ಹುಬ್ಬಳ್ಳಿ-ಧಾರವಾಡ ಪಾಲಿಕೆ ಚುನಾವಣೆ: ಫಲಿತಾಂಶ ಅತಂತ್ರ.. ಆದ್ರೂ ಬಿಜೆಪಿಗೆ ಅಧಿಕಾರ..!?..?

ಹುಬ್ಬಳ್ಳಿ:ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಯಾವ ಪಕ್ಷಕ್ಕೂ ಬಹುಮತ ಸಿಕ್ಕಿಲ್ಲ. ಸೆ.3ರಂದು ಹು-ಧಾ ಪಾಲಿಕೆಯ ಒಟ್ಟು 82 ವಾರ್ಡ್​ಗಳಿಗೆ ಮತದಾನ ನಡೆದಿತ್ತು. ಇಂದು(ಸೆ.6) ಮತ ಎಣಿಕೆ ನಡೆದಿದ್ದು, ಫಲಿತಾಂಶ ಹೊರಬಿದ್ದಿದೆ. ಆರಂಭದಿಂದಲೂ ಕಾಂಗ್ರೆಸ್​ ಮತ್ತು ಬಿಜೆಪಿ ಮುನ್ನಡೆ ಕಾಯ್ದುಕೊಂಡು ಬಂದವಾದರೂ ಅಂತಿಮವಾಗಿ ಎರಡಕ್ಕೂ ಬಹುಮತ ಸಿಗಲಿಲ್ಲ.

ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆಯಾದರೂ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಯಾಕೆಂದರೆ ಕಾಂಗ್ರೆಸ್ ತೀವ್ರ ಪೈಪೋಟಿ ನೀಡಿದೆ. ಎಂಐಎಂ ತನ್ನ ಖಾತೆ ತೆರೆದಿದೆ, ಜೆಡಿಎಸ್‌ ಕುಸಿತ ಕಂಡಿದೆ.

ಅತಂತ್ರ ಫಲಿತಾಂಶ ಬಂದಿದ್ದು, ಪಕ್ಷೇತರ ಅಭ್ಯರ್ಥಿಗಳೇ‌ ಈಗ ನಿರ್ಣಾಯಕ. ಮೇಯರ್ ಆಗಲು 45 ಮತ ಬೇಕಿದೆ. ಆದರೆ, ಬಿಜೆಪಿ ಒಟ್ಟು 39 ವಾರ್ಡ್​ಗಳಲ್ಲಿ ಗೆದ್ದಿದ್ದು, ಬಿಜೆಪಿ ಬಳಿ ಮೇಯರ್ ಆಯ್ಕೆಗೆ ವಿಶೇಷ ಮತದಾನದ ಹಕ್ಕು ಹೊಂದಿರುವ ಐವರು ಜನಪ್ರತಿನಿಧಿಗಳಿದ್ದಾರೆ. ಅಲ್ಲಿಗೆ ಬಿಜೆಪಿಗೆ ಒಟ್ಟು 44 ಸ್ಥಾನ ಸಿಕ್ಕಂತಾಗುತ್ತೆ. ಇನ್ನೂ ಒಬ್ಬರ ಅಗತ್ಯವಿದೆ.

ಒಟ್ಟು ಪಾಲಿಕೆಯ 82 ವಾರ್ಡುಗಳ ಅತಂತ್ರ ಫಲಿತಾಂಶ ಬಂದಿದ್ದು, ಪಕ್ಷೇತರ ಅಭ್ಯರ್ಥಿಗಳೇ‌ ಈಗ ನಿರ್ಣಾಯಕ. ಮೇಯರ್ ಆಗಲು 45 ಮತ ಬೇಕಿದೆ. ಆದರೆ, ಬಿಜೆಪಿ ಒಟ್ಟು 39 ವಾರ್ಡ್​ಗಳಲ್ಲಿ ಗೆದ್ದಿದ್ದು, ಇನ್ನು ಕಾಂಗ್ರೆಸ್​ ಒಟ್ಟು 33 ವಾರ್ಡ್​ಗಳಲ್ಲಿ ಗೆಲುವು ಸಾಧಿಸಿದೆ. ಎಐಎಂಐಎಂ 3, ಪಕ್ಷೇತರ 6, ಜೆಡಿಎಸ್​ ಗೆ 1 ವಾರ್ಡ್​ನಲ್ಲಿ ಗೆಲುವಾಗಿದೆ. ಬಿಜೆಪಿ ಬಳಿ ಮೇಯರ್ ಆಯ್ಕೆಗೆ ವಿಶೇಷ ಮತದಾನದ ಹಕ್ಕು ಹೊಂದಿರುವ ಐವರು ಜನಪ್ರತಿನಿಧಿಗಳಿದ್ದಾರೆ. ಅಲ್ಲಿಗೆ ಬಿಜೆಪಿಗೆ ಒಟ್ಟು 44 ಸಂಕ್ಯೆಯಾಗುತ್ತದೆ. ಇನ್ನೂ ಒಬ್ಬರ ಅಗತ್ಯವಿದೆ.
ಕಾಂಗ್ರೆಸ್ ಬಳಿ ಮೇಯರ್ ಆಯ್ಕೆಗೆ ವಿಶೇಷ ಮತದಾನದ ಹಕ್ಕು ಹೊಂದಿರುವ ಇಬ್ಬರು ಜನಪ್ರತಿನಿಧಿಗಳಿದ್ದಾರೆ. ಅಲ್ಲಿಗೆ ಕಾಂಗ್ರೆಸ್​ ಗೆ ಒಟ್ಟು 36 ಸ್ಥಾನ ಸಿಕ್ಕಂತಾಗುತ್ತದೆ. ಇವರೆಲ್ಲರೂ ಕಾಂಗ್ರೆಸ್​ ಕೈ ಹಿಡಿದರೆ ಬಿಜೆಪಿಗೆ ಹಿನ್ನೆಡೆ ಆಗಲಿದೆ. ಆದರೆ ಆ ಸಾಧ್ಯತೆ ತೀರ ಕಡಿಮೆ. ಬಿಜೆಪಿ ಪಾಲಿಗೂ ಒಂದು ಸ್ಥಾನವನ್ನ ತನ್ನತ್ತ ಸೆಳೆಯುವುದು ಕಷ್ಟವಾಗಲಕ್ಕಿಲ್ಲ. ಮೇಯರ್ ಯಾರಾಗುತ್ತಾರೆ ಎಂಬುದು ಪಕ್ಷೇತರರ ಮೇಲೆ ಬಿಜೆಪಿ ಅವಲಂಬಿತವಾಗಬೇಕಿದೆ.
ಪಕ್ಷವಾರು ಗೆದ್ದ ಸ್ಥಾನ

ಪ್ರಮುಖ ಸುದ್ದಿ :-   ಗದಗ: ನಗರಸಭೆ ಅಧ್ಯಕ್ಷೆ ಪುತ್ರ ಸೇರಿ ನಾಲ್ವರ ಭೀಕರ ಹತ್ಯೆ

ಬಿಜೆಪಿ- 39 ವಾರ್ಡ್​ಗಳು
ಕಾಂಗ್ರೆಸ್- 33 ವಾರ್ಡ್​ಗಳು
ಪಕ್ಷೇತರ- 6 ವಾರ್ಡ್​ಗಳು
ಎಐಎಂಐಎಂ- 3 ವಾರ್ಡ್​ಗಳು
ಜೆಡಿಎಸ್- 1 ವಾರ್ಡ್​

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement