ಧಾರವಾಡ: ರಸ್ತೆಯಲ್ಲಿ ಮಹಿಳೆ ಕೈಹಿಡಿದು ಎಳೆದಾಡಿದ ಜೆಡಿಎಸ್ ಮುಖಂಡ, ವಿಡಿಯೋ ವೈರಲ್‌

ಧಾರವಾಡ: ಜೆಡಿಎಸ್ ಮುಖಂಡ (JDS Leader) ರಸ್ತೆಯಲ್ಲಿ ಮಹಿಳೆಯೊಬ್ಬರ ಕೈಹಿಡಿದು ಎಳೆದಾಡಿದ ಘಟನೆ ಧಾರವಾಡ ನಗರದ ಸತ್ತೂರ ಬಡಾವಣೆಯಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಜೆಡಿಎಸ್ ಮುಖಂಡ ಶ್ರೀಕಾಂತ ಜಮನಾಳ ಎಂಬವರ ವಿರುದ್ಧ ಮಹಿಳೆಯ ಕೈಹಿಡಿದು ಎಳೆದಾಡಿದ ಆರೋಪ ಕೇಳಿಬಂದಿದೆ.

ಶ್ರೀಕಾಂತ ಜಮನಾಳ ಸತ್ತೂರಿನ ಮಹಿಳೆ ಮನೆಗೆ ತೆರಳಿದ್ದರು. ಜೆಡಿಎಸ್ ಮುಖಂಡ ಶ್ರೀಕಾಂತ ಜಮನಾಳ ನಡು ಬೀದಿಯಲ್ಲೇ ಸತ್ತೂರ ನಿವಾಸಿಯಾಗಿರುವ ಮಹಿಳೆಯ ಕೈಯನ್ನು ಹಿಡಿದು ಎಳೆದಾಡಿದ್ದಾರೆ. ಘಟನೆಗೆ ಸೂಕ್ತ ಕಾರಣ ತಿಳಿದುಬಂದಿಲ್ಲ. ಆದರೆ ಮಹಿಳೆಯ ಕೈಹಿಡಿದು ಎಳೆದಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸದ್ಯ ಪೊಲೀಸರು ಆರೋಪಿ ಶ್ರೀಕಾಂತ ಜಮನಾಳರನ್ನು ಹುಡುಕುತ್ತಿದ್ದಾರೆ

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ ವೇಳೆ ಬಿಜೆಪಿಗೆ ಶಾಕ್ : ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಿಜೆಪಿ ಸದಸ್ಯ ಕೆ.ಪಿ.ನಂಜುಂಡಿ

ನಿಮ್ಮ ಕಾಮೆಂಟ್ ಬರೆಯಿರಿ

advertisement