ಬಿಡೆನ್‌ ಅಮೆರಿಕ ಅಧ್ಯಕ್ಷರಾದ 7 ತಿಂಗಳ ನಂತರ ಮೊದಲ ಬಾರಿಗೆ ಚೀನಾ ಅಧ್ಯಕ್ಷ ಜಿನ್‌ಪಿಂಗ್‌-ಬಿಡೆನ್‌ ಮಾತುಕತೆ

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಶುಕ್ರವಾರ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಜೊತೆ ಮೊದಲ ಬಾರಿಗೆ ಮಾತನಾಡಿದ್ದಾರೆ. ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಶ್ವೇತಭವನ
ಜೋ ಬಿಡೆನ್‌ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ ಏಳು ತಿಂಗಳ ಬಳಿಕ ನಡೆದ ಮೊಲದ ದೂರವಾಣಿ ಮಾತುಕತೆ ಇದಾಗಿದೆ. ಇನ್ನು ಈ ನಡುವೆ ಚೀನಾದ ಮಾಧ್ಯಮಗಳು ಈ ಮಾತುಕತೆಯ ವೇಳೆ, ಜೋ ಬೈಡೆನ್‌ಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅಮೆರಿಕದ ನೀತಿಯು ಚೀನಾದ ಮೇಲೆ ಎಷ್ಟು ಗಂಭೀರ ತೊಂದರೆಯನ್ನು ಉಂಟು ಮಾಡಿದೆ ಎಂಬುದರ ಬಗ್ಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಅಮೆರಿಕದ ವೈಟ್‌ ಹೌಸ್‌ ಪ್ರಕಾರ, ಅಮೆರಿಕ ಮತ್ತು ಚೀನಾ ನಡುವಿನ ರಾಜತಾಂತ್ರಿಕ ಸಂಬಂಧಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಜೋ ಬಿಡೆನ್ ಹಾಗೂ ಕ್ಸಿ ಜಿನ್‌ಪಿಂಗ್‌ ಮುಕ್ತ ಹಾಗೂ ನೇರವಾಗಿ ತೊಡಗಿಸಿಕೊಳ್ಳಲು ಈ ಮೂಲಕ ಒಪ್ಪಿಕೊಂಡಿದ್ದಾರೆ.
ಉಭಯ ನಾಯಕರ ನಡುವೆ ವಿಸ್ತಾರವಾದ ಹಾಗೂ ಕಾರ್ಯತಂತ್ರದ ಮಾತುಕತೆ ನಡೆದಿದೆ. ಆಸಕ್ತಿಗಳು, ಮೌಲ್ಯಗಳು, ದೃಷ್ಟಿಕೋನಗಳ ಬಗ್ಗೆ ಚರ್ಚೆ ನಡೆಸಿದ್ದಾರೆ,” ಎಂದು ಶ್ವೇತಭವನದ ಬ್ರೀಫಿಂಗ್ ಕೊಠಡಿಯಿಂದ ಹೊರಡಿಸಲಾದ ಪ್ರಕಟಣೆ ತಿಳಿಸಿದೆ. “ಉಭಯ ರಾಷ್ಟ್ರಗಳ ಹಿತಾಸಕ್ತಿಗನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳು ಹಾಗೂ ಕಾರ್ಯತಂತ್ರಗಳ ಬಗ್ಗೆ ಚೀನಾ ಹಾಗೂ ಅಮೆರಿಕದ ನಾಯಕರುಗಳು ಚರ್ಚೆ ನಡೆಸಿದ್ದಾರೆ,” ಎಂದು ಪ್ರಕಟಣೆ ಹೇಳಿದೆ.
ಅಮೆರಿಕ ಹಾಗೂ ಚೀನಾ ದೇಶಗಳ ಆರ್ಥಿಕತೆಯು ಜಗತ್ತಿನ ಪ್ರಮುಖ ಆರ್ಥಿಕತೆಗಳಾಗಿದೆ. ಈ ನಿಟ್ಟಿನಲ್ಲಿ ಅಮೆರಿಕ ಮತ್ತು ಚೀನಾ ನಡುವಿನ ಸ್ಪರ್ಧೆಯು ಸಂಘರ್ಷಕ್ಕೆ ತಿರುಗದಂತೆ ನೋಡುಕೊಳ್ಳಲು ಎಚ್ಚರವಹಿಸಬೇಕು ಎಂದು ಉಭಯ ದೇಶಗಳ ನಾಯಕರು ಮಾತುಕತೆ ನಡೆಸಿದ್ದಾರೆ ಎಂದು ಶ್ವೇತಭವನ ಹೇಳಿದೆ.
ಅಮೆರಿಕ ಅಫ್ಘಾನಿಸ್ತಾನದಿಂದ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಂಡ ಬಳಿಕ ತಾಲಿಬಾನ್‌ ಅಫ್ಘಾನಿಸ್ತಾನವನ್ನು ತನ್ನ ವಶಕ್ಕೆ ಪಡೆದುಕೊಂಡಿದೆ. ಈ ನಡುವೆ ಚೀನಾ ಮಾತ್ರ ತಾಲಿಬಾನ್‌ಗೆ ಬೆಂಬಲ ನೀಡುವ ಹೇಳಿಕೆ ನೀಡುತ್ತಿದೆ.
ಇತ್ತೀಚೆಗೆ “ಚೀನಾ ನಮ್ಮ ಪ್ರಮುಖ ಪಾಲುದಾರ ಹಾಗೂ ಅಫ್ಘಾನಿಸ್ತಾನದ ಆರ್ಥಿಕ ಪುನರುಜ್ಜೀವನಕ್ಕೆ ತಾಲಿಬಾನ್ ನಾಯಕತ್ವ ಬೀಜಿಂಗ್‌ನ ಹಣಕಾಸು ನೆರವಿನ ಮೇಲೆ ಅವಲಂಬಿತವಾಗಿರುತ್ತದೆ,” ಎಂದು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಹೇಳಿದ್ದಾರೆ. “ಚೀನಾ ನಮಗೆ ಅಸಾಧಾರಣ ಅವಕಾಶಗಳನ್ನು ನೀಡುತ್ತಿದೆ. ನಮ್ಮ ದೇಶದಲ್ಲಿ ಹೂಡಿಕೆ ಮಾಡಲು ಹಾಗೂ ದೇಶದ ಪುನರ್ ನಿರ್ಮಾಣಕ್ಕೆ ನೆರವಾಗಲು ಚೀನಾ ಸಿದ್ಧವಾಗಿದೆ. ಹೀಗಾಗಿ ಚೀನಾ ನಮ್ಮ ಪ್ರಮುಖ ಪಾಲುದಾರನಾಗಲಿದೆ ಎಂದು ಹೇಳಿದ್ದಾರೆ.

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement