ಮುಂಬೈನಲ್ಲೊಂದು ನಿರ್ಭಯಾ ಪ್ರಕರಣ: 33 ಗಂಟೆಗಳ ಹೋರಾಟದ ನಂತರ ಮೃತಪಟ್ಟ ಅತ್ಯಾಚಾರ ಸಂತ್ರಸ್ತೆ

ಮುಂಬೈ: ಮುಂಬೈನ ಸಾಕಿನಾಕಾ ಪ್ರದೇಶದಲ್ಲಿ ಅತ್ಯಾಚಾರಕ್ಕೊಳಗಾದ 32 ವರ್ಷದ ಮಹಿಳೆ ನಗರದ ಆಸ್ಪತ್ರೆಯಲ್ಲಿ 33 ಗಂಟೆಗಳ ಸುದೀರ್ಘ ಹೋರಾಟದ ನಂತರ ಮೃತಪಟ್ಟಿದ್ದಾರೆ.
ಈಗ ಮೃತಪಟ್ಟ ಮಹಿಳೆ ಶುಕ್ರವಾರ ಮಧ್ಯರಾತ್ರಿ ಸಾಕಿನಾಕಾದಲ್ಲಿ ನಿಂತಿದ್ದ ಟೆಂಪೋವೊಂದರಲ್ಲಿ ಅತ್ಯಾಚಾರಕ್ಕೊಳಗಾಗಿ ನಂತರ ಕ್ರೂರವಾಗಿ ಹಲ್ಲೆಗೊಳಗಾದಳು. ಬೆಳಗಿನ ಜಾವ 3: 30 ರ ಸುಮಾರಿಗೆ ಆಕೆ ಟೆಂಪೋದಲ್ಲಿ ಪ್ರಜ್ಞೆ ತಪ್ಪಿ ಬಿದ್ದಿರುವುದನ್ನು ಸಾಕಿನಾಕಾ ಪೊಲೀಸರು ಪತ್ತೆ ಮಾಡಿದ್ದಾರೆ. ತಕ್ಷಣವೇ ಆಕೆಯನ್ನು ರಾಜವಾಡಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು, ಅಲ್ಲಿ 33 ಗಂಟೆಗಳ ಕಾಲ ಜೀವನ್ಮರಣದ ನಡುವೆ ಹೋರಾಡಿದ ನಂತರ ಮೃತಪಟ್ಟಿದ್ದಾಳೆ. ಅತ್ಯಾಚಾರ ಮಾಡಿದ ನಂತರ ದುರುಳರು ಆಕೆಯ ಖಾಸಗಿ ಭಾಗಗಳಲ್ಲಿ ರಾಡ್ ಹಾಕಿ ಗಂಭೀರವಾಗಿ ಗಾಯಗೊಳಿಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ಮೋಹನ್ ಚೌಹಾಣ್ ಎಂಬಾತನ ಮೇಲೆ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ದೂರು ದಾಖಲಿಸಲಾಗಿದೆ. ಈತ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾನೆ ಮತ್ತು ಸಾಕಿನಾಕಾದ ರಸ್ತೆಬದಿಯಲ್ಲಿ ನಿಲ್ಲಿಸಿದ್ದ ಟೆಂಪೋದಲ್ಲಿ ಆಕೆಯ ಖಾಸಗಿ ಅಂಗಗಳಿಗೆ ರಾಡ್‌ ತುರುಕಿ ಕ್ರೌರ್ಯ ಮೆರೆದಿದ್ದಾನೆ ಎಂದು ಪೊಲೀಸರ ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದುಬಂದಿದೆ. ಟೆಂಪೋ ಒಳಗೆ ರಕ್ತದ ಕಲೆಗಳು ಕಂಡುಬಂದಿವೆ.
ಈ ಘಟನೆಯು 2012 ರ ದೆಹಲಿ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ನೆನಪಿಸುವಷ್ಟ ಭೀಕರವಾಗಿದೆ. ದೆಹಲಿ ಪ್ರಕರಣದಲ್ಲಿ ಯುವ ಮಹಿಳಾ ಫಿಸಿಯೋಥೆರಪಿ ಇಂಟರ್ನಿ ಮೇಲೆ ಚಲಿಸುವ ಬಸ್ಸಿನಲ್ಲಿ ಅತ್ಯಾಚಅರ ಮಾಡಲಾಗಿತ್ತು. ರಾಡ್‌ ನಿಂದ ಹೊಡೆದು ಬಸ್ಸಿನೊಳಗೆ ಚಿತ್ರಹಿಂಸೆ ನೀಡಲಾಯಿತು. ಹಲವು ದಿನಗಳ ಕಾಲ ಜೀವನ್ಮರಣದ ಹೋರಾಟದ ನಂತರ ಆಕೆ ಸಿಂಗಾಪುರದ ಆಸ್ಪತ್ರೆಯಲ್ಲಿ ಸಾವಿಗೆ ತುತ್ತಾದಳು. ಈ ಅಪರಾಧವು ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.

ಪ್ರಮುಖ ಸುದ್ದಿ :-   ರೇವಣ್ಣ, ಪ್ರಜ್ವಲ್ ಎಸ್‌ಐಟಿ ವಿಚಾರಣೆಗೆ ಹಾಜರಾಗದಿದ್ದರೆ ಕಾನೂನು ಪ್ರಕಾರ ಬಂಧನ: ಗೃಹ ಸಚಿವ ಪರಮೇಶ್ವರ

 

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement