ಕೋವಿಡ್ ಸಕ್ರಿಯ ಪ್ರಕರಣ: ಮೊದಲ ಬಾರಿಗೆ 4ನೇ ಸ್ಥಾನಕ್ಕೆ ಕುಸಿದ ಕರ್ನಾಟಕ

posted in: ರಾಜ್ಯ | 0

ನವದೆಹಲಿ: ಕೋವಿಡ್ ಸಾಂಕ್ರಾಮಿಕ ನಿರ್ವಹಣೆಯಲ್ಲಿ ಹಿಂದೆ ಬಿದ್ದಿದ್ದ ಕರ್ನಾಟಕದಲ್ಲಿ ಈಗ ಸುಧಾರಣೆ ಕಂಡು ಬಂದಿದೆ. ಸಕ್ರಿಯ ಪ್ರಕರಣಗಳಲ್ಲಿ ಮೂರನೇ ಸ್ಥಾನದಲ್ಲಿದ್ದ ಕರ್ನಾಟಕ ಇದೀಗ 4ನೇ ಸ್ಥಾನಕ್ಕೆ ಕುಸಿದಿದೆ.
4ನೇ ಸ್ಥಾನದಲ್ಲಿದ್ದ ತಮಿಳುನಾಡು ಇದೀಗ ಮೂರನೇ ಸ್ಥಾನಕ್ಕೆ ಏರಿದೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು, ಕರ್ನಾಟಕದಲ್ಲಿ ಹೊಸ ಸೋಂಕು ಪ್ರಕರಣಗಳು ಕಡಿಮೆಯಾಗಿರುತ್ತಿರುವುದರಿಂದ 3ರಿಂದ 4ನೇ ಸ್ಥಾನಕ್ಕೆ ಕುಸಿದಿದೆ ಎಂದು ತಿಳಿಸಲಾಗಿದೆ.
ಅತೀ ಹೆಚ್ಚು ಸಕ್ರಿಯ ಪ್ರಕರಣಗಳನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಕೇರಳ ಅಗ್ರ ಸ್ಥಾನದಲ್ಲಿದ್ದು, ಕೇರಳದಲ್ಲಿ 1, 99, 428 ಸಕ್ರಿಯ ಪ್ರಕರಣಗಳಿವೆ. 2ನೇ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ 53, 220 ಸಕ್ರಿಯ ಪ್ರಕರಣಗಳಿವೆ. 16, 549 ಸಕ್ರಿಯ ಪ್ರಕರಣಗನ್ನು ಹೊಂದಿರುವ ತಮಿಳುನಾಡು ಮೂರು ಮತ್ತು 15,782 ಸಕ್ರಿಯ ಪ್ರಕರಣಗಳಿರುವ ಕರ್ನಾಟಕ 4ನೇ ಸ್ಥಾನದಲ್ಲಿವೆ.
14, 412ಸಕ್ರಿಯ ಪ್ರಕರಣಗಳನ್ನು ಹೊಂದಿರುವ ಆಂಧ್ರಪ್ರದೇಶ 5ನೇ ಸ್ಥಾನ ಮತ್ತು 13,525 ಸಕ್ರಿಯ ಪ್ರಕರಣಗಳನ್ನು ಹೊಂದಿರುವ ಮಿಜೋರಂ 6ನೇ ಸ್ಥಾನದಲ್ಲಿವೆ. ಕೋವಿಡ್ 2ನೇ ಅಲೆ ವೇಳೆ ಅಗ್ರಸ್ಥಾನದಲ್ಲಿದ್ದ ದೆಹಲಿ ಬರೊಬ್ಬರಿ 21ನೇ ಸ್ಥಾನಕ್ಕೆ ಕುಸಿದಿದೆ. ದೆಹಲಿಯಲ್ಲಿ ಕೇವಲ 400 ಸಕ್ರಿಯ ಪ್ರಕರಣಗಳಿವೆ. ಲಕ್ಷದ್ವೀಪ ಕೊನೆಯ ಸ್ಥಾನದಲ್ಲಿದ್ದು ಇಲ್ಲಿ ಕೇವಲ 4 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ