ಒಡಿಸ್ಸಾದಲ್ಲಿ ಭಾರೀ ಮಳೆಗೆ ನದಿಗೆ ಉರುಳಿದ ಗೂಡ್ಸ್‌ ರೈಲು

ಭುವನೇಶ್ವರ : ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಗೂಡ್ಸ್‌ ರೈಲಿನ ಆರು ಬೋಗಿಗಳು ಹಳಿ ತಪ್ಪಿ ನದಿಗೆ ಉರುಳಿದ ಘಟನೆ ಒಡಿಶಾದಲ್ಲಿ ನಡೆದಿದೆ.
ಈಸ್ಟ್ ಕೋಸ್ಟ್ ರೈಲ್ವೇಸ್ ನ ಅಂಗುಲ್-ತಲ್ಚರ್ ರಸ್ತೆ ಮಾರ್ಗದಲ್ಲಿ ಚಲಿಸುತ್ತಿರುವ ಗೂಡ್ಸ್ ರೈಲಿನ ಕನಿಷ್ಠ ಆರು ಬೋಗಿಗಳು ಮಂಗಳವಾರ ಮುಂಜಾನೆ ಹಳಿ ತಪ್ಪಿ ನದಿಗೆ ಬಿದ್ದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗೋಧಿಯನ್ನು ಹೊತ್ತ ರೈಲಿನ ಆರು ಬೋಗಿಗಳು ನಸುಕಿನ 2:30ರ ಸುಮಾರಿಗೆ ನದಿಗೆ ಧುಮುಕಿವೆ. ಆದರೆ ಇಂಜಿನ್ ಟ್ರ್ಯಾಕ್‌ನಲ್ಲಿ ಇರುವುದರಿಂದ ಲೋಕೋ ಪೈಲಟ್ ಮತ್ತು ಇತರ ಸಿಬ್ಬಂದಿಗೆ ಪ್ರಾಣಾಪಯವಾಗಿಲ್ಲ, ಸುರಕ್ಷಿತವಾಗಿದ್ದಾರೆ ಎಂದು ಹೇಳಿದ್ದಾರೆ.
ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಒಡಿಸ್ಸಾದಲ್ಲಿ ಭಾರೀ ಮಳೆ ಬೀಳುತ್ತಿದೆ. ನಂದಿರಾ ನದಿಯ ಸೇತುವೆಯ ಮೇಲೆ ಫಿರೋಜ್‌ಪುರದಿಂದ ಖುರ್ದಾ ರಸ್ತೆಗೆ ಈ ಗುಡ್ಸ್‌ ರೈಲು ಹೋಗುತ್ತಿದ್ದಾಗ ಅಪಘಡ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೋಮವಾರ ತಾಲ್ಚರ್ 160 ಮಿಮೀ ಹಾಗೂ ಅಂಗುಲ್ (74 ಮಿಮೀ) ಮಳೆಯಾಗಿದೆ. ರೈಲು ದುರಂತದ ನಂತರ ಈ ಮಾರ್ಗದಲ್ಲಿನ ಎಲ್ಲಾ ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದೆ. ರೈಲು ಮಾರ್ಗವನ್ನು ತೆರವುಗೊಳಿಸುವ ಕಾರ್ಯವನ್ನು ಮಾಡಲಾಗುತ್ತಿದೆ.

ಪ್ರಮುಖ ಸುದ್ದಿ :-   ಉತ್ತಮ ಪ್ರತಿಕ್ರಿಯೆ, ಜನರು ದಾಖಲೆ ಸಂಖ್ಯೆಯಲ್ಲಿ ಎನ್‌ಡಿಎಗೆ ಮತ ಹಾಕಿದ್ದಾರೆ : ಲೋಕಸಭೆ ಚುನಾವಣೆ 1ನೇ ಹಂತದ ಮತದಾನದ ಬಗ್ಗೆ ಪ್ರಧಾನಿ ಮೋದಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement