ಕೇರಳದಲ್ಲಿ ಸೋಮವಾರ 20,000ಕ್ಕಿಂತ ಕಡಿಮೆ ಹೊಸ ಕೊರೊನಾ ಪ್ರಕರಣಗಳು ದಾಖಲು

ತಿರುವನಂತಪುರಂ: ಕೇರಳದಲ್ಲಿ ಸೋಮವಾರ (ಸಪ್ಟೆಂಬರ್ 6) 19,688 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದೆ. ಕಳೆದ ಹತ್ತು ದಿನಗಳ ನಂತರ ಇಂದು (ಸೋಮವಾರ)ಮೊದಲ ಬಾರಿಗೆ 20,000 ಕ್ಕಿಂತ ಕಡಿಮೆ ಕೊರೊನಾ ಪ್ರಕರಣಗಳು ವರದಿಯಾಗಿವೆ.
ಇದೇ ಅವಧಿಯಲ್ಲಿ ಕೇರಳದಲ್ಲಿ 135 ಮಂದಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 42,27,526 ಆಗಿದೆ.
ಕೊರೊನಾದಿಂದ ಈವರೆಗೆ 21,631 ಜನ ಮೃತಪಟ್ಟಿದ್ದಾರೆ. 28,561 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ಆ ಮೂಲಕ, ಕೊವಿಡ್ ಸೋಂಕಿನಿಂದ ಗುಣಮುಖ ಆದವರ ಪ್ರಮಾಣ 39,66,558 ಆಗಿದೆ. ಸಕ್ರಿಯ ಕೊರೊನಾ ಪ್ರಕರಣಗಳ ಸಂಖ್ಯೆ 2,38,782 ಆಗಿದೆ. ಸೋಮವಾರ (ಸಪ್ಟೆಂಬರ್ 6) ವರದಿಯಾದ 19,688 ಹೊಸ ಕೊರೊನಾ ಪ್ರಕರಣಗಳ ಪೈಕಿ ಹೊಸ ಕೊರೊನಾ ಕೇಸ್​ಗಳ ಪೈಕಿ 81 ಮಂದಿ ಆರೋಗ್ಯ ಕಾರ್ಯಕರ್ತರು, ಹೊರರಾಜ್ಯದಿಂದ ಆಗಮಿಸಿದ 111 ಮಂದಿ ಸೇರಿದ್ದಾರೆ. 894 ಕೇಸ್​ಗಳ ಮೂಲ ತಿಳಿದುಬಂದಿಲ್ಲ. ಕೇರಳದಲ್ಲಿ ಕೊರೊನಾ ಪಾಸಿಟಿವಿಟಿ ಪ್ರಮಾಣ ಶೇಕಡಾ 16.71 ಆಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.
ಕೇರಳದಲ್ಲಿ ಲಸಿಕೆ ಪಡೆಯಲು ಅರ್ಹರಾಗಿರುವ ಶೇಕಡಾ 75 ರಷ್ಟು ಮಂದಿಗೆ ಒಂದು ಡೋಸ್ ಕೊರೊನಾ ಲಸಿಕೆ ನೀಡಲಾಗಿದೆ ಹಾಗೂ ಶೇಕಡಾ 28 ರಷ್ಟು ಜನರಿಗೆ ಎರಡೂ ಡೋಸ್ ಲಸಿಕೆ ನೀಡಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

ಪ್ರಮುಖ ಸುದ್ದಿ :-   ಸುಪ್ರೀಂ ಕೋರ್ಟ್ ತರಾಟೆ ನಂತರ ದೊಡ್ಡದಾಗಿ ಕ್ಷಮೆಯಾಚನೆ ಪ್ರಕಟಿಸಿದ ಪತಂಜಲಿ ಸಂಸ್ಥೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement