ತಾಲಿಬಾನ್‌ ಉಗ್ರರನ್ನು ಬೆಂಬಲಿಸಿ ರ‍್ಯಾಲಿ ನಡೆಸಿದ ಮಹಿಳೆಯರು !

ಕಾಬೂಲ್‌ : ಅಫ್ಘಾನಿಸ್ತಾನದಲ್ಲಿ ರಚನೆಯಾಗುತ್ತಿರುವ ಸರ್ಕಾರದಲ್ಲಿ ಮಹಿಳೆಯರಿಗೂ ಪ್ರಾತಿನಿಧ್ಯ ನೀಡಬೇಕೆಂದು ಆಗ್ರಹಿಸಿ ಅಲ್ಲಿನ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದರೆ ಕಾಬೂಲ್‌ನಲ್ಲಿ ಮತ್ತೊಂದು ಮಹಿಳೆಯರ ಗುಂಪು ಅಫ್ಘಾನಿಸ್ತಾನವನ್ನು ಇಸ್ಲಾಮಿಕ್ ಎಮಿರೇಟ್‌ ಮಾಡಬೇಕೆಂದು ಆಗ್ರಹಿಸಿ ಪ್ರದರ್ಶನಕ್ಕೆ ಮುಂದಾಗಿದೆ
ವಿಶ್ವ ವಿದ್ಯಾನಿಲಯದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಇತರೆ ಸಿಬ್ಬಂದಿ ಕಾಬೂಲ್‌ನ ಬೀದಿಗಳಲ್ಲಿ ಮೆರವಣಿಗೆ ನಡೆಸಿದ್ದಾರೆ. ಈ ವಿದ್ಯಮಾನವನ್ನು ಬಿತ್ತರ ಮಾಡಲು ಪತ್ರಕರ್ತರಿಗೆ ಮುಕ್ತ ಆಹ್ವಾನ ನೀಡಲಾಗಿತ್ತು.
ಪುರುಷರು ಹಾಗೂ ಸ್ತ್ರೀಯರಿಗೆ ಪ್ರತ್ಯೇಕ ತರಗತಿಗಳನ್ನು ಇಟ್ಟುಕೊಳ್ಳುವ ಆಲೋಚನೆಗೆ ಬೆಂಬಲ ನೀಡಿದ ಮಹಿಳೆಯರು, ಅಫ್ಘಾನಿಸ್ತಾನ ಇಸ್ಲಾಮಿಕ್ ಎಮಿರೇಟ್ ನಿರ್ಮಾಣಕ್ಕೆ ತಮ್ಮ ಸಂಪೂರ್ಣ ಬೆಂಬಲ ಇರುವುದಾಗಿ ಹೇಳಿಕೊಂಡಿದ್ದಾರೆ. ಇದಕ್ಕೂ ಮುನ್ನ ತಾಲಿಬಾನ್ ನಾಯಕತ್ವಕ್ಕೆ ಬೆಂಬಲ ಕೊಟ್ಟು, ಕುಂದುಜ಼್‌ ಪ್ರಾಂತ್ಯದಲ್ಲಿ ನೂರಾರು ಮಹಿಳೆಯರು ರ‍್ಯಾಲಿ ಹಮ್ಮಿಕೊಂಡಿದ್ದರು

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ವೀಡಿಯೊ..| ಅಬ್ಬಬ್ಬಾ...ಅದೆಷ್ಟು ಉದ್ದನೆಯ ಕೂದಲು ; ಇದು ಗಿನ್ನೆಸ್ ದಾಖಲೆಗೆ ಸೇರ್ಪಡೆ : ಇವರ ಕೂದಲು ವಿಶ್ವದ ಅತಿ ಎತ್ತರದ ಮನುಷ್ಯನಿಗಿಂತಲೂ ಉದ್ದ | ವೀಕ್ಷಿಸಿ

ನಿಮ್ಮ ಕಾಮೆಂಟ್ ಬರೆಯಿರಿ

advertisement