ಆಟೋ, ಡ್ರೋನ್ ವಲಯಗಳಿಗೆ 5 ವರ್ಷಗಳ ವರೆಗೆ 26,058 ಕೋಟಿ ರೂ.ಗಳ ಪಿಎಲ್‌ಐ ಯೋಜನೆಗೆ ಕ್ಯಾಬಿನೆಟ್ ಅನುಮೋದನೆ

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಇಂದು (ಬುಧವಾರ) ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಆಟೋಮೊಬೈಲ್ ಕ್ಷೇತ್ರಕ್ಕೆ 26,058 ಕೋಟಿ ರೂ.ಗಳ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (PLI) ಯೋಜನೆಯನ್ನು ಅನುಮೋದಿಸಲಾಗಿದೆ. ಡ್ರೋನ್ ಉದ್ಯಮಕ್ಕಾಗಿ 120 ಕೋಟಿ ರೂ.ಗಳ ಪಿಎಲ್‌ಐ ಯೋಜನೆಗೆ ಕ್ಯಾಬಿನೆಟ್ ಅನುಮೋದನೆ ನೀಡಿದೆ.
ಕೇಂದ್ರ ಸಚಿವರಾದ ಅನುರಾಗ್ ಠಾಕೂರ್ ಮತ್ತು ಅಶ್ವಿನಿ ವೈಷ್ಣವ್ ಮಾಧ್ಯಮಗೋಷ್ಠಿಯಲ್ಲಿ ಇದನ್ನು ಪ್ರಕಟಿಸಿದ್ದಾರೆ. ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ ಭಾರತದ ಅಂಗವಾಗಿ ಸರ್ಕಾರದ ಉಪಕ್ರಮಗಳನ್ನು ಉತ್ತೇಜಿಸಲು, PLI ಯೋಜನೆಗಳನ್ನು ಪರಿಚಯಿಸಲಾಗಿದೆ ಎಂದು ಠಾಕೂರ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ ಹೇಳಿದರು. ಪಿಎಲ್‌ಐ ಯೋಜನೆ ಈಗಾಗಲೇ 9 ವಲಯಗಳಲ್ಲಿ ಇದೆ ಮತ್ತು ಆಟೋ ವಲಯವು ಪಟ್ಟಿಗೆ ಇತ್ತೀಚಿನ ಸೇರ್ಪಡೆಯಾಗಲಿದೆ ಎಂದು ಸಚಿವರು ಹೇಳಿದರು.
ಇದು ಭಾರತದ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. 5 ವರ್ಷಗಳವರೆಗೆ ಒಟ್ಟು 26,058 ಕೋಟಿ ರೂ.ಗಳ ಪ್ರೋತ್ಸಾಹವನ್ನು ಕ್ಯಾಬಿನೆಟ್ ಅನುಮೋದಿಸಿದೆ, ಅದರಲ್ಲಿ 25,938 ಕೋಟಿ ಆಟೋ ಮತ್ತು ಘಟಕ ಉದ್ಯಮಕ್ಕೆ ಮತ್ತು ಉಳಿದ 120 ಕೋಟಿ ಡ್ರೋನ್ ಉದ್ಯಮಕ್ಕೆ ಎಂದು ಕೇಂದ್ರ ಸಚಿವ ಠಾಕೂರ್ ಹೇಳಿದರು.
ಭಾರತದ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಆಟೋ ಇಂಡಸ್ಟ್ರಿ ಮತ್ತು ಡ್ರೋನ್ ಇಂಡಸ್ಟ್ರಿಗಾಗಿ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (Production Linked Incentive) ಯೋಜನೆಯನ್ನು ಸರ್ಕಾರ ಅನುಮೋದಿಸಿದೆ. PLI ಆಟೋ ಸ್ಕೀಮ್ ಭಾರತದಲ್ಲಿ ಅಡ್ವಾನ್ಸ್ಡ್ ಆಟೋಮೋಟಿವ್ ಟೆಕ್ನಾಲಜೀಸ್ ಜಾಗತಿಕ ಪೂರೈಕೆ ಸರಪಳಿಯ ಹೊರಹೊಮ್ಮುವಿಕೆಯನ್ನು ಉತ್ತೇಜಿಸುತ್ತದೆ. ಇದು 7.6 ಲಕ್ಷಕ್ಕೂ ಅಧಿಕ ಜನರ ಹೆಚ್ಚುವರಿ ಉದ್ಯೋಗವನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ ಎಂದು ಠಾಕೂರ್ ಹೇಳಿದರು.
ಆಟೋ ವಲಯದ ಪಿಎಲ್‌ಐ ಯೋಜನೆಯು ಐದು ವರ್ಷಗಳಲ್ಲಿ 42,500 ಕೋಟಿ ರೂ.ಗಳಷ್ಟು ಹೊಸ ಹೂಡಿಕೆಯನ್ನು ಮತ್ತು 2.3 ಲಕ್ಷ ಕೋಟಿಗಳಷ್ಟು ಹೆಚ್ಚಿನ ಉತ್ಪಾದನೆಯನ್ನು ತರುತ್ತದೆ. ಡ್ರೋನ್ಸ್‌ಗಾಗಿ ಪಿಎಲ್‌ಐ ಸ್ಕೀಮ್ ಮೂರು ವರ್ಷಗಳಲ್ಲಿ 5,000 ಕೋಟಿ ರೂಪಾಯಿಗಳ ಹೊಸ ಹೂಡಿಕೆಯನ್ನು ಮತ್ತು 1500 ಕೋಟಿಗೂ ಅಧಿಕ ಉತ್ಪಾದನೆಯನ್ನು ತರುತ್ತದೆ. ಆಟೋಮೋಟಿವ್ ಸೆಕ್ಟರ್‌ಗಾಗಿ ಪಿಎಲ್‌ಐ ಸ್ಕೀಮ್ ಜೊತೆಗೆ ಈಗಾಗಲೇ ಮುಂದುವರಿದ ಕೆಮಿಸ್ಟ್ರಿ ಸೆಲ್‌ಗಾಗಿ ಪಿಎಲ್‌ಐ ( 18,100 ಕೋಟಿ ರೂ.ಗಳು) ಮತ್ತು ಎಲೆಕ್ಟ್ರಿಕ್ ವಾಹನಗಳ ತಯಾರಿಕೆ (ಎಫ್‌ಎಮ್‌ಇ) ಸ್ಕೀಮ್ ( 10,000 ಕೋಟಿ ರೂ.ಗಳು) ವಿದ್ಯುತ್ ವಾಹನಗಳ ತಯಾರಿಕೆಗೆ ದೊಡ್ಡ ಉತ್ತೇಜನ ನೀಡುತ್ತದೆ ಎಂದು ಅವರು ಹೇಳಿದರು.
ಪರಿಸರವನ್ನು ಸ್ವಚ್ಛಗೊಳಿಸುವ, ಎಲೆಕ್ಟ್ರಿಕ್ ವಾಹನಗಳು ಮತ್ತು ಹೈಡ್ರೋಜನ್ ಫ್ಯೂಯಲ್ ಸೆಲ್ ವಾಹನಗಳತ್ತ ಭಾರತವು ಹೋಗುವಂತೆ ಮಾಡುತ್ತದೆ” ಎಂದು ಠಾಕೂರ್ ಹೇಳಿದ್ದಾರೆ.
ಆಟೋ ವಲಯದ ಪಿಎಲ್‌ಐ ಯೋಜನೆಯು ಉನ್ನತ ಮೌಲ್ಯದ ಸುಧಾರಿತ ಆಟೋಮೋಟಿವ್ ತಂತ್ರಜ್ಞಾನ ವಾಹನಗಳು ಮತ್ತು ಉತ್ಪನ್ನಗಳನ್ನು ಪ್ರೋತ್ಸಾಹಿಸುತ್ತದೆ. ಇದು ಉನ್ನತ ತಂತ್ರಜ್ಞಾನ, ಹೆಚ್ಚು ಪರಿಣಾಮಕಾರಿ ಮತ್ತು ಹಸಿರು ಆಟೋಮೋಟಿವ್ ತಯಾರಿಕೆಯಲ್ಲಿ ಹೊಸ ಯುಗಕ್ಕೆ ನಾಂದಿ ಹಾಡಲಿದೆ. ಆಟೋಮೊಬೈಲ್ ಇಂಡಸ್ಟ್ರಿ ಮತ್ತು ಡ್ರೋನ್ ಇಂಡಸ್ಟ್ರಿಗಾಗಿ ಪಿಎಲ್‌ಐ ಸ್ಕೀಮ್ 13 ವಲಯಗಳಿಗೆ ಪಿಎಲ್‌ಐ ಯೋಜನೆಗಳ ಒಟ್ಟಾರೆ ಘೋಷಣೆಯ ಭಾಗವಾಗಿದೆ. ಈ ಹಿಂದೆ ಕೇಂದ್ರ ಬಜೆಟ್ 2021-22ರ ಅವಧಿಯಲ್ಲಿ 13 ವಲಯಗಳಿಗೆ 1.97 ಲಕ್ಷ ಕೋಟಿ ರೂ.ಗಳ PLI ಯೋಜನೆಗಳ ಘೋಷಣೆ ಮಾಡಿದ್ದು, ಭಾರತದಲ್ಲಿ ಕನಿಷ್ಠ ಹೆಚ್ಚುವರಿ ಉತ್ಪಾದನೆಯು 5 ವರ್ಷಗಳಲ್ಲಿ ಸುಮಾರು 37.5 ಲಕ್ಷ ಕೋಟಿಗಳಷ್ಟಿರುತ್ತದೆ ಮತ್ತು 5 ವರ್ಷಗಳಲ್ಲಿ ಕನಿಷ್ಠ ನಿರೀಕ್ಷಿತ ಹೆಚ್ಚುವರಿ ಉದ್ಯೋಗವು ಸುಮಾರು 1 ಕೋಟಿಯಾಗಿದೆ ಎಂದು ಅಂದಾಜಿಸಲಾಗಿದೆ.
ಆಟೋ ಸೆಕ್ಟರ್‌ಗಾಗಿ ಪಿಎಲ್‌ಐ ಯೋಜನೆ ಪ್ರೋತ್ಸಾಹಕವು ಸುಧಾರಿತ ಆಟೋಮೋಟಿವ್ ತಂತ್ರಜ್ಞಾನ ಉತ್ಪನ್ನಗಳ ಸ್ಥಳೀಯ ಜಾಗತಿಕ ಪೂರೈಕೆ ಸರಪಳಿಗೆ ಹೊಸ ಹೂಡಿಕೆ ಮಾಡಲು ಉದ್ಯಮವನ್ನು ಉತ್ತೇಜಿಸುತ್ತದೆ. ಐದು ವರ್ಷಗಳ ಅವಧಿಯಲ್ಲಿ, ಆಟೋಮೊಬೈಲ್ ಮತ್ತು ಆಟೋ ಕಾಂಪೊನೆಂಟ್ಸ್ ಇಂಡಸ್ಟ್ರಿಗಾಗಿ PLI ಸ್ಕೀಮ್ 42,500 ಕೋಟಿ ರೂ.ಗಳಷ್ಟು ಹೊಸ ಹೂಡಿಕೆಗೆ ಕಾರಣವಾಗುತ್ತದೆ, 2.3 ಲಕ್ಷ ಕೋಟಿ ರೂ.ಗಳಿಗೂ ಅಧಿಕ ಉತ್ಪಾದನೆ ಮತ್ತು 7.5 ಲಕ್ಷ ಉದ್ಯೋಗಗಳ ಹೆಚ್ಚುವರಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಮುಂದೆ, ಇದು ಜಾಗತಿಕ ವಾಹನ ವ್ಯಾಪಾರದಲ್ಲಿ ಭಾರತದ ಪಾಲನ್ನು ಹೆಚ್ಚಿಸುತ್ತದೆ. ಎಂದು ಅಂದಾಜಿಸಲಾಗಿದೆ. .
ಆಟೋ ಸೆಕ್ಟರ್‌ಗಾಗಿ PLI ಸ್ಕೀಮ್ ಪ್ರಸ್ತುತ ಆಟೋಮೋಟಿವ್ ಕಂಪನಿಗಳಿಗೆ ಮತ್ತು ಪ್ರಸ್ತುತ ಆಟೋಮೊಬೈಲ್ ಅಥವಾ ಆಟೋ ಕಾಂಪೊನೆಂಟ್ ಉತ್ಪಾದನಾ ವ್ಯವಹಾರದಲ್ಲಿ ಇಲ್ಲದ ಹೊಸ ಹೂಡಿಕೆದಾರರಿಗೆ ಮುಕ್ತವಾಗಿದೆ. ಈ ಯೋಜನೆಯು ಚಾಂಪಿಯನ್ ಒಇಎಂ ಪ್ರೋತ್ಸಾಹಕ ಯೋಜನೆ ಮತ್ತು ಘಟಕ ಚಾಂಪಿಯನ್ ಪ್ರೋತ್ಸಾಹಕ ಯೋಜನೆ ಎಂಬ ಎರಡು ಘಟಕಗಳನ್ನು ಹೊಂದಿದೆ. ಚಾಂಪಿಯನ್ ಒಇಎಂ ಇನ್ಸೆಂಟಿವ್ ಸ್ಕೀಮ್ ಒಂದು ‘ಸೇಲ್ಸ್ ವ್ಯಾಲ್ಯೂ ಲಿಂಕ್ಡ್’ ಸ್ಕೀಮ್ ಆಗಿದೆ, ಇದು ಬ್ಯಾಟರಿ ಎಲೆಕ್ಟ್ರಿಕ್ ವಾಹನಗಳು ಮತ್ತು ಎಲ್ಲಾ ವಿಭಾಗಗಳ ಹೈಡ್ರೋಜನ್ ಫ್ಯೂಯಲ್ ಸೆಲ್ ವಾಹನಗಳಿಗೆ ಅನ್ವಯಿಸುತ್ತದೆ. ಕಾಂಪೊನೆಂಟ್ ಚಾಂಪಿಯನ್ ಇನ್ಸೆಂಟಿವ್ ಸ್ಕೀಮ್ ಒಂದು ‘ಸೇಲ್ಸ್ ವ್ಯಾಲ್ಯೂ ಲಿಂಕ್ಡ್’ ಸ್ಕೀಮ್ ಆಗಿದೆ, ಇದು ವಾಹನಗಳ ಸುಧಾರಿತ ಆಟೋಮೋಟಿವ್ ಟೆಕ್ನಾಲಜಿ ಘಟಕಗಳು, ಸಂಪೂರ್ಣ ನಾಕ್ ಡೌನ್ (ಸಿಕೆಡಿ)/ ಸೆಮಿ ನಾಕ್ಡ್ ಡೌನ್ (ಎಸ್‌ಕೆಡಿ) ಕಿಟ್‌ಗಳು, 2-ವೀಲರ್‌ಗಳ ವಾಹನ ಸಮುಚ್ಚಯಗಳು, 3 ಚಕ್ರಗಳು, ಪ್ರಯಾಣಿಕರು ವಾಹನಗಳು, ವಾಣಿಜ್ಯ ವಾಹನಗಳು ಮತ್ತು ಟ್ರಾಕ್ಟರುಗಳು ಇತ್ಯಾದಿ.

ಪ್ರಮುಖ ಸುದ್ದಿ :-   ತಾಯಿಯ ಸಂಪತ್ತು ಉಳಿಸಿಕೊಳ್ಳಲು ಪಿತ್ರಾರ್ಜಿತ ತೆರಿಗೆ ಕಾನೂನು ರದ್ದುಗೊಳಿಸಿದ ರಾಜೀವ ಗಾಂಧಿ : ಪ್ರಧಾನಿ ಮೋದಿ ಆರೋಪ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement