ರಾಷ್ಟ್ರೀಯ ಖೋ -ಖೋ ಮಾಜಿ ಆಟಗಾರ್ತಿಯ ಕತ್ತು ಹಿಸುಕಿ ಕೊಲೆ:ಅತ್ಯಾಚಾರದ ಶಂಕೆ

ಬಿಜ್ನೋರ್: 24 ವರ್ಷದ ರಾಷ್ಟ್ರ ಮಟ್ಟದ ಮಾಜಿ ಖೋ-ಖೋ ಆಟಗಾರ್ತಿಯ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಬಿಜ್ನೋರ್ ನ ರೈಲ್ವೆ ನಿಲ್ದಾಣದ ಬಳಿ ರೈಲ್ವೆ ಸ್ಲೀಪರ್ ಗಳ ಮಧ್ಯದಲ್ಲಿ ಗಂಭೀರವಾಗಿ ಗಾಯಗೊಂಡು ಬಿದ್ದಿದ್ದಳು. ಏತನ್ಮಧ್ಯೆ, ಕೊಲೆಗೂ ಮುನ್ನ ಆಕೆಯ ಮೇಲೆ ಅತ್ಯಾಚಾರ ನಡೆದಿದೆ ಎಂದು ಸಂತ್ರಸ್ತೆಯ ಕುಟುಂಬ ಆರೋಪಿಸಿದೆ.
ಸಂತ್ರಸ್ತೆಯ ಮನೆ ಅಪರಾಧ ಸ್ಥಳದಿಂದ ಕೇವಲ 30 ಮೀಟರ್ ದೂರದಲ್ಲಿದೆ. ನಜೀಬಾಬಾದ್ ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್ ಪಿ) ಪ್ರಕರಣ ದಾಖಲಿಸಿಕೊಂಡಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ವರದಿ ಹೇಳಿದೆ.
ಬಿಜ್ನೋರ್‌ ಕುಟಿಯಾ ಕಾಲೋನಿಯ ನಿವಾಸಿಯಾದ ಸಂತ್ರಸ್ತೆ ಶುಕ್ರವಾರ ಬೆಳಿಗ್ಗೆ ಶಾಲೆಯಲ್ಲಿ ಬಯೋಡೇಟಾ ಸಲ್ಲಿಸಲು ಮನೆಯಿಂದ ಹೊರಟಿದ್ದಳು. ತುಂಬಾ ಸಮಯದ ವರೆಗೆ ಮನೆಗೆ ಹಿಂತಿರುಗಿ ಅವಳ ಕುಟುಂಬವು ಆಕೆಗೆ ಕರೆ ಮಾಡಿತ್ತು, ಈ ಸಂದರ್ಭದಲ್ಲಿ ಅವಳ ಫೋನ್ ಸ್ವಿಚ್ ಆಫ್ ಆಗಿತ್ತು.
ಇದೇವೇಳೆ ರೈಲ್ವೆ ಸ್ಲೀಪರ್ ಗಳ ಬಳಿ ಹಾದುಹೋಗುತ್ತಿದ್ದ ಆಕೆಯ ನೆರೆಹೊರೆಯವರು ಸಂತ್ರಸ್ತೆಯನ್ನು ಗುರುತಿಸಿದ್ದಾರೆ. ಸಂತ್ರಸ್ತೆಯ ಕುತ್ತಿಗೆಗೆ ದುಪಟ್ಟಾ ಬಿಗಿಯಲಾಗಿತ್ತು. ಅವಳನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಅವಳನ್ನು ಸತ್ತಿದ್ದಾಳೆ ಎಂದು ಘೋಷಿಸಿದರು. ನಂತರ, ಪೊಲೀಸ್ ಜಿಆರ್ ಪಿ ಮತ್ತು ಆರ್ ಪಿಎಫ್ ತಂಡ ಸ್ಥಳಕ್ಕೆ ತಲುಪಿತು.
ಸಂತ್ರಸ್ತೆ ಮಹಾರಾಷ್ಟ್ರದಲ್ಲಿ ೨೦೧೬ ರ ರಾಷ್ಟ್ರೀಯ ಖೋ-ಖೋ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿದ್ದಳು ಎಂದು ವರದಿಯಾಗಿದೆ. ತನ್ನ ಅಧ್ಯಯನದ ಸಮಯದಲ್ಲಿ, ವಿವಿಧ ಅಂತರ್‌-ವಿಶ್ವವಿದ್ಯಾಲಯ ಚಾಂಪಿಯನ್ ಶಿಪ್ ಗಳಲ್ಲಿ ಸಹ ಆಡಿದ್ದಳು.

ಪ್ರಮುಖ ಸುದ್ದಿ :-   ಇವರು ಭಾರತದ ಅತ್ಯಂತ ಶ್ರೀಮಂತ ಅಭ್ಯರ್ಥಿ : ತೆಲುಗು ದೇಶಂ ಪಕ್ಷದ ಇವರ ಆಸ್ತಿ 5,785 ಕೋಟಿ ರೂಪಾಯಿ...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement