ಅಂದಾಜ್ ಅಪ್ನಾ ಅಪ್ನಾ ..!: ಮಳೆಯಲ್ಲಿ ಛತ್ರಿ ಹಿಡಿದು ಗಿಡಕ್ಕೆ ನೀರು, ಕೆಳಗೆ ಮಾರ್ಬಲ್​ ;ಈ ದೃಶ್ಯಕ್ಕೆ ಸಿಕ್ಕಾಪಟ್ಟೆ ಟ್ರೋಲ್​ ಆದ ಮಧ್ಯಪ್ರದೇಶ ಸಿಎಂ

ಭೋಪಾಲ್​: ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ ಸಿಕ್ಕಾಪಟ್ಟೆ ಟ್ರೋಲ್​ ಆಗುತ್ತಿದ್ದಾರೆ. ಅವರ ಒಂದು ಫೋಟೊಕ್ಕೆ ನೆಟ್ಟಗರು ಛೇಡಿಸುತ್ತಿದ್ದಾರೆ. ಇದಕ್ಕೆ ಕಾರಣ ಆ ಫೋಟೋ ನೀಡುವ ಸಂದೇಶ.
ಆ ಫೋಟದಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್​ ಚೌಹಾಣ್​ ಅವರು ಗಿಡವೊಂದನ್ನು ನೆಟ್ಟು, ಅದಕ್ಕೆ ನೀರು ಹಾಕುತ್ತಿದ್ದಾರೆ. ಇದರಲ್ಲೇಣು ಆಶ್ವರ್ಯ ಎಂದು ಕೇಳಬೇಡಿ.. ಅಚ್ಚರಿ ಇರುವುದೇ ಇಲ್ಲಿ. ಹೀಗಾಗಿಯೇ ಫೋಟೋ ವೈರಲ್​ ಆದ ಬೆನ್ನಲ್ಲೇ ಸಿಕ್ಕಾಪಟ್ಟೆ ಟ್ರೋಲ್​ ಆಗಲು ಶುರುವಾಗಿದೆ.

ಶಿವರಾಜ್​ ಸಿಂಗ್​ ಚೌಹಾಣ್​​ ಎರಡು ದೊಡ್ಡ ಮಾರ್ಬಲ್​ ಟೈಲ್ಸ್‌ ಮೇಲೆ ನಿಂತಿದ್ದಾರೆ. ಬಗ್ಗಿ ಒಂದು ಗಿಡಕ್ಕೆ ನೀರು ಹಾಕುತ್ತಿದ್ದಾರೆ. ಅವರ ಪಕ್ಕದಲ್ಲಿ ನಿಂತ ಅವರ ಸಹಾಯಕ ಅವರಿಗೆ ಛತ್ರಿ ಹಿಡಿದಿದ್ದಾರೆ. ಯಾಕೆಂದರೆ ಅಲ್ಲಿ ಮಳೆ ಸುರಿಯುತ್ತಿತ್ತು. ಅಂಥ ಮಳೆಯಲ್ಲಿ, ಕೊಡೆ ಹಿಡಿದು ಗಿಡಕ್ಕೆ ನೀರು ಹಾಕಿದ್ದೇ ಈ ಟ್ರೋಲ್​ಗೆ ಕಾರಣ. ಸಾಮಾನ್ಯ ಜನರಷ್ಟೇ ಅಲ್ಲದೆ ಕಾಂಗ್ರೆಸ್​ ಕೂಡ ಶಿವರಾಜ್​ ಸಿಂಗ್​ ಚೌಹಾಣ್​ ವಿರುದ್ಧ ಇದಕ್ಕೆ ಅಪಹಾಸ್ಯ ಮಾಡಿದೆ. ಕಳೆದ ಶುಕ್ರವಾರ ನೆಟ್ಟಿಗರೊಬ್ಬರು ಈ ಫೋಟೋ ಶೇರ್​ ಮಾಡಿಕೊಂಡು..ನಮ್ಮದೇ ಸ್ಟೈಲು..ನಮ್ಮದೇ ರೀತಿ ಎಂದು ಕ್ಯಾಪ್ಷನ್​ ಬರೆದಿದ್ದಾರೆ. ಕೆಲವೇ ಹೊತ್ತಲ್ಲಿ ಫೋಟೋ ಭಾರೀ ವೈರಲ್ ಆಗಿದೆ.
ಗಿಡ ನೆಡಲು ಅಷ್ಟು ದುಬಾರಿ ಬೆಲೆಯ ಮಾರ್ಬಲ್​ ಕಲ್ಲು ಹಾಕಿ ನಿಲ್ಲಬೇಕಾ? ಅಂಥ ಮಳೆ ಬರುತ್ತಿದ್ದಾಗಲೂ ಸಸಿಗೆ ನೀರು ಹಾಕಬೇಕಾ? ಎಂಬಿತ್ಯಾದಿ ಪ್ರಶ್ನೆಗಳನ್ನು ನೆಟ್ಟಿಗರು ಎತ್ತಿದ್ದಾರೆ. ಕಾಂಗ್ರೆಸ್​ ಕೂಡ ಶಿವರಾಜ್​ ಸಿಂಗ್​ ಚೌಹಾಣ್​ರನ್ನು ತುಂಬ ಟೀಕಿಸಿದೆ. ಮಣ್ಣಿನ ಮಗ, ರೈತನ ಮಗ ಎಂದು ಅಪಹಾಸ್ಯ ಮಾಡಿದೆ. ಮಧ್ಯಪ್ರದೇಶ ಕಾಂಗ್ರೆಸ್​ ಮಾಧ್ಯಮ ಕೋ ಆರ್ಡಿನೇಟರ್​ ನರೇಂದ್ರ ಸಲುಜಾ ಈ ಫೋಟೋವನ್ನು ಟ್ವೀಟ್​ ಮಾಡಿದ್ದಾರೆ. ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದು, ಛತ್ರಿ, ಮಳೆ, ಕ್ಯಾಮರಾ ಮತ್ತು ಆ್ಯಕ್ಷನ್​ ಎಂದು ಒಬ್ಬರು ಕಾಮೆಂಟ್ ಬರೆದಿದ್ದಾರೆ.

ಪ್ರಮುಖ ಸುದ್ದಿ :-   ಬೆಂಬಲ ಹಿಂಪಡೆದ ಮೂವರು ಪಕ್ಷೇತರ ಶಾಸಕರು : ಸಂಕಷ್ಟದಲ್ಲಿ ಹರಿಯಾಣದ ಬಿಜೆಪಿ ಸರ್ಕಾರ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement