ವೇಗವಾಗಿ 16 ಸಾವಿರ ಅಡಿ ಎತ್ತರದ ಮೌಂಟ್ ಕಿಲಿಮಾಂಜರೋ ಪರ್ವತ ಏರಿದ ಭಾರತೀಯ ಮಹಿಳೆ

ನವದೆಹಲಿ: ಆಫ್ರಿಕಾ ಖಂಡದ ಅತೀ ಎತ್ತರದ ಪರ್ವತವಾದ ಮೌಂಟ್ ಕಿಲಿಮಾಂಜರೋ ಪರ್ವತ ಶಿಖರ ಏರುವ ಮೂಲಕ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಮಹಿಳಾ ಸಿಬ್ಬಂದಿ ಗೀತಾ ಸಮೋಟಾ ಹೊಸ ದಾಖಲೆ ಮಾಡಿದ್ದಾರೆ.
ಆಫ್ರಿಕಾ ಖಂಡದ ತಾಂಜಾನಿಯಾದಲ್ಲಿರುವ ಈ ಶಿಖರವನ್ನು ಅತೀ ವೇಗವಾಗಿ ಏರಿದ ಭಾರತೀಯ ಮಹಿಳೆ ಎಂಬ ದಾಖಲೆಯನ್ನು ಗೀತಾ ಸಮೋಟಾ ನಿರ್ಮಿಸಿದ್ದಾರೆ. ಹಾಗೆಯೇ ಈ ಸಾಧನೆ ಮಾಡಿದ ಕೇಂದ್ರ ಭದ್ರತಾ ಪಡೆಯ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಸುಮಾರು 16 ಸಾವಿರ ಅಡಿ ಎತ್ತರಕ್ಕೇರಿದ ಗೀತಾ ಸಮೋಟಾ ಭಾರತದ ತ್ರಿವರ್ಣ ಪಾತಾಕೆ ಹಾರಿಸಿದ್ದಾರೆ.
ಮೌಂಟ್ ಕಿಲಿಮಾಂಜರೋ ಪರ್ವತ ಶಿಖರ ಮೂರು ಜ್ವಾಲಾಮುಖಿ ಶಂಕುಗಳನ್ನು ಹೊಂದಿದೆ. ಇದು ವಿಶ್ವದ ಅತಿ ಎತ್ತರದ ಏಕೈಕ ಮುಕ್ತ ಪರ್ವತ ಎಂಬುದು ವಿಶೇಷ. ಇದರ ಎತ್ತರ ಸಮುದ್ರ ಮಟ್ಟದಿಂದ 5,895 ಮೀಟರ್. ಹಾಗೆಯೇ ಭೂಮಿಯಿಂದ ಇದರ ತುತ್ತ ತುದಿಯನ್ನು ಕ್ರಮಿಸಬೇಕಿದ್ದರೆ 16,100 ಅಡಿ ಏರಬೇಕು.
ಈ ಹಿಂದೆ ಈ ಪರ್ವತವನ್ನು ಆಂಧ್ರಪ್ರದೇಶದ ಒಂಬತ್ತು ವರ್ಷದ ಹುಡುಗಿ ಕಡಪಾಲ ರಿತ್ವಿಕಾ ಶ್ರೀ ಏರಿ ಸಾಹಸ ಮಾಡಿದ್ದರು. ಕಿಲಿಮಂಜಾರೊ ಪರ್ವತವನ್ನು ಏರಿದ ಏಷ್ಯಾದ ಕಿರಿಯ ಹುಡುಗಿ ಎಂಬ ದಾಖಲೆ ರಿತ್ವಿಕಾ ಹೆಸರಿನಲ್ಲಿದೆ. ಕಿಲಿಮಂಜಾರೊ ಶಿಖರವನ್ನು ಭೂಮಿಯ ಮೇಲಿನ ನಾಲ್ಕನೇ ಅತ್ಯಂತ ಪ್ರಮುಖ ಸ್ಥಳ ಎಂದು ಪರಿಗಣಿಸಲಾಗುತ್ತದೆ . ಇದು ಕಿಲಿಮಂಜಾರೊ ರಾಷ್ಟ್ರೀಯ ಉದ್ಯಾನವನದ ಭಾಗವಾಗಿದ್ದು, ವಿಶ್ವ ಚಾರಣ ಪ್ರಿಯರ ಪ್ರಮುಖ ತಾಣವಾಗಿದೆ.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಇಂದಿನ ಪ್ರಮುಖ ಸುದ್ದಿ :-   ಮಣಿಪುರದಲ್ಲಿ ಮತ್ತೆ ಹಿಂಸಾಚಾರ, ಪೊಲೀಸರು ಸೇರಿ 5 ಮಂದಿ ಸಾವು, 12 ಮಂದಿಗೆ ಗಾಯ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

0 / 5. ಒಟ್ಟು ವೋಟುಗಳು 0

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement