ಕಾರವಾರ ಕಡಲತೀರದಲ್ಲಿ ಅಪರೂಪದ ಹಸಿರು ಸಮುದ್ರ (Green Sea) ಆಮೆ ಕಳೇಬರ ಪತ್ತೆ

ಕಾರವಾರ: ಅರಬ್ಬೀ ಸಮುದ್ರದ ಕರಾವಳಿಯಲ್ಲಿ ಅಪರೂಪವಾಗಿ ಕಾಣುವಹಸಿರು ಸಮುದ್ರ (Green Sea) ಆಮೆಯ ಕಳೇಬರ ಗುರುವಾರ ಸಂಜೆ ಕಾರವಾರದ ರವೀಂದ್ರನಾಥ ಠಾಗೂರ್ ಕಡಲತೀರದಲ್ಲಿ ಪತ್ತೆಯಾಗಿದೆ.
ಅವನತಿಯಲ್ಲಿ ಅಂಚಿನಲ್ಲಿರುವುದರಿಂದ ವನ್ಯ ಜೀವಿ ಸೌಂರಕ್ಷಣ ಕಾಯ್ದೆ 1972ರ ಅನುಬಂಧ 1ರ ಅಡಿ ಇದು ಸಂರಕ್ಷಿಸಲ್ಪಟ್ಟ ಜೀವಿಯಾಗಿದೆ.. ಕೆಲವೇ ದಿನಗಳ ಹಿಂದೆ ಇದೇ ಜಾತಿಯ ಆಮೆಯ ಕಳೇಬರವೊಂದು ಕಾರವಾರದ ಕಡಲತೀರದಲ್ಲಿ ಪತ್ತೆಯಾಗಿತ್ತು. ಇದೀಗ ಮತ್ತೆ ಅದೇ ಜಾತಿಯ ಆಮೆಯ ಸತ್ತಿದ್ದು ಪತ್ತೆಯಾಗಿದೆ.ಇದು ತಿಂಗಳಲ್ಲಿ ಸತ್ತ ನಾಲ್ಕನೇ ಆಮೆ ಎಂದು ಹೇಳಲಾಗಿದೆ.
ಗ್ರೀನ್ ಸೀ (chelonia mydus) ಎಂದು ಕರೆಯಲ್ಪಡುವ ಈ ಆಮೆಯು ಸಸ್ಯಹಾರಿ ಆಮೆ. ಇದು ಹೆಚ್ಚಾಗಿ ಪೆಸಿಫಿಕ್ ಸಾಗರದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದರ ದೇಹದ ವಿಶೇಷ ರಚನೆಯಿಂದ ಕೂಡಿರುವುದರಿಂದ ಇದನ್ನು ಗುರುತಿಸಬಹುದಾಗಿದೆ. ಇದರ ಮುಖವು ಮೊಂಡಾಗಿದ್ದು ಸಮುದ್ರದಲ್ಲಿ ಬೆಳೆಯುವ ಪಾಚಿ, ಹುಲ್ಲುಗಳನ್ನು ತಿನ್ನಲು ಬೇಕಾದ ವ್ಯವಸ್ಥೆಗೆ ತಕ್ಕಂತೆ ರಚನೆಯಾಗಿದೆ.
ವಯಸ್ಕ ಆಮೆಯು 110 ರಿಂದ 190 ಕೆ.ಜಿ. ವರೆಗೆ ತೂಕವಿರುತ್ತದೆ. ಸುಮಾರು 10 ಇಂಚು ಉದ್ದವಾಗಿ ಬೆಳೆಯುತ್ತದೆ. ಇದು ಎರಡು ವರ್ಷಗಳಿಗೊಮ್ಮೆ ಮೊಟ್ಟೆಯಿಡುತ್ತವೆ. ಇವುಗಳ ಸಂತತಿ ಅಳವಿನಂಚಿನಲ್ಲಿರುವ ಜೀವಿ ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಕಾರವಾರದ ಅರಣ್ಯಾಧಿಕಾರಿ ವಸಂತ್ ರೆಡ್ಡಿ, ಕೋಸ್ಟಲ್ ಮತ್ತು ಮರೈನ್ ಏಕೋ ಸಿಸ್ಟಮ್ ನ ವಲಯದ ಆರ್.ಎಫ್.ಓ ಪ್ರಮೋದ್, ಡಿಆರ್‌ಎಫ್‌ಒ – ಚಂದ್ರಶೇಖರ, ನವೀನ್, ಮಹೇಶ್ ಮತ್ತು ಸಿಬ್ಬಂದಿ ಹಾಜರಾಗಿ ಪರಿಶೀಲನೆ ನಡೆಸಿ, ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಪ್ರಮುಖ ಸುದ್ದಿ :-   ಬಿಜೆಪಿ ಶಾಸಕ ಹರೀಶ ಪೂಂಜಾ ವಿರುದ್ಧ ಪ್ರಕರಣ ದಾಖಲು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement