ಗದಗ: ಕಲಕೇರಿ ಗ್ರಾಮದಲ್ಲಿ ಭೂಮಿ ಕಂಪಿಸಿದ ಅನುಭವ

posted in: ರಾಜ್ಯ | 0

ಗದಗ: ಜಿಲ್ಲೆಯ ಮುಂಡರಗಿ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಮಂಗಳವಾರ ರಾತ್ರಿ 8:25 ರ ಸುಮಾರಿಗೆ ಲಘು ಭೂಕಂಪನವಾದ ಅನುಭವವಾಗಿದೆ.
ಸುಮಾರು 8ರಿಂದ 10 ಸೆಕೆಂಡ್ ಭೂಮಿ ಕಂಪಿಸಿದ ಅನುಭವವಾಗಿದ್ದು, ಕ್ಷಣಕಾಲ ಶಬ್ದ ಕೇಳಿಸಿದ್ದು, ಬಳಿಕ ಭೂಮಿ ಕಂಪಿಸಿದ ಅನುಭವವಾಗಿದೆ.
ಮಣ್ಣಿನ ಮನೆಗಳ ಮೇಲ್ಛಾವಣಿಯಿಂದ ಮಣ್ಣು ಉದುರಿದೆ. ಇದರಿಂದ ಆತಂಕಗೊಂಡ ಜನರು ಮನೆಯಿಂದ ಹೊರಗೆ ಓಡಿ ಬಂದಿದರು. ಯಾವುದೇ ಹಾನಿ ಸಂಭವಿಸಿದ ವರದಿಯಾಗಿಲ್ಲ.
ಮನೆಯ ಪಾತ್ರೆ ಕೆಲವು ವಸ್ತುಗಳು ಕೆಳಗೆ ಬಿದ್ದಿವೆ. ಜನತೆ ಮೊದಲು ಗಣಪತಿ ವಿಸರ್ಜನೆಯ ಪಟಾಕಿಯ ಸದ್ದು ಎಂದು ತಿಳಿದಿದ್ದರು. ಆದರೆ ಗ್ರಾಮದ ಬಹುತೇಕ ಜನರು ಅನುಭವ ಹಂಚಿಕೊಂಡಾಗಲೆ ಹಲವರಿಗೆ ಇದು ಭೂಕಂಪನ ಎಂದು ತಿಳಿದಿದೆ. ಗ್ರಾಮಸ್ಥರು ಭಯ ಭೀತಗೊಂಡಿದ್ದಾರೆ.
ಕಪ್ಪತ್ತಗುಡ್ಡದ ಸೆರಗಿನಿಲ್ಲಿರುವ ಈ ಗ್ರಾಮಗಳಲ್ಲಿ ಈ ಹಿಂದೆ ಯಾವತ್ತೂ ಇಂತಹ ಅನುಭವಗಳಾಗಿರಲಿಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ