-23, ಕಾಂಗ್ರೆಸ್‌-27, ಜೆಡಿಎಸ್‌-04, ಇತರರು-01

ಪ್ರಮುಖ ಸುದ್ದಿ :-   ಬೆಳಗಾವಿ | ಮಸೀದಿಯಲ್ಲಿದ್ದ ಕುರಾನ್ ಕದ್ದೊಯ್ದು ಸುಟ್ಟು ಹಾಕಿದ ಕಿಡಿಗೇಡಿಗಳು ; ಪ್ರತಿಭಟನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement