ಅತಿರೇಕದ ಘಟನೆ…ಚಡ್ಡಿ ಧರಿಸಿ ಬಂದ 19 ವರ್ಷದ ಹುಡುಗಿಯ ಕಾಲಿಗೆ ಕರ್ಟನ್‌ ಬಟ್ಟೆ ಸುತ್ತಿಸಿ ಪರೀಕ್ಷೆ ಬರೆಸಿದರು..!

ತೇಜ್ಪುರ(ಅಸ್ಸಾಂ): ಪ್ರವೇಶ ಪರೀಕ್ಷೆ ಬರೆಯಲು ಚಡ್ಡಿಧರಿಸಿ ಬಂದ 19 ವರ್ಷದ ವಿದ್ಯಾರ್ಥಿನಿಗೆ ಆಕೆಯ ಕಾಲುಗಳಿಗೆ ಪರದೆ (curtain) ಬಟ್ಟೆ ಸುತ್ತಿ ಪರೀಕ್ಷೆ ಬರೆಯುವಂತೆ ಮಾಡಿದ ಘಟನೆ ಅಸ್ಸಾಂನ ತೇಜ್ ಪುರ ಪಟ್ಟಣದಲ್ಲಿ ನಡೆದ ಬಗ್ಗೆ ವರದಿಯಾಗಿದೆ.

ಅಸ್ಸಾಂನಾದ್ಯಂತ ಜನರನ್ನು ದಿಗ್ಭ್ರಮೆಗೊಳಿಸಿದ ಒಂದು ಅತಿರೇಕದ ಘಟನೆಯಲ್ಲಿ, 19 ವರ್ಷದ ಹುಡುಗಿಗೆ ಶಾರ್ಟ್ಸ್ ಧರಿಸಿದ್ದಕ್ಕಾಗಿ ಪರೀಕ್ಷಾ ಕೇಂದ್ರದ ಅಧಿಕಾರಿಗಳು ಪ್ರವೇಶ ಪರೀಕ್ಷೆಗೆ ಕುಳಿತುಕೊಳ್ಳಲು ಅನುಮತಿಸಲಿಲ್ಲ.
ಈ ವರ್ಷದ ಕೃಷಿ ಪ್ರವೇಶ ಪರೀಕ್ಷೆಯನ್ನು ಗಿರಿಜಾನಂದ ಚೌಧರಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಮತ್ತು ಟೆಕ್ನಾಲಜಿಯಲ್ಲಿ ನೀಡಲು ಹೋದಾಗ ಜುಬ್ಲಿ ತಮೂಲಿ ಚಡ್ಡಿ ಧರಿಸಿದ್ದರು ( half-pants) ಧರಿಸಿದ್ದರು.

ಆಕೆ ತನ್ನ ತಂದೆಯೊಂದಿಗೆ ತಮ್ಮ ಊರಾದ ಬಿಸ್ವನಾಥ ಚರಿಯಾಲಿಯಿಂದ 70 ಕಿಮೀ ದೂರದ ತೇಜಪುರಕ್ಕೆ ಪ್ರಯಾಣಿಸಿ ಬೆಳಿಗ್ಗೆ ಪರೀಕ್ಷೆಗೆ ಸರಿಯಾದ ಸಮಯಕ್ಕೆ ಹಾಜರಾಗಿದ್ದಾರೆ. ಜೂಬ್ಲಿಯ ಪ್ರಕಾರ, ರಿಜಾನಂದ ಚೌಧರಿ ಇನ್ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್ (ಜಿಐಪಿಎಸ್). ಪರೀಕ್ಷಾ ಸ್ಥಳವನ್ನು ಪ್ರವೇಶಿಸಿಸಲು ಅವಳಿಗೆ ಯಾವುದೇ ತೊಂದರೆಯಾಗಲಿಲ್ಲ, ಆದರೆ ಗಿಪರೀಕ್ಷಾ ಹಾಲ್ ನಲ್ಲಿ ತೊಂದರೆ ಶುರುವಾಗಿದೆ

ಸೆಕ್ಯುರಿಟಿ ಗಾರ್ಡ್‌ಗಳು ನನ್ನನ್ನು ಆವರಣಕ್ಕೆ ಪ್ರವೇಶಿಸಲು ಅನುಮತಿಸಿದರು, ಆದರೆ ನನ್ನನ್ನು ಪರೀಕ್ಷಾ ಹಾಲ್‌ನಲ್ಲಿ ಇವಿಜಿಲೇಟರ್ ತಡೆದರು. ಅವರು ನನಗೆ ಶಾರ್ಟ್ಸ್ (ಚಡ್ಡಿ) ಧರಿಸಿ ಪ್ರವೇಶಿಸಲು ಅವಕಾಶ ನೀಡುವುದಿಲ್ಲ ಎಂದು ಹೇಳಿದರು ಎಂದು ದೂರವಾಣಿಯಲ್ಲಿ ತಿಳಿಸಿದರು ಎಂದು ಇಂಡಿಯನ್ ಎಕ್ಸ್‌ಪ್ರೆಸ್‌ ಅವಳ ಹೇಳಿಕೆ ಉಲ್ಲೇಖಿಸಿ ವರದಿ ಮಾಡಿದೆ.
ಜುಬ್ಲಿ ಪ್ರಕಾರ, ಪ್ರವೇಶ ಪತ್ರದಲ್ಲಿ ಯಾವುದೇ ಡ್ರೆಸ್ ಕೋಡ್ ಬಗ್ಗೆ ಉಲ್ಲೇಖಿಸಿಲ್ಲ. “ಕೆಲವು ದಿನಗಳ ಹಿಂದೆ, ನಾನು ಅದೇ ಊರಿನಲ್ಲಿ ನೀಟ್ ಪರೀಕ್ಷೆಗೆ ಹಾಜರಾಗಿದ್ದೆ, ಆಗಲೂ ಅದೇ ಉಡುಪನ್ನು ಧರಿಸಿದ್ದೆ – ಆಗ ಏನೂ ಆಗಲಿಲ್ಲ. AAU ಶಾರ್ಟ್ಸ್‌ ಬಗ್ಗೆ ಯಾವುದೇ ನಿಯಮಗಳನ್ನು ಹೊಂದಿಲ್ಲ, ಅಥವಾ ಪ್ರವೇಶ ಪತ್ರದಲ್ಲಿ ಏನನ್ನೂ ಉಲ್ಲೇಖಿಸಿಲ್ಲ. ಹೀಗಾಗಿ ನಾನು ಈ ಬಗ್ಗೆ ಹೇಗೆ ತಿಳಿಯಬೇಕು ಎಂದು ಅವರು ಪ್ರಶ್ನಿಸಿದ್ದಾರೆ.
ಪರೀಕ್ಷೆಗೆ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದಾಗ”ನಾನು ಹೊರಗೆ ಕಾಯುತ್ತಿದ್ದ ನನ್ನ ತಂದೆಯ ಬಳಿ ಅಳುತ್ತಾ ಹೋದೆ. ಅಂತಿಮವಾಗಿ, ಪರೀಕ್ಷೆಗಳ ನಿಯಂತ್ರಕರು ನಾನು ಪ್ಯಾಂಟ್ ಧರಿಸಿದರೆ ನಾನು ಪರೀಕ್ಷೆಯನ್ನು ತೆಗೆದುಕೊಳ್ಳಬಹುದು ಎಂದು ಹೇಳಿದರು. ಹಾಗಾಗಿ ನನ್ನ ತಂದೆ ಅದನ್ನು ಖರೀದಿಸಲು ಮಾರುಕಟ್ಟೆಗೆ ಧಾವಿಸಿದರು “ಎಂದು ಅವರು ಹೇಳಿದ್ದಾಳೆ.
ಆಕೆಯ ತಂದೆ ಬಾಬುಲ್ ತಮುಲಿ ಸುಮಾರು 8 ಕಿಮೀ ದೂರದಲ್ಲಿರುವ ಮಾರುಕಟ್ಟೆಯಿಂದ ಟ್ರೌಸರ್ ತರಲು ಹೋದರು. ಆಗ ಅವರಿಗೆ ಸಮಸ್ಯೆ ಬಗೆಹರಿದಿದೆ ಎಂದು ಹೇಳಿದರು: ಯಾಕೆಮದರೆ ಜೂಬ್ಲಿಗೆ ಕಾಲುಗಳನ್ನು ಮುಚ್ಚಿಕೊಳ್ಳಲು ಪರದೆ ಬಟ್ಟೆ ನೀಡಿ ಸುತ್ತಿಕೊಳ್ಳಲು ಸೂಚಿಸಿ ನಂತರ ಪರೀಕ್ಷೆ ಬರೆಯಲು ಅನುಮತಿಸಲಾಯಿತು ಎಂದುಜಬ್ಲಿ ಹೇಳಿದ್ದಾಳೆ.
ನನಗೆ ಮೂಲಭೂತ ಸಾಮಾನ್ಯ ಜ್ಞಾನವಿಲ್ಲದಿದ್ದರೆ, ನಾನು ಜೀವನದಲ್ಲಿ ಹೇಗೆ ಯಶಸ್ವಿಯಾಗುತ್ತೇನೆ. ಇದು ಸಂಪೂರ್ಣವಾಗಿ ಅನ್ಯಾಯವಾಗಿದೆ ಎಂದು ಜೂಬ್ಲಿ ಹೇಳಿದರು. “ಅವರು (ಪರೀಕ್ಷೆ ನಡೆಸುವವರು) ಕೋವಿಡ್ ಪ್ರೋಟೋಕಾಲ್‌ಗಳು, ಮಾಸ್ಕ್‌ ಅಥವಾ ನನ್ನ ಶರೀದರ ತಾಪಮಾನವನ್ನು ಸಹ ಪರಿಶೀಲಿಸಲಿಲ್ಲ … ಆದರೆ ಅವರು ನಾನು ಧರಿಸಿದ ಶಾರ್ಟ್ಸ್‌ ಬಗ್ಗೆ ಪರಿಶೀಲಿಸಿದರು” ಎಂದು ಅವರು ಹೇಳಿದರು.
ಇದನ್ನು “ನನ್ನ ಜೀವನದ ಅತ್ಯಂತ ಅವಮಾನಕರ ಅನುಭವ” ಎಂದು ಕರೆದ ಜುಬ್ಲಿ, ಈ ಪ್ರಸಂಗದ ಬಗ್ಗೆ ಅಸ್ಸಾಂ ಶಿಕ್ಷಣ ಸಚಿವ ರಾನೋಜ್ ಪೆಗು ಅವರಿಗೆ ಬರೆಯಲು ಯೋಜಿಸಿದ್ದಾಗಿ ಹೇಳಿದರು.ಜುಬ್ಲಿಯು ತನ್ನ ಪರೀಕ್ಷೆಯನ್ನು ಪೂರ್ಣಗೊಳಿಸಲು ಸಾಧ್ಯವಾದರೂ ಸಂಪೂರ್ಣ ಒತ್ತಡ” ಅನುಭವಿಸುವಂತಾಯಿತು ಎಂದು ಅವಳು ಹೇಳಿದಳು.
ಜಿಐಪಿಎಸ್‌ನ ಪ್ರಿನ್ಸಿಪಾಲ್ ಡಾ ಅಬ್ದುಲ್ ಬಾಕೀ ಅಹ್ಮದ್ ಅವರು ತಾನು ಕಾಲೇಜಿನಲ್ಲಿ ಇರಲಿಲ್ಲ ಆದರೆ “ಇಂತಹ ಘಟನೆ ಸಂಭವಿಸಿದೆ ಎಂದು ತಿಳಿದಿತ್ತು” ಎಂದು ಹೇಳಿದ್ದಾರೆ.
ಪರೀಕ್ಷೆಯೊಂದಿಗೆ ನಮಗೆ ಯಾವುದೇ ಸಂಬಂಧವಿಲ್ಲ – ನಮ್ಮ ಕಾಲೇಜನ್ನು ಕೇವಲ ಪರೀಕ್ಷೆಯ ಸ್ಥಳವಾಗಿ ನೇಮಿಸಲಾಗಿದೆ. ಇನ್ವಿಜಿಲೇಟರ್ ಕೂಡ ಹೊರಗಿನಿಂದ ಬಂದವರು. ಶಾರ್ಟ್ಸ ಬಗ್ಗೆ ಯಾವುದೇ ನಿಯಮವಿಲ್ಲ, ಆದರೆ ಪರೀಕ್ಷೆಯ ಸಮಯದಲ್ಲಿ, ಶಿಸ್ತನ್ನು ಕಾಪಾಡಿಕೊಳ್ಳುವುದು ಮುಖ್ಯ ಎಂದು ಪೋಷಕರು ಕೂಡ ಚೆನ್ನಾಗಿ ತಿಳಿದುಕೊಳ್ಳಬೇಕು, ”ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ದೆಹಲಿ ವಕ್ಫ್ ಬೋರ್ಡ್ ಹಗರಣ : 9 ತಾಸುಗಳ ವಿಚಾರಣೆಯ ನಂತರ ಎಎಪಿ ನಾಯಕ ಅಮಾನತುಲ್ಲಾ ಖಾನ್ ಬಂಧಿಸಿದ ಇ.ಡಿ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement