ಸುಪ್ರೀಕೋರ್ಟಿನಲ್ಲಿ ದೆಹಲಿ ಮೆಟ್ರೋ ವಿರುದ್ಧ ಸುಮಾರು 4660 ಕೋಟಿ ರೂ. ಆರ್ಬಿಟ್ರೇಶನ್‌ ಪ್ರಕರಣ ಗೆದ್ದ ಅನಿಲ್​ ಅಂಬಾನಿ ರಿಲಯನ್ಸ್​ ಇನ್​ಫ್ರಾ

ನವದೆಹಲಿ: ರಿಲಯನ್ಸ್ ಇನ್​ಫ್ರಾಸ್ಟ್ರಕ್ಚರ್ ಲಿಮಿಟೆಡ್​ಗೆ ಪ್ರಮುಖ ಗೆಲುವೊಂದು ದೊರೆತಿದೆ. ಕಳೆದ ನಾಲ್ಕು ವರ್ಷದಿಂದ ನಡೆಯುತ್ತಿದ್ದ ಕೋರ್ಟ್‌ ಕದನದಲ್ಲಿ ದೊಡ್ಡ ಗೆಲುವು ಸಿಕ್ಕಿದೆ.
ಸುಪ್ರೀಂ ಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳ ಸಮಿತಿಯು ಗುರುವಾರ ಅನಿಲ್ ಅಂಬಾನಿಯ ಯೂನಿಟ್​ ಪರವಾಗಿ 2017ರ ಮಧ್ಯಸ್ಥಿಕೆ ತೀರ್ಪು (arbitral award) ಎತ್ತಿಹಿಡಿದಿದೆ. ಈ ಮಧ್ಯಸ್ಥಿಕೆ ನ್ಯಾಯಾಧೀಕರಣ(arbitration tribunal)ದಿಂದ 4660 ಕೋಟಿ ರೂ.ಗಳಿಗಿಂತ ಹೆಚ್ಚು ಮೊತ್ತವು ಬರಲಿದೆ. ಇದರಲ್ಲಿ ಬಡ್ಡಿ ಮೊತ್ತವೂ ಸೇರಿಕೊಂಡಿದೆ. 2,800 ಕೋಟಿ ರೂಪಾಯಿಗಳ ನಷ್ಟವನ್ನು ಬಡ್ಡಿಯೊಂದಿಗೆ ಪಾವತಿಸುವಂತೆ ಡಿಎಂಆರ್‌ಸಿಗೆ ನ್ಯಾಯಾಲಯ ಸೂಚಿಸಿದೆ.
ರಿಲಯನ್ಸ್ ಇನ್​ಫ್ರಾಸ್ಟ್ರಕ್ಚರ್ ಘಟಕವು 2008ರಲ್ಲಿ ದೇಶದ ಮೊದಲ ಖಾಸಗಿ ನಗರ ರೈಲು ಯೋಜನೆಯನ್ನು 2038ರ ವರೆಗೆ ನಡೆಸಲು ದೆಹಲಿ ಮೆಟ್ರೋ ಜೊತೆ ಒಪ್ಪಂದ ಮಾಡಿಕೊಂಡಿತು. 2012ರಲ್ಲಿ ಶುಲ್ಕ ಮತ್ತು ಕಾರ್ಯಾಚರಣೆಗಳ ವಿವಾದಗಳ ನಂತರ, ಅನಿಲ್ ಅಂಬಾನಿಯ ಸಂಸ್ಥೆಯು ರಾಜಧಾನಿಯ ವಿಮಾನ ನಿಲ್ದಾಣದ ಮೆಟ್ರೋ ಯೋಜನೆಯನ್ನು ನಿರ್ವಹಿಸುವುದನ್ನು ನಿಲ್ಲಿಸಿತು ಮತ್ತು ದೆಹಲಿಯ ಮೆಟ್ರೋ ವಿರುದ್ಧ ಮಧ್ಯಸ್ಥಿಕೆ (arbitral) ಪ್ರಕರಣವನ್ನು ಆರಂಭಿಸಿತು. ಮೆಟ್ರೋ ಒಪ್ಪಂದದ ಉಲ್ಲಂಘನೆ ಆರೋಪ ಮತ್ತು ಟರ್ಮಿನೇಶನ್ ಶುಲ್ಕವನ್ನು ಕೋರಿತು.
2017 ರಲ್ಲಿ ರಿಲಯನ್ಸ್ ಇನ್ಫ್ರಾಗೆ ಬಡ್ಡಿಯೊಂದಿಗೆ 2,800 ಕೋಟಿ ರೂಪಾಯಿಗಳನ್ನು ಪಾವತಿಸುವಂತೆ ಮಧ್ಯಸ್ಥಿಕೆ ನ್ಯಾಯಮಂಡಳಿ ಡಿಎಂಆರ್‌ಸಿಗೆ ನಿರ್ದೇಶಿಸಿತ್ತು.
ದೆಹಲಿ ಹೈಕೋರ್ಟ್‌ನ ಏಕ-ನ್ಯಾಯಾಧೀಶರ ಪೀಠವು 2018 ರಲ್ಲಿ ರಿಲಯನ್ಸ್ ಇನ್ಫ್ರಾ ಪರವಾಗಿ ಮಧ್ಯಸ್ಥಿಕೆ ಆದೇಶವನ್ನು ಎತ್ತಿಹಿಡಿಯಿತು. ಆದಾಗ್ಯೂ, 2019 ರಲ್ಲಿ ದೆಹಲಿ ಹೈಕೋರ್ಟ್‌ನ ವಿಭಾಗೀಯ ಪೀಠವು ಈ ಆದೇಶವನ್ನು ಬದಿಗಿರಿಸಿತು.
ಇದು ರಿಲಯನ್ಸ್ ಇನ್ಫ್ರಾ ಈ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿಗೆ ಹೋಯಿತು. ಸುಪ್ರೀಂ ಕೋರ್ಟ್ ಈಗ ಹಿಂದಿನ ಆದೇಶವನ್ನು ರದ್ದುಗೊಳಿಸಿದೆ ಮತ್ತು ಮಧ್ಯಸ್ಥಿಕೆ ನ್ಯಾಯಮಂಡಳಿ ತೀರ್ಪನ್ನು ಎತ್ತಿಹಿಡಿದಿದೆ.
ಈಗ ಬಂದಿರುವ ತೀರ್ಪು ಅನಿಲ್ ಅಂಬಾನಿ ಅವರ ಪಾಲಿಗೆ ನಿರ್ಣಾಯಕ ಗೆಲುವಾಗಿದೆ. ಅವರ ಟೆಲಿಕಾಂ ಸಂಸ್ಥೆಗಳು ದಿವಾಳಿಯಲ್ಲಿದ್ದು, ದೇಶದ ಅತಿದೊಡ್ಡ ಬ್ಯಾಂಕ್​ಗಳಿಂದ ದಾಖಲಾದ ವೈಯಕ್ತಿಕ ದಿವಾಳಿತನದ ಪ್ರಕರಣವನ್ನು ಅನಿಲ್​ ಅಂಬಾನಿ ಎದುರಿಸುತ್ತಿದ್ದಾರೆ. ರಿಲಯನ್ಸ್ ಇನ್​ಫ್ರಾದಿಂದ ಈ ಹಣವನ್ನು ಸಾಲಗಾರರಿಗೆ ಪಾವತಿಸಲು ಬಳಸುತ್ತದೆ ಎಂದು ಕಂಪೆನಿಯ ವಕೀಲರು ಪ್ರಕರಣದ ವಿಚಾರಣೆಯ ಸಮಯದಲ್ಲಿ ಹೇಳಿದ್ದರು. ಅದರ ನಂತರ ಉನ್ನತ ನ್ಯಾಯಾಲಯವು ಬ್ಯಾಂಕ್​ನ ಖಾತೆಗಳನ್ನು ಅನುತ್ಪಾದಕ ಆಸ್ತಿ ಎಂದು ಗುರುತಿಸುವುದನ್ನು ನಿರ್ಬಂಧಿಸಿದೆ. ಪ್ರಕರಣದ ಅಂತಿಮ ತೀರ್ಪು ಸಾಲಗಾರರಿಗೆ ನ್ಯಾಯಾಲಯದ ನಿರ್ಬಂಧವನ್ನು ತೆಗೆದುಹಾಕುತ್ತದೆ.ಉನ್ನತ ನ್ಯಾಯಾಲಯದ ಆದೇಶದ ನಂತರ, ರಿಲಯನ್ಸ್ ಇನ್ಫ್ರಾ ಷೇರುಗಳು ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (ಬಿಎಸ್ಇ) ನಲ್ಲಿ ಸುಮಾರು 5 ಶೇಕಡಾ ಏರಿಕೆಯಾಗಿದೆ.
ನ್ಯಾಯಾಲಯದ ತೀರ್ಪಿನ ವಿವರವಾದ ಪ್ರತಿಯನ್ನು ನಿರೀಕ್ಷಿಸಲಾಗುತ್ತಿದೆ.

ಪ್ರಮುಖ ಸುದ್ದಿ :-   ಎಟಿಎಂಗೆ ಹಣ ತುಂಬಿಸಲು ಬಂದಿದ್ದ ವಾಹನದಿಂದ 50 ಲಕ್ಷ ರೂ. ದರೋಡೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement