46 ವರ್ಷಗಳಲ್ಲೇ ದೆಹಲಿಯಲ್ಲಿ ಅತಿ ಹೆಚ್ಚು ಮಳೆ..ಈಜುಕೊಳವಾಗಿ ಮಾರ್ಪಟ್ಟ ದೆಹಲಿ ವಿಮಾನ ನಿಲ್ದಾಣ

ನವದೆಹಲಿ: ಶನಿವಾರ ಬೆಳಿಗ್ಗೆ ರಾಷ್ಟ್ರ ರಾಜಧಾನಿಯಲ್ಲಿ ಭಾರೀ ಮಳೆಯಾದ ನಂತರ, ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಮುಂಭಾಗ ಮತ್ತು ಇತರ ಕೆಲವು ಪ್ರದೇಶಗಳಲ್ಲಿ ಪ್ರವಾಹಕ್ಕೆ ಸಾಕ್ಷಿಯಾಯಿತು.
ಅಧಿಕಾರಿಗಳ ಪ್ರಕಾರ, ಈಗ ನೀರನ್ನು ಹೊರಹಾಕಲಾಗಿದೆ ಮತ್ತು ಎಲ್ಲವೂ ಸ್ಪಷ್ಟವಾಗಿದೆ.
ಒಂದು ಟ್ವೀಟ್ ನಲ್ಲಿ ದೆಹಲಿ ವಿಮಾನ ನಿಲ್ದಾಣವು, “ಹಠಾತ್ ಭಾರೀ ಮಳೆಯಿಂದಾಗಿ, ಸ್ವಲ್ಪ ಸಮಯದವರೆಗೆ, ವಿಮಾನ ನಿಲ್ದಾಣದಲ್ಲಿ ಮುಂಭಾಗದಲ್ಲಿ ನೀರು ತುಂಬಿಹೋಯಿತು.

ಸಫ್ದರ್‌ಜಂಗ್ ವೀಕ್ಷಣಾಲಯದ ಪ್ರಕಾರ, ದೆಹಲಿಯಲ್ಲಿ ಶುಕ್ರವಾರ ಬೆಳಿಗ್ಗೆ 8.30 ರಿಂದ ಶನಿವಾರ ಬೆಳಿಗ್ಗೆ 8.30 ರ ನಡುವೆ 94.7 ಮಿಮೀ ಮಳೆಯಾಗಿದೆ. ಶನಿವಾರ ಬೆಳಿಗ್ಗೆ ಸುರಿದ ಭಾರೀ ಮಳೆಯಿಂದಾಗಿ ನಗರದ ಹಲವು ರಸ್ತೆಗಳು ಜಲಾವೃತಗೊಂಡಿವೆ
ಭಾರತೀಯ ಹವಾಮಾನ ಇಲಾಖೆ ನಗರಕ್ಕೆ ಶನಿವಾರ ಬೆಳಿಗ್ಗೆ 7 ರಿಂದ 10 ರವರೆಗೆ ಮತ್ತು ನಂತರ ಮತ್ತೆ 11.30 ರಿಂದ ಮಧ್ಯಾಹ್ನ 2.30 ರವರೆಗೆ ‘ಆರೆಂಜ್ ಅಲರ್ಟ್’ ನೀಡಿದೆ.
46 ವರ್ಷಗಳಲ್ಲಿ ಅತಿಹೆಚ್ಚು ಮಳೆ
ಸಫ್ದರ್‌ಜಂಗ್ ವೀಕ್ಷಣಾಲಯವು ರಾಷ್ಟ್ರೀಯ ರಾಜಧಾನಿಯಲ್ಲಿ ಈ ಮಳೆಗಾಲದಲ್ಲಿ ಒಟ್ಟು 1,100 ಮಿಮೀ ಮಳೆಯಾಗಿದೆ. ಈ ಮೊದಲು, 2003 ರಲ್ಲಿ, ದೆಹಲಿಯಲ್ಲಿ ಮಳೆಗಾಲದಲ್ಲಿ ಒಟ್ಟು 1,050 ಮಿಮೀ ಮಳೆಯಾಗಿತ್ತು. ಈಗ ಅದನ್ನು ಮೀರಿ ಮಳೆಯಾಗಿದೆ ಎಂದು ಹೇಳಿದೆ.
ಇದರೊಂದಿಗೆ, 2021 ಮಾನ್ಸೂನ್ 1975 ರ ನಂತರ ದೆಹಲಿಯಲ್ಲಿ ಕಂಡ ಅತಿ ಹೆಚ್ಚು ಮಳೆಯಾಗಿದ್ದು, ಒಟ್ಟು 1,150 ಮಿಮೀ ಮಳೆಯಾಗಿದೆ. ಹೀಗಾಗಿ, ದೆಹಲಿಯ 2021 ಮುಂಗಾರು ಮಳೆ 46 ವರ್ಷಗಳಲ್ಲಿ ಅತಿ ಹೆಚ್ಚು! ಮತ್ತು ಮುಂಗಾರು ಇನ್ನೂ ಮುಗಿದಿಲ್ಲ.

ಪ್ರಮುಖ ಸುದ್ದಿ :-   ರೇವಣ್ಣ, ಪ್ರಜ್ವಲ್ ಎಸ್‌ಐಟಿ ವಿಚಾರಣೆಗೆ ಹಾಜರಾಗದಿದ್ದರೆ ಕಾನೂನು ಪ್ರಕಾರ ಬಂಧನ: ಗೃಹ ಸಚಿವ ಪರಮೇಶ್ವರ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement