ನವದೆಹಲಿ: ಗುಜರಾತ್ ಬಿಜೆಪಿ ಪಕ್ಷದ ಪ್ರಧಾನ ಕಚೇರಿಯಲ್ಲಿ ಮಧ್ಯಾಹ್ನ 3 ಗಂಟೆಗೆ ಶಾಸಕಾಂಗ ಪಕ್ಷದ ಸಭೆ ಕರೆದಿದೆ. ಸಭೆಯ ನಂತರ ಹೊಸ ಮುಖ್ಯಮಂತ್ರಿಯನ್ನು ಘೋಷಿಸುವ ಸಾಧ್ಯತೆಯಿದೆ.
ವೀಕ್ಷಕರಾಗಿ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಮತ್ತು ನರೇಂದ್ರ ಸಿಂಗ್ ತೋಮರ್ ಭಾನುವಾರ ಬೆಳಿಗ್ಗೆ ಗುಜರಾತ್ ತಲುಪಿದ್ದಾರೆ.
ಒಂದು ವೇಳೆ ಭಾನುವಾರವೇ ಹೊಸ ಮುಖ್ಯಮಂತ್ರಿ ಯಾರು ಎಂದು ಘೋಷಿಸಿದರೆ, ಸೋಮವಾರ ಪ್ರಮಾಣವಚನ ಸಮಾರಂಭ ನಡೆಯಬಹುದು ಎಂದು ಮೂಲಗಳು ತಿಳಿಸಿವೆ ಇಂಡಿಯಾ ಟುಡೆ ವರದಿ ಮಾಡಿದೆ.
ನಾವು ಹೆಚ್ಚಿನ ಚರ್ಚೆಗಳನ್ನು ನಡೆಸಲು ಇಲ್ಲಿಗೆ ಬಂದಿದ್ದೇವೆ. ನಾವು ರಾಜ್ಯಾಧ್ಯಕ್ಷರು ಮತ್ತು ಇತರ ನಾಯಕರೊಂದಿಗೆ ಚರ್ಚಿಸುತ್ತೇವೆ ಎಂದು ಕೇಂದ್ರ ಕೃಷಿ ಸಚಿವ ತೋಮರ್ ಹೇಳಿದ್ದಾರೆ.
ಶನಿವಾರ, ವಿಜಯ್ ರೂಪಾನಿ ಅವರು ತಮ್ಮ ರಾಜೀನಾಮೆಯನ್ನು ರಾಜ್ಯಪಾಲ ಆಚಾರ್ಯ ದೇವವ್ರತ್ ಅವರಿಗೆ ಸಲ್ಲಿಸಿದ್ದಾರೆ. ಡಿಸೆಂಬರ್ 2022 ರಲ್ಲಿ ಗುಜರಾತ್ ವಿಧಾನಸಭಾ ಚುನಾವಣೆ ನಡೆಯಲಿದ್ದು, ಅದಕ್ಕಿಂತ 15 ತಿಂಗಳ ಮೊದಲು ರೂಪಾನಿ ರಾಜೀನಾಮೆ ನೀಡಿದ್ದಾರೆ.
ವಿಜಯ್ ರೂಪಾನಿ ಉತ್ತರಾಧಿಕಾರಿ..ಯಾರೆಲ್ಲ ರೇಸ್ ನಲ್ಲಿ ?
ಮೂಲಗಳ ಪ್ರಕಾರ, ಗುಜರಾತ್ ಉಪಮುಖ್ಯಮಂತ್ರಿ ನಿತಿನ್ ಪಟೇಲ್, ಗುಜರಾತ್ ಮಾಜಿ ಮಂತ್ರಿ ಗೋರ್ಧನ್ ಜಡಾಫಿಯಾ, ಲಕ್ಷದ್ವೀಪದ ಆಡಳಿತಾಧಿಕಾರಿ ಪ್ರಫುಲ್ ಕೆ. ಪಟೇಲ್ , ಗುಜರಾತ್ ಬಿಜೆಪಿ ಮುಖ್ಯಸ್ಥ ಸಿ.ಆರ್.ಪಾಟೀಲ್ ಮತ್ತು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರ ಹೆಸರುಗಳು ವಿಜಯ್ ರೂಪಾನಿಯ ಉತ್ತರಾಧಿಕಾರಿಯಾಗುವವರ ಪಟ್ಟಿಯಲ್ಲಿದೆ . ಆದಾಗ್ಯೂ, ಸಿ.ಆರ್. ಪಾಟೀಲ ತಾವು ಗುಜರಾತಿನ ಮುಂದಿನ ಮುಖ್ಯಮಂತ್ರಿ ರೇಸ್‌ನಲ್ಲಿ ಇಲ್ಲ ಎಂದು ಶನಿವಾರ ಸ್ಪಷ್ಟಪಡಿಸಿದ್ದಾರೆ.
ವಿಜಯ್ ರೂಪಾನಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸ್ವಾಭಾವಿಕವಾಗಿ, ಹೊಸ ಮುಖ್ಯಮಂತ್ರಿಗಾಗಿ ಮಾಧ್ಯಮಗಳಲ್ಲಿ ನನ್ನ ಹೆಸರು ಸೇರಿದಂತೆ ಸಾಕಷ್ಟು ಹೆಸರುಗಳಿವೆ. ನಾನು ಅಂತಹ ಯಾವುದೇ ಸ್ಪರ್ಧೆಯಲ್ಲಿ ಇಲ್ಲ ಎಂದು ಅವರು ಹೇಳಿದರು.
ಆಗಸ್ಟ್ 2016 ರಲ್ಲಿ ಆನಂದಿಬೆನ್ ಪಟೇಲ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಂದರ್ಭದಲ್ಲಿ, ನಿತಿನ್ ಪಟೇಲ್ ಉತ್ತರಾಧಿಕಾರಿಯಾಗುತ್ತಾರೆ ಎಂಬ ಮಾತು ಕೇಳಿಬಂದಿತ್ತು. ಆಗ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ವಿಜಯ್ ರೂಪಾನಿ, ಆನಂದಿಬೆನ್ ಪಟೇಲ್ ಉತ್ತರಾಧಿಕಾರಿಯಾಗುವ ರೇಸ್ ನಲ್ಲಿ ಇಲ್ಲ ಎಂದು ಹೇಳಿದ್ದರು. ಆದರೆ ಕೊನೆಯ ಕ್ಷಣದ ನಿರ್ಧಾರದಲ್ಲಿ ವಿಜಯ್ ರೂಪಾನಿಯನ್ನು ಬಿಜೆಪಿ ಉನ್ನತ ಹುದ್ದೆಗೆ ಆಯ್ಕೆ ಮಾಡಿತು.
2016 ರ ಗುಜರಾತಿನಲ್ಲಿ ಅಧಿಕಾರ ಬದಲಾವಣೆಯೊಂದಿಗೆ ಪ್ರಸ್ತುತ ಪರಿಸ್ಥಿತಿಯು ಹೋಲುತ್ತದೆ, ವಿಧಾನಸಭೆ ಚುನಾವಣೆ ನಡೆಯುವ ಒಂದು ವರ್ಷದ ಮೊದಲು ಬಿಜೆಪಿ ಆನಂದಿಬೆನ್ ಪಟೇಲ್ ಅವರನ್ನು ಬದಲಾಯಿಸಿತ್ತು.ಈಗಲೂ ಚುನಾವಣೆಗೆ ಒಂದು ವರ್ಷಕ್ಕಿಂತ ಮೂರು ತಿಂಗಳು ಹೆಚ್ಚು ಕಾಲಾವಕಾಶ ಇರುವಾಗ ಮುಖ್ಯಮಂತ್ರಿ ಬದಲಾವಣೆ ಮಾಡಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ