ಭ್ರಷ್ಟಾಚಾರ ಪ್ರಕರಣ: ವಿ.ಕೆ.ಶಶಿಕಲಾಗೆ ಸೇರಿದ ಸುಮಾರು 100 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಐಟಿ..!

ಚೆನ್ನೈ: ಎಐಎಡಿಎಂಕೆಯ ಉಚ್ಚಾಟಿತ ನಾಯಕಿ ವಿ.ಕೆ.ಶಶಿಕಲಾ ಅವರಿಗೆ ಸಂಬಂಧಪಟ್ಟ ಸುಮಾರು 11 ಆಸ್ತಿಗಳನ್ನು ಆದಾಯ ತೆರಿಗೆ ಇಲಾಖೆ ಜಪ್ತಿ ಮಾಡಿದೆ.
ಮಾಜಿ ಮುಖ್ಯಮಂತ್ರಿ ಜಯಲಲಿತಾರ ಆಪ್ತೆಯಾಗಿದ್ದ ಶಶಿಕಲಾ ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದರು. ಚೆನ್ನೈನ ಹೊರವಲಯದಲ್ಲಿರುವ ಪಯನೂರ್​ ಗ್ರಾಮದಲ್ಲಿ, ಸುಮಾರು 24 ಎಕರೆ ಪ್ರದೇಶಗಳಷ್ಟು ವಿಸ್ತೀರ್ಣದಲ್ಲಿದ್ದ 11 ಆಸ್ತಿಗಳನ್ನು ಆದಾಯ ತೆರಿಗೆ ಇಲಾಖೆ, ಬೇನಾಮಿ ನಿಷೇಧ ಕಾಯ್ದೆಯಡಿ ಮುಟ್ಟುಗೋಲು ಹಾಕಿಕೊಂಡಿದೆ. ಈ ಆಸ್ತಿಗಳನ್ನು ಜಯಲಲಿತಾ ಮುಖ್ಯಮಂತ್ರಿಯಾಗಿದ್ದ 1991-1996ರ ಅವಧಿಯಲ್ಲಿ ಖರೀದಿ ಮಾಡಿದ್ದಾಗಿತ್ತು ಎಂದು ಆರೋಪಿಸಲಾಗಿದೆ.
ಈ 11 ಆಸ್ತಿಗಳನ್ನು 1990ರ ದಶಕದಲ್ಲಿ ಕೇವಲ 20 ಲಕ್ಷ ರೂಪಾಯಿಗಳಿಗೆ ಖರೀದಿ ಮಾಡಲಾಗಿತ್ತು. ಈಗ ಈ ಆಸ್ತಿಗಳ ಮೌಲ್ಯ ಸುಮಾರು 100 ಕೋಟಿ ರೂಪಾಯಿ ಎಂದು ಹೇಳಲಾಗಿದೆ. 2014ರಲ್ಲಿ ಕರ್ನಾಟಕ ವಿಶೇಷ ಕೋರ್ಟ್​ನ ಅಂದಿನ ನ್ಯಾಯಾಧೀಶರಾಗಿದ್ದ ಜಾನ್​ ಮೈಕೆಲ್ , ಈ 11 ಆಸ್ತಿಗಳ ಸಂಬಂಧ ತೀರ್ಪು ನೀಡುವಾಗ ಇವು ನ್ಯಾಯಸಮ್ಮತವಾಗಿ ಮಾಡಿದ ಆಸ್ತಿಗಳಲ್ಲ ಎಂದು ಹೇಳಿದ್ದರು. ಆ ತೀರ್ಪನ್ನು ಆಧರಿಸಿಯೇ ಇದೀಗ ಐಟಿ ಇಲಾಖೆ ಜಪ್ತಿ ಮಾಡಿದೆ. ಅದರ ಅನ್ವಯ, ವಿ.ಕೆ.ಶಶಿಕಲಾ ಈ ಆಸ್ತಿಗಳನ್ನು ಬಳಕೆ ಮಾಡಬಹುದು. ಆದರೆ ಇದಕ್ಕೆ ಸಂಬಂಧಪಟ್ಟಂತೆ ಯಾವುದೇ ವ್ಯವಹಾರಗಳನ್ನೂ ಮಾಡುವಂತಿಲ್ಲ. 66 ವರ್ಷದ ಶಶಿಕಲಾ 2017ರಿಂದಲೈ ಜೈಲಿನಲ್ಲಿ ಇದ್ದರು. ಐಟಿ ಇಲಾಖೆ ಶಶಿಕಲಾ ಅವರ ಸುಮಾರು 1600 ಕೋಟಿ ರೂ.ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.

ಪ್ರಮುಖ ಸುದ್ದಿ :-   ರೋಹಿತ್ ವೇಮುಲಾ ದಲಿತನಲ್ಲ : ಪೊಲೀಸರ ಅಂತಿಮ ವರದಿ ; ಎಲ್ಲ ಆರೋಪಿಗಳಿಗೆ ಕ್ಲೀನ್ ಚಿಟ್

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement