ತಲೆಮರೆಸಿಕೊಂಡಿದ್ದ ಹೈದರಾಬಾದ್ ಅತ್ಯಾಚಾರ ಆರೋಪಿ ರೈಲ್ವೆ ಹಳಿ ಮೇಲೆ ಶವವಾಗಿ ಪತ್ತೆ

ಹೈದರಾಬಾದ್‌: ಹೈದರಾಬಾದ್ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಯ ಶವ ವಾರಂಗಲ್‌ನ ರೈಲ್ವೆ ಹಳಿಯ ಮೇಲೆ ಪತ್ತೆಯಾಗಿದೆ..
ಇದಕ್ಕೂ ಮುನ್ನ ಮಂಗಳವಾರ, ತೆಲಂಗಾಣ ಕಾರ್ಮಿಕ ಸಚಿವ ಮಲ್ಲಾ ರೆಡ್ಡಿ ಅವರು ಹೈದರಾಬಾದ್ ಅತ್ಯಚಾರ ಪ್ರಕರಣದ ಆರೋಪಿಗಳನ್ನು “ಎನ್ಕೌಂಟರ್ ನಲ್ಲಿ ಕೊಲ್ಲಲಾಗುವುದು” ಎಂದು ಹೇಳಿದ್ದರು ಹಾಗೂ ಆರೋಪಿ ಹಿಡಿಯಲು 15 ಪೊಲೀಸ್ ತಂಡಗಳನ್ನು ರಚಿಸಿ ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶಕ್ಕೆ ಕಳುಹಿಸಲಾಗಿದೆ.
ಸಿಂಗರೇಣಿ ಕಾಲೋನಿಯಲ್ಲಿ 6 ವರ್ಷದ ಬಾಲಕಿ ಅತ್ಯಾಚಾರಕ್ಕೊಳಗಾದ ಮತ್ತು ಕೊಲೆಯಾದ ಒಂದು ವಾರದ ನಂತರ ಗುರುವಾರ ಬೆಳಿಗ್ಗೆ ತೆಲಂಗಾಣ ಡಿಜಿಪಿ ತಲೆಮರೆಸಿಕೊಂಡಿದ್ದ ಆರೋಪಿ ಸುಳಿವು ನೀಡಿದವರಿಗೆ ಹತ್ತು ಲಕ್ಷ ರೂ.ಗಳ ಬಹುಮಾನ ಘೋಷಿಸಿದ್ದರು. ಈ ಪ್ರಕರಣವು ಸ್ಥಳೀಯರಲ್ಲಿ ಭಾರೀ ಆಕ್ರೋಶವನ್ನು ಉಂಟುಮಾಡಿತ್ತು.
ಅತ್ಯಾಚಾರ ಆರೋಪಿಯ ಶವವು ಗುರುವಾರ ವಾರಂಗಲ್‌ನ ಘನಪುರ ನಿಲ್ದಾಣದ ಬಳಿ ರೈಲ್ವೆ ಹಳಿಗಳಲ್ಲಿ ಪತ್ತೆಯಾಗಿದೆ. ಕೂಡ, “ಮೃತ ದೇಹದ ಮೇಲೆ ಗುರುತುಗಳ ಪರಿಶೀಲನೆಯ ನಂತರ ಇದನ್ನು ಪ್ರಕಟಿಸಲಾಗಿದೆ.
ಕೈಯಲ್ಲಿ ಹಚ್ಚೆ ಹಾಕಿಸಿಕೊಂಡ ಆರೋಪಿಯನ್ನು ಪೊಲೀಸರು ಗುರುತಿಸಿದ್ದಾರೆ. “ಅದೇ ಆರೋಪಿಯಂತೆ ಕಾಣುತ್ತದೆ. ಡಿಎನ್‌ಎ ಮತ್ತು ಇತರ ವೈಜ್ಞಾನಿಕ ಪರಿಶೀಲನೆಯ ನಂತರವೇ ಇದು ದೃಢೀಕರಣವಾಗಲಿದೆ.
ಸೆಪ್ಟೆಂಬರ್ 9 ರಂದು ಸೈದಾಬಾದ್ ಪ್ರದೇಶದಲ್ಲಿ ಬಾಲಕಿಯನ್ನು ಆಕೆಯ ಪಕ್ಕದ ನೆರೆಹೊರೆಯ ವ್ಯಕ್ತಿ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

advertisement

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಇದೀಗ ಗದಗದಲ್ಲಿ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಓದಿರಿ :-   ಗೆಹ್ಲೋಟ್‌ ಬಳಿಕ ಸೋನಿಯಾ ಭೇಟಿ ಮಾಡಿದ ಸಚಿನ್‌ ಪೈಲಟ್‌: ಕಾಂಗ್ರೆಸ್‌ ತೊರೆಯಲ್ಲ ಎಂದು ಭರವಸೆ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ

advertisement