ಕನ್ನಡದ ಹಿರಿಯ ಸಾಹಿತಿ ಡಾ. ಸಂಗಮೇಶ ಹಂಡಿಗಿ ಆರೋಗ್ಯದಲ್ಲಿ ಚೇತರಿಕೆ

posted in: ರಾಜ್ಯ | 0

ಹುಬ್ಬಳ್ಳಿ: ವಚನಶ್ರೀ ಎಂದೇ ಖ್ಯಾತರಾದ ಹಿರಿಯ ಸಾಹಿತಿ ಡಾ. ಸಂಗಮೇಶ ಹಂಡಿಗಿ (84) ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ಆದರೆ ಈಗ ಆರೋಗ್ಯದಲ್ಲಿ ಚೇತರಿಕೆಯಾಗಿದೆ.

ಕನ್ನಡ ಸಾಹಿತ್ಯ ಲೋಕಕ್ಕೆ 46 ಗ್ರಂಥಗಳನ್ನು ನೀಡಿರುವ ಅವರು ವಿಮರ್ಶಾತ್ಮಕ ಪ್ರಬಂಧಗಳಾದ ಭಕ್ತಿ, ಭಕ್ತಿಮಾರ್ಗ, ಜನಪದ ಸಾಹಿತ್ಯ ಮತ್ತು ದೈವಿ ಶ್ರದ್ಧೆ, ದಶಧರ್ಮ, ಸಂಸ್ಕೃತಿ ಸೌರಭ, ನುಡಿ-ಮಿಡಿ, ಶರಣಾನುಭವ, ವಚನಸ್ತವನ, ವಚನಮಯೂರ, ಕಾವ್ಯಸಂಗಮ, ಕಾವ್ಯಗೌರವ, ನೆನೆದವರ ಮನದಲ್ಲಿ, ಸೇರಿದಂತೆ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ.
ಕನ್ನಡ ನಾಡಿನ ಪ್ರಮುಖ ಪತ್ರಿಕೆಗಳಿಗೆ ವರದಿಗಾರ, ಮಾಮಿಡಿ ಪತ್ರಿಕೆಯ ಸಂಸ್ಥಾಪಕ ಸಂಪಾದಕರಾಗಿ ಪತ್ರಿಕಾರಂಗದಲ್ಲೂ ಕಾರ್ಯನಿರ್ವಹಿಸಿರುವ ಅವರು, ಅವರು 2006ರಲ್ಲಿ ಸಕಲೇಶಪುರದಲ್ಲಿ ನಡೆದ ಅಖಿಲ ಕರ್ನಾಟಕ 2ನೇ ವಚನ ಸಾಹಿತ್ಯ ಸಮ್ಮೇಳನದಲ್ಲಿ ವಚನಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ನವಲಗುಂದದ ಶ್ರೀ ಶಂಕರ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ, ಕನ್ನಡ ವಿಭಾಗ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ, ನಿವೃತ್ತರಾದ ಅವರು ನಂತರದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಕೆಲಕಾಲ ಸಂದರ್ಶಕ ಪ್ರಾಧ್ಯಾಪಕರಾಗಿ ಪಿಎಚ್.ಡಿ ಅಧ್ಯಯನ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ.

(ಇದಕ್ಕೂ ಮೊದಲು ಕಣ್ತಪ್ಪಿನಿಂದ  ನಿಧನ  ಎಂದು ತಪ್ಪಾಗಿ ಪ್ರಕಟಿಸಲಾಗಿತ್ತು. ಅದಕ್ಕಾಗಿ ತೀವ್ರವಾಗಿ ವಿಷಾದಿಸುತ್ತೇವೆ ಹಾಗೂ ತಪ್ಪಿಗಾಗಿ  ಕ್ಷಮೆ ಕೋರುತ್ತೇವೆ.-ಸಂಪಾದಕ)

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ