ಭಾರತದ ನೌಕಾಪಡೆಗೆ ಈಗ ಪರಮಾಣು ಕ್ಷಿಪಣಿ ಟ್ರ್ಯಾಕಿಂಗ್ ಹಡಗು ಐಎನ್‌ಎಸ್ ಧ್ರುವ್ ಬಲ, ಅಮೆರಿಕ-ರಷ್ಯಾ ಸೇರಿ ಐದು ದೇಶಗಳ ಪಟ್ಟಿಗೆ ಸೇರ್ಪಡೆ..!

ನವದೆಹಲಿ: ಭಾರತದ ಮೊದಲ ಉಪಗ್ರಹ ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿ ಟ್ರ್ಯಾಕಿಂಗ್ ಹಡಗು – ಐಎನ್‌ಎಸ್ ಧ್ರುವ್ ಅನ್ನು ಭಾರತೀಯ ನೌಕಾಪಡೆಯು ಶೀಘ್ರದಲ್ಲೇ ಲೋಕಾರ್ಪಣೆ ಮಾಡಲಿದೆ.
ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ನೌಕಾಪಡೆಯ ಹಿರಿಯ ಅಧಿಕಾರಿಗಳು, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮತ್ತು ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ (ಎನ್‌ಟಿಆರ್‌ಒ) ಉಪಸ್ಥಿತಿಯಲ್ಲಿ ಈ ಹಡಗನ್ನು ಪರಿಚಯಿಸುವ ಸಾಧ್ಯತೆಯಿದೆ.
ಡಿಆರ್‌ಡಿಒ ಮತ್ತು ಎನ್‌ಟಿಆರ್‌ಒ ಸಹಯೋಗದಲ್ಲಿ ಹಿಂದೂಸ್ತಾನ್ ಶಿಪ್‌ಯಾರ್ಡ್ ಇದನ್ನು ನಿರ್ಮಿಸಿದೆ. ಐಎನ್‌ಎಸ್ ಧ್ರುವ್ ಆಧುನಿಕ ನೌಕಾ ಯುದ್ಧದಲ್ಲಿ ಅತ್ಯಾಧುನಿಕ ಸಾಧನವನ್ನಾಗಿಸುವ ಹಲವಾರು ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ. ಈ ಹಡಗಿನ ಪ್ರವೇಶದ ನಂತರ, ಭಾರತವು ಅಂತಹ ವಿಶೇಷ ಹಡಗುಗಳನ್ನು ಹೊಂದಿರುವ ಅಮೆರಿಕ, ಬ್ರಿಟನ್‌, ರಷ್ಯಾ, ಫ್ರಾನ್ಸ್ ಮತ್ತು ಚೀನಾ ದೇಶದ ಪಟ್ಟಿಗೆ ಈಗ ಭಾರವೂ ಸೇರುತ್ತದೆ

ಭಾರತದ ಶಸ್ತ್ರಾಗಾರಕ್ಕೆ ಐಎನ್‌ಎಸ್ ಧ್ರುವ್ ಹೇಗೆ ಉಪಯುಕ್ತ..?
ಐಎನ್‌ಎಸ್ ಧ್ರುವ್ ಭಾರತದ ಮೊದಲ ನೌಕಾ ಹಡಗು ಆಗಿದ್ದು, ಪರಮಾಣು ಕ್ಷಿಪಣಿಗಳನ್ನು ದೀರ್ಘ ವ್ಯಾಪ್ತಿಯಲ್ಲಿ ಟ್ರ್ಯಾಕ್ ಮಾಡುವ ಸಾಮರ್ಥ್ಯ ಹೊಂದಿದೆ.
ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಹೆಚ್ಚುತ್ತಿರುವ ಪರಮಾಣು ಬ್ಯಾಲಿಸ್ಟಿಕ್ ಯುದ್ಧದ ಬೆದರಿಕೆಯ ನಡುವೆ ಇದರ ಸೇರ್ಪಡೆ ಮಾಡುತ್ತಿರುವುದು ಮಹತ್ವ ಪಡೆದುಕೊಂಡಿದೆ. ಸುಮಾರು 10,00 ಟನ್ ಹಡಗಿನಲ್ಲಿ ದೀರ್ಘ-ಶ್ರೇಣಿಯ ರಾಡಾರ್‌ಗಳು, ಅತ್ಯಾಧುನಿಕ ಟ್ರ್ಯಾಕಿಂಗ್ ಆಂಟೆನಾಗಳು ಮತ್ತು ಸುಧಾರಿತ ಎಲೆಕ್ಟ್ರಾನಿಕ್ಸ್ ಇದೆ. ವರದಿಗಳ ಪ್ರಕಾರ, ಹಡಗು ಪಾಕಿಸ್ತಾನ ಮತ್ತು ಚೀನಾದಿಂದ ಉಡಾಯಿಸಿದ ಬ್ಯಾಲಿಸ್ಟಿಕ್ ಕ್ಷಿಪಣಿಗಳ ದಾಳಿಯ ಮುಂಚಿನ ಎಚ್ಚರಿಕೆಯನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೆ, ಶತ್ರು ಜಲಾಂತರ್ಗಾಮಿ ನೌಕೆಗಳ ಪತ್ತೆಗಾಗಿ ನಕ್ಷೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೆ ಭಾರತದ ಪರಮಾಣು ಕ್ಷಿಪಣಿ ಟ್ರ್ಯಾಕಿಂಗ್ ಹಡಗನ್ನು ಭಾರತೀಯ ನೌಕಾಪಡೆಯ ಸಿಬ್ಬಂದಿ ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್ (SFC) ನೊಂದಿಗೆ ನಿರ್ವಹಿಸಲಿದ್ದಾರೆ.

ಪ್ರಮುಖ ಸುದ್ದಿ :-   ಗೂಢಲಿಪಿ ಬಹಿರಂಗಗೊಳಿಸಲು ಒತ್ತಾಯಿಸಿದರೆ ಭಾರತದಿಂದ ನಿರ್ಗಮಿಸಬೇಕಾಗ್ತದೆ ಎಂದ ವಾಟ್ಸಾಪ್

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement