ಧಾರವಾಡಿ ಎಮ್ಮೆ ತಳಿಗೆ ಸಿಕ್ತು ರಾಷ್ಟ್ರೀಯ ಮಾನ್ಯತೆ:18ನೇ ತಳಿಯಾಗಿ ಸೇರ್ಪಡೆ..!

ಹುಬ್ಬಳ್ಳಿ: ಸಾಹಿತ್ಯ ಹಾಗೂ ಸಂಗೀತಕ್ಕೆ ಹೆಸರಾದ ಧಾರವಾಡಕ್ಕೆ ಈಗ ಮತ್ತೊಂದುರಾಷ್ಟ್ರೀಯ ಮಾನ್ಯತೆ ದೊರೆತಿದೆ. ಧಾರವಾಡ ಎಮ್ಮೆ ತಳಿಗೆ ಈಗ ರಾಷ್ಟ್ರೀಯ ಮಾನ್ಯತೆ ದೊರೆತಿದೆ.
ದೇಶದಲ್ಲಿ ಗುರುತಿಸಲಾದ ಎಮ್ಮೆ ತಳಿಗಳ ಪಟ್ಟಿಗೆ 18ನೇ ತಳಿಯಾಗಿ ಧಾರವಾಡ ಎಮ್ಮೆ ಸೇರ್ಪಡೆಯಾಗಿದೆ. ತಳಿ ಶುದ್ಧತೆ ಕಾಪಾಡಿಕೊಂಡು ಬಂದ ಕಾರಣಕ್ಕೆ ಧಾರವಾಡ ಎಮ್ಮೆ ತಳಿಗೆ ಈ ರಾಷ್ಟ್ರೀಯ ಮಾನ್ಯತೆ ದೊರೆತಿದೆ. ಕೃತಕ ಗರ್ಭಧಾರಣೆ ಭಾರತಕ್ಕೆ ಕಾಲಿಟ್ಟು 60 ವರ್ಷಗಳ ನಂತರವೂ ತಳಿ ಶುದ್ಧತೆ ಕಾಪಾಡಿಕೊಂಡು ಬರಲಾಗಿದೆ ಎಂದು ಅಧ್ಯಯನವು ಹೇಳಿದೆ.
ನವದೆಹಲಿಯ ಕೃಷಿ ಅನುಸಂಧಾನ ಪರಿಷತ್ (ಐಸಿಎಆರ್) ನ ಭಾರತೀಯ ಪಶು ಅನುವಂಶಿಕ ಸಂಪನ್ಮೂಲ ಬ್ಯೂರೋದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಧಾರವಾಡ ಎಮ್ಮೆಗೆ ಧಾರವಾಡಿ ತಳಿ ಎಂದು ಮಾನ್ಯತೆ ನೀಡಿ ಗೌರವಿಸಲಾಗಿದೆ. ಧಾರವಾಡ ತಳಿ ಎಮ್ಮೆಗೆ ಇಂಡಿಯಾ_ಬಫೆಲೋ_0800_ಧಾರವಾಡಿ_01018 ಎಂದು ತಳಿ ಪ್ರವೇಶ ಸಂಖ್ಯೆ ನೀಡಿದೆ. ಈ ಮೂಲಕ ಎಮ್ಮೆಗಳಲ್ಲಿ ಮಾನ್ಯತೆ ಪಡೆದ ರಾಜ್ಯದ ಮೊದಲ ತಳಿ ಇದಾಗಿದೆ. ಹರಿಯಾಣದ ರಾಷ್ಟ್ರೀಯ ಪಶು ಅನುವಂಶಿಕ ಸಂಸಾಧನ ಬ್ಯೂರೋದಿಂದ ಸೆಪ್ಟೆಂಬರ್ 3 ರಂದು ಧಾರವಾಡ ಎಮ್ಮೆ ತಳಿಗೆ INDIA_BUFFALO_0800_DHARWADI_01018 ನೋಂದಣಿ ಸಂಖ್ಯೆ ನೀಡಿದೆ. ಈ ನೋಂದಣಿ ಸಂಖ್ಯೆಯ ಮೂಲಕ ಇನ್ನು ಮುಂದೆ ಧಾರವಾಡದ ಎಮ್ಮೆ ವಿಶ್ವಮಟ್ಟದಲ್ಲಿಯೂ ಗುರುತಿಸಿಕೊಳ್ಳುವಂತಾಗಿದೆ. ಇದು ಧಾರವಾಡ ಎಮ್ಮೆ ತಳಿಯ ಅಭಿವೃದ್ದಿ ಹಾಗೂ ಗುಣಮಟ್ಟ ಹೆಚ್ಚಳಕ್ಕೆ ನಾಂದಿ ಆಗಲಿದೆ ಎಂದು ನಿರೀಕ್ಷಿಸಲಾಗಿದೆ.
ತಳಿ ಶುದ್ಧತೆ ಕುರಿತು 2017 ರಲ್ಲಿ ಪಶು ವಂಶವಾಹಿ ಸಂಪನ್ಮೂಲ ಸಂರಕ್ಷಣೆಯ ರಾಷ್ಟ್ರೀಯ ಸಂಸ್ಥೆ ಹಾಗೂ ಕೃಷಿ ವಿಶ್ವವಿದ್ಯಾಲಯದ ಪಶು ವಿಜ್ಞಾನ ವಿಭಾಗದ ಸಹಯೋಗದಲ್ಲಿ ಸಂಶೋಧನೆ ನಡೆಸಿ ತಳಿ ಶುದ್ಧತೆ ಕುರಿತು 2017 ರಲ್ಲಿ ಸಂಶೋಧಕರು ಪರಿಷತ್ತಿಗೆ ವರದಿ ನೀಡಿದ್ದರು. ರಾಜ್ಯ ಸರ್ಕಾರವು ಕೇಂದ್ರಕ್ಕೆ ಶಿಫಾರಸ್ಸು ಸಲ್ಲಿಸಿತ್ತು. ಈಗ ಜಾಗತಿಕ ಮನ್ನಣೆ ದೊರೆತ ದೇಶದ 18 ಎಮ್ಮೆ ತಳಿಯ ಸಾಲಿಗೆ ಇದು ಹೊಸದಾಗಿ ಸೇರ್ಪಡೆಯಾಗಿದೆ.
ಧಾರವಾಡಿ ಎಮ್ಮೆ ತಳಿಯ ವಿಶೇಷತೆ
ಧಾರವಾಡಿ ಎಮ್ಮೆ ತಳಿಯುವ ತನ್ನ ಜೀವಿತಾವಧಿಯಲ್ಲಿ ಐದು ಬಾರಿ ಕರು ಹಾಕುತ್ತದೆ. ಒಮ್ಮೆ ಕರು ಹಾಕಿದರೆ ಸರಾಸರಿ 335 ದಿನ ಹಾಲು ನೀಡುತ್ತದೆ. ಇದರ ಹಾಲಿನಲ್ಲಿ ಶೇ. 7 ರಷ್ಟು ಕೊಬ್ಬಿನಾಂಶ ಇರುತ್ತದೆ. ಹೀಗಾಗಿ ಧಾರವಾಡ ಪೇಡಾ, ಬೆಳಗಾವಿ ಕುಂದಾ, ಜಮಖಂಡಿ ಕಲ್ಲಿ ಪೇಢಾ, ಐನಾಪುರ ಪೇಡಾ, ಗೋಕಾಕ್ ಮತ್ತು ಅಮೀನಗಡ ಕರದಂಟು ಇತ್ಯಾದಿಗಳಲ್ಲಿ ಈ ಎಮ್ಮೆಯ ಹಾಲನ್ನು ಹೆಚ್ಚಾಗಿ ಬಳಸಲಾಗುತ್ತದೆ
ಸಂಶೋಧನೆಗೆ 14 ಜಿಲ್ಲೆಗಳಲ್ಲಿ 10,650ಎಮ್ಮೆಗಳ ಆಯ್ಕೆ..:
ಉತ್ತರ ಕರ್ನಾಟಕದ ಧಾರವಾಡ, ಬಾಗಲಕೋಟೆ, ಬೆಳಗಾವಿ ಹಾಗೂ ಗದಗ ಜಿಲ್ಲೆಯ ಆಯ್ಕೆ ಒಟ್ಟು 64 ಹಳ್ಳಿಗಳಲ್ಲಿ ಕೃಷಿ ವಿವಿ ಪಶು ವಿಜ್ಞಾನ ವಿಭಾಗದ ವಿಜ್ಞಾನಿ ಡಾ. ವಿ.ಎಸ್.ಕುಲ್ಕರ್ಣಿ ನೇತೃತ್ವದಲ್ಲಿ 3937 ರೈತರ ಬಳಿಯಿರುವ 10,650 ಧಾರವಾಡ ಎಮ್ಮೆಗಳ ಬಗ್ಗೆ ಅಧ್ಯಯನ ಕೈಗೊಳ್ಳಲಾಯಿತು.
ರವಾಡ ವಿಶ್ವವಿದ್ಯಾಲಯ 2014 ರಿಂದ ಧಾರವಾಡ ಎಮ್ಮೆ ಬಗ್ಗೆ ಅಧ್ಯಯನ ಆರಂಭಿಸಿತು. ಕೃಷಿ ವಿವಿಯ ಪಶು ವಿಜ್ಞಾನ ವಿಭಾಗವು 2017 ರ ಡಿಸೆಂಬರ್ ವರೆಗೆ ಅಧ್ಯಯನ ನಡೆಸಿತು. `ಧಾರವಾಡ ಎಮ್ಮೆ ತಳಿಯ ಗುಣಲಕ್ಷಣಗಳ ಸಂಶೋಧನಾ ಯೋಜನೆ’ ಅಡಿ ಸಂಶೋಧನೆ ಕೈಗೊಳ್ಳಲಾಯಿತು.
2012ರ ಜಾನುವಾರು ಗಣತಿ ಪ್ರಕಾರ ಈ ನಾಲ್ಕು ಜಿಲ್ಲೆಗಳಲ್ಲಿ 12 ಲಕ್ಷ 5 ಸಾವಿರದಷ್ಟು ಎಮ್ಮೆಗಳಿದ್ದು, ಈ ಪೈಕಿ ಶೇ.80 ರಷ್ಟು ಧಾರವಾಡ ಎಮ್ಮೆಗಳೇ ಇವೆ. ಇದು ಅಧ್ಯಯನದ ವೇಳೆ ಕಂಡು ಬಂದಿದೆ. ಎಮ್ಮೆಗಳ ಅಳತೆ, ಆಕಾರ, ಗುಣಗಳ ಬಗ್ಗೆ ಸಮಗ್ರವಾಗಿ ಅಧ್ಯಯನ ಮಾಡಲಾಗಿದ್ದು, ಎಮ್ಮೆಗಳ ಹಾಲಿನ ಉತ್ಪಾದನೆ, ಸಂತಾನೋತ್ಪತ್ತಿಯ ಸಾಮರ್ಥ್ಯದ ಪರೀಕ್ಷೆಯನ್ನು ಕೂಡ ಮಾಡಲಾಗಿದೆ. ಅಲ್ಲದೇ ರಕ್ತದ ಮಾದರಿ ತೆಗೆದುಕೊಂಡು ಅವುಗಳ ಡಿಎನ್‌ಎ ಕುರಿತಂತೆಯೂ ಹೆಚ್ಚಿನ ಸಂಶೋಧನೆ ಕೈಗೊಳ್ಳಲಾಗಿದೆ.
ಇನ್ನು ಎಮ್ಮೆಗಳ ಅರ್ಧ ಚಂದ್ರಾಕೃತಿಯ ಕೋಡು, ಕರೀ ಬಣ್ಣದ ಚರ್ಮ ಇರುವ ಎಮ್ಮೆಗಳು ಹೆಚ್ಚಾಗಿರುವುದು ತಿಳಿದು ಬಂದಿದೆ.ಬಳಿಕ ವರದಿಯನ್ನು ಸಲ್ಲಿಕೆ ಮಾಡಲಾಗಿತ್ತು. ಭಾರತೀಯ ಕೃಷಿ ಅನುಸಂಧಾನ ಸಂಸ್ಥೆಯಾದ ಪಶು ವಂಶವಾಹಿ ಸಂಪನ್ಮೂಲ ಸಂರಕ್ಷಣೆಯ ರಾಷ್ಟ್ರೀಯ ಸಂಸ್ಥೆ (ಎನ್‌ಬಿಎಆರ್‌ಜಿ) ಸಂಸ್ಥೆ ಹಾಗೂ ಕೃಷಿ ವಿವಿಯ ಪಶು ವಿಜ್ಞಾನ ವಿಭಾಗದ ಸಹಯೋಗದಲ್ಲಿ ಈ ಸಂಶೋಧನೆಯಾಗಿದೆ.

ಪ್ರಮುಖ ಸುದ್ದಿ :-   ಪ್ರಜ್ವಲ್ ರೀತಿಯೇ ಸಿದ್ದು, ಪರಮೇಶ್ವರ ವೀಡಿಯೊ ಹೊರಬರಬಹುದು : ರಮೇಶ ಜಾರಕಿಹೊಳಿ

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement