ಪರಿಸರ ಸಂಬಂಧಿ ಯೋಜನೆ: 12 ವರ್ಷದ ಮುಂಬೈ ಬಾಲಕನಿಗೆ ಜಾಗತಿಕ ಮನ್ನಣೆ

ವಾಷಿಂಗ್ಟನ್: ಕಠಿಣ ಪರಿಸರದ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನವನ್ನು ಗುರುತಿಸಿ ಮುಂಬೈನ 12 ವರ್ಷದ ಪರಿಸರ ಕಾರ್ಯಕರ್ತನನ್ನು 2021 ಅಂತರಾಷ್ಟ್ರೀಯ ಯುವ ಪರಿಸರ ನಾಯಕ ಎಂದು ಹೆಸರಿಸಲಾಗಿದೆ.
ಅಯಾನ್ ಶಂಕ್ಟಾ ಅವರು ಪೊವೈ ಸರೋವರದ ಸಂರಕ್ಷಣೆ ಮತ್ತು ಪುನರ್ವಸತಿಗಾಗಿ 8ರಿಂದ 14 ವಯಸ್ಸಿನ ವಿಭಾಗದಲ್ಲಿ ( in the 8-14 age category for his project Conservation and Rehabilitation of Powai Lake) ಮೂರನೇ ಸ್ಥಾನವನ್ನು ಗೆದ್ದಿದ್ದಾರೆ ಎಂದು ಬುಧವಾರ ಬಿಡುಗಡೆ ಮಾಡಿದ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಆಕ್ಷನ್ ಫಾರ್ ನೇಚರ್ (AFN) ನಿಂದ 2021 ಅಂತಾರಾಷ್ಟ್ರೀಯ ಯುವ ಪರಿಸರ-ಹೀರೋ ಎಂದು ಗೌರವಿಸಲ್ಪಟ್ಟ ಜಗತ್ತಿನ 25 ಯುವ ಪರಿಸರ ಕಾರ್ಯಕರ್ತರಲ್ಲಿ ಅವರು ಒಬ್ಬರಾಗಿದ್ದಾರೆ, ಇದು 8 ರಿಂದ 16 ವರ್ಷ ವಯಸ್ಸಿನ ಪರಿಸರ ಪ್ರಜ್ಞೆಯುಳ್ಳ ಯುವಕರನ್ನು ಗುರುತಿಸುವ ಪ್ರಶಸ್ತಿಯಾಗಿದೆ.
ನನ್ನ ಉದ್ದೇಶವು ಸರೋವರವನ್ನು ತನ್ನ ಹಿಂದಿನ ವೈಭವವನ್ನು ಅಂದರೆ ಶುದ್ಧ ನೀರಿನ ಸರೋವರವಾಗಿ ಮರಳಿ ಪಡೆಯುವುದು” ಎಂದು ಮುಂಬೈಗೆ ಕುಡಿಯುವ ನೀರಿನ ಮೂಲವಾಗಿದ್ದ ಸರೋವರದ ಬಳಿ ವಾಸಿಸುವ ಅಯಾನ್ ಹೇಳಿದ್ದಾರೆ. ಆದರೆ ಅದು ಈಗ ಕಸವನ್ನು ಎಸೆಯುವ ಮತ್ತು ಕೊಳಚೆನೀರು ನೀರು ಹರಿಯುವ ಗುಂಡಿಯಾಗಿಬಿಟ್ಟಿದೆ.
ಆತನ ಯೋಜನೆಯು ಮಾಲಿನ್ಯದ ಬಗ್ಗೆ ಜಾಗೃತಿ ಮೂಡಿಸುವುದು, ಸರೋವರ ಸ್ವಚ್ಛಗೊಳಿಸುವುದು ಮತ್ತು ಅದರ ಪರಿಸರ ವ್ಯವಸ್ಥೆಯನ್ನು ರಕ್ಷಿಸುವ ಗುರಿಯನ್ನು ಹೊಂದಿದೆ. ಅರಿವು ಮೂಡಿಸಲು ಮತ್ತು ಸ್ವಚ್ಛಗೊಳಿಸುವಿಕೆಯನ್ನು ಸಂಘಟಿಸಲು ಎನ್‌ಜಿಒಗಳೊಂದಿಗೆ ಕೆಲಸ ಮಾಡುವುದರ ಜೊತೆಗೆ, ಅಯಾನ್ ಸರೋವರದ ಸ್ಥಿತಿಗತಿಗಳ ಕುರಿತು ಕ್ರಿಯಾ ವರದಿಯನ್ನು ಸಿದ್ಧಪಡಿಸಿದ್ದಾನೆ ಮತ್ತು ಪ್ರಸ್ತುತ ಪೊವಾಯಿ ಸರೋವರದ ಕುರಿತು ಒಂದು ಸಾಕ್ಷ್ಯಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾನೆ.
ಇದು ಜನನಿಬಿಡ ನಗರವಾದ ಮುಂಬೈನಲ್ಲಿ ಪರಿಸರ ಸಮತೋಲನವನ್ನು ತರಲು ಸಹಾಯ ಮಾಡುತ್ತದೆ, ಆದರೆ ಇದು ಅಳಿವಿನಂಚಿನಲ್ಲಿರುವ ಜೀವಿಗಳನ್ನು ಸಂರಕ್ಷಿಸಲು ಸಹಾಯ ಮಾಡುತ್ತದೆ “ಎಂದು ಬಾಲಕ ಅಯಾನ್‌ ಹೇಳಿದ್ದಾನೆ.

ಪ್ರಮುಖ ಸುದ್ದಿ :-   ತಾಯಿಯ ಸಂಪತ್ತು ಉಳಿಸಿಕೊಳ್ಳಲು ಪಿತ್ರಾರ್ಜಿತ ತೆರಿಗೆ ಕಾನೂನು ರದ್ದುಗೊಳಿಸಿದ ರಾಜೀವ ಗಾಂಧಿ : ಪ್ರಧಾನಿ ಮೋದಿ ಆರೋಪ

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement